ವನ ರಾಮ
ಹಿಂಡೂಮನೆ ರಾಮಪ್ಪನವರು ದೊಡ್ಡ ಜಮೀನ್ದಾರಿ ಕುಟುಂಬದ ಹಿನ್ನೆಲೆಯವರು. ಬಹಳ ಜಮೀನುಗಳು ಗೇಣಿಯಲ್ಲಿ ಕೈಬಿಟ್ಟಿತು. ಇರುವುದನ್ನು...

ಹಿಂಡೂಮನೆ ರಾಮಪ್ಪನವರು ದೊಡ್ಡ ಜಮೀನ್ದಾರಿ ಕುಟುಂಬದ ಹಿನ್ನೆಲೆಯವರು. ಬಹಳ ಜಮೀನುಗಳು ಗೇಣಿಯಲ್ಲಿ ಕೈಬಿಟ್ಟಿತು. ಇರುವುದನ್ನು ಸಹೋದರರಿಗೆ ಹಂಚಿ ಪಾಲಿಗೆ ಬಂದ ಎರಡು ಎಕರೆಯಲ್ಲಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಜಮೀನಿನಲ್ಲಿ ಕೃಷಿ ಕುಟುಂಬ ನಿರ್ವಹಣೆಗೆ ಆಯಿತು. ಆದರೆ ಸಮಾಜಕ್ಕೆ ಏನಾದರೂ ಉಳಿಸಿ ಹೋಬಗೇಕು ಎನ್ನುವ ಯೋಚನೆ ಬಂದಾಗ ಹೊಳೆದಿದ್ದು ಔಷಧ ವನ.
ಸಾಗರ ತಾಲೂಕಿನ ಹೊಸಹಳ್ಳಿಯಲ್ಲಿ 1999ರಲ್ಲಿ ಮೂರು ಎಕರೆ ಜಮೀನಿನಲ್ಲಿ ಔಷಧೀಯ ಸಸಿಗಳನ್ನು ನೆಟ್ಟು ಅದಕ್ಕೆ ಭೂತೇಶ್ವರ ಔಷಧ ವನವೆಂದು ನಾಮಕರಣ ಮಾಡಲಾಯಿತು. ಗ್ರಾಮಸ್ಥರ ಸಹಕಾರದೊಂದಿಗೆ ಹಾಗೂ ಅರಣ್ಯ ಇಲಾಖೆ ಕೊಡ ಮಾಡಿದ ಸ್ವಲ್ಪ ಹಣದೊಂದಿಗೆ ತಂತಿ ಬೇಲಿ ನಿರ್ಮಿಸಿ ಪ್ರಾರಂಭದಲ್ಲಿ 50 ಜಾತಿಯ ಸಸಿಗಳನ್ನು ನೆಡಲಾಯಿತು. ಇಂದು ಇಲ್ಲಿರುವ ಗಿಡಗಳ ಜಾತಿಗಳ ಸಂಖ್ಯೆ 600 ಮೀರಿದೆ ಎಂದರೆ ಅದರ ವೈವಿಧ್ಯತೆ ನಿಮಗೆ ಅರಿವಾಗಬಹುದು. ಅಪರೂಪದ ಸಸ್ಯಗಳಾದ ಆನಂಗಿ, ಸರ್ಪಗಂಧ, ಏಕನಾಥ, ಏಕನಾಯಕ, ಬೇಲ, ಹಿಪ್ಪೆ, ರುದ್ರಾಕ್ಷಿ, ಕದಂಬ, ನಾಗಲಿಂಗ, ಭೂತನಾಥ, ಪುತ್ರಜೀವಿ, ರಕ್ತಚಂದನ, ಮರದರಿಶಿನ, ಕೆಂಪು ದೇವದಾರಿ, ಕೆಂಪು ಮತ್ತು ಬಿಳಿ ಮುರುಗಲು, ಬಿಳಿ ಹಾಲವಾಣ, ಬಿಳಿ ಮತ್ತಿಮರ... ಹೀಗೆ ಔಷಧ ಸಸ್ಯಗಳ ಲೋಕವೇ ಅನಾವರಣಗೊಳ್ಳುತ್ತದೆ.
ನೆಟ್ಟ ಸಸ್ಯಗಳಿಗೆ ಬೇಸಿಗೆಯಲ್ಲಿ ನೀರೆರೆಯುವುದು, ಬೇಲಿ ಸರಿಪಡಿಸಿ ಜಾನುವಾರುಗಳಿಂದ ರಕ್ಷಣೆ ಮಾಡುವುದು ಎಲ್ಲಾ ಏಕವ್ಯಕ್ತಿ ಪ್ರದರ್ಶನ. ಇದನ್ನು ಹಲವಾರು ವರ್ಷಗಳಿಂದ ತಪ್ಪದೇ ನಡೆಸಿಕೊಂಡು ಬರುತ್ತಿದ್ದಾರೆ ರಾಮಪ್ಪನವರು.
- ಚೇತನಾ ಹಿಂಡೂಮನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


