ಟ್ರಿಗರ್ ಟ್ರಯಲ್

ಅತ್ಯಾಕರ್ಷಕ ಡೂಮ್, ಸೂರ್... ಸೂರ್ ಎಂದು ಮಜಾ ನೀಡುವ ಸೈಲೆನ್ಸರ್ ಸೌಂಡು, ಒಂದು ಬ್ರೇಕ್ ಅಪ್ಲೈ ಮಾಡಿದರೇ ಸಾಕು ಹಿಂದೆ ಮುಂದೆ ಎರಡು ಚಕ್ರಗಳು ಒಮ್ಮೆಲೆ ನಿಯಂತ್ರಣಗೊಳ್ಳುವಂತಹ ನೂತನ ತಂತ್ರಜ್ಞಾನ...
ಈ ಎಲ್ಲಾ ಆಕರ್ಷಕ ಅಂಶ ಮತ್ತು ತಾಂತ್ರಿಕತೆ ಒಳಗೊಂಡಿರುವ ಬೈಕ್ ಬೇಕಾದಲ್ಲಿ ನೀವು ಹೋಂಡಾ ಕಂಪನಿಯು ಮಾರುಕಟ್ಟೆಗೆ ಬಿಟ್ಟಿರುವ 'ಸಿಬಿ ಟ್ರಿಗರ್' 150 ಸಿಸಿ ಬೈಕ್ ಚಾಯ್ಸ್ ಮಾಡಿಕೊಳ್ಳಿ. ಈ ಹಿಂದೆ ಹೋಂಡಾ ಕಂಪನಿಯು ಹೊರತಂದಿದ್ದ 'ಡ್ಯಾಝ್ಲರ್'ಗೆ ಕೆಲವು ತಿದ್ದುಪಡಿ ತಂದು ಬೈಕ್ ಬಾಡಿಯನ್ನು ಅತ್ಯಾಕರ್ಷಕವಾಗಿ ರೂಪಿಸಿದೆ. ಇದರಿಂದಾಗಿ ರೈಡಿಂಗ್ ಕಂಫರ್ಟ್ ಹೆಚ್ಚುಗೊಳಿಸಿದೆ.
ಈ ಬೈಕ್ ಓಡಿಸಿ ಲೇಖನ ಬರೆಯುವ ಅವಕಾಶ ಸಿಕ್ಕಿದರಿಂದ ಎರಡು ದಿನ ಸತತವಾಗಿ ಇದೇ ಬೈಕ್‌ನಲ್ಲೇ ಸವಾರಿ ಮಾಡಿದೆ. ತೂಕ ಕಡಿಮೆ ಇದ್ದರೂ ಹೆಚ್ಚಿನ ವೇಗದಲ್ಲಿ ಬೈಕ್ ರೈಡಿಂಗ್ ಮಾಡಿದಾಗ ಯಾವುದೇ ವೈಬ್ರೆಟ್ ಆಗುವುದಿಲ್ಲ. ಡೂಮ್ ನೋಡಲು ಪಲ್ಸರ್ 220 ಎನ್‌ಎಸ್ ರೀತಿಯಲ್ಲಿ ಚಿತ್ರಿಸಿರುವುದರಿಂದ ಬೈಕಿನ 'ಫ್ರೆಂಟ್ ವ್ಯೂ' ನಿಮಗೆ ಹೆಚ್ಚಿನ ಲುಕ್ ನೀಡುತ್ತದೆ. ಓಡಿಸುವ ಸಂದರ್ಭದಲ್ಲಿ ಸೈಲೆನ್ಸರ್‌ನಿಂದ ಹೊರಹೊಮ್ಮುವ ಸೌಂಡ್ ರೈಡಿಂಗ್‌ಗೆ ಹೆಚ್ಚಿನ ಮಜಾ ನೀಡಲಿದೆ. ನೀವು ಎಷ್ಟೇ ವೇಗದಲ್ಲಿ ಓಡಿಸಿದರೂ ತತ್‌ಕ್ಷಣದಲ್ಲೇ ನಿಯಂತ್ರಣಕ್ಕೆ ತರಲು ಡಬಲ್ ಡಿಸ್ಕ್ ಬ್ರೇಕ್ ನಿಮಗೆ ಸಹಾಯ ಮಾಡುತ್ತದೆ.
ಸಿಬಿಎಸ್ ತಾಂತ್ರಿಕತೆ
ಭಾನುವಾರ ಕಚೇರಿಗೆ ಬರುವ ಸಂದರ್ಭದಲ್ಲಿ ಮೈಸೂರು ರಸ್ತೆ ಖಾಲಿ ಇದೆ ಎಂದು 90 ಕಿ.ಮೀ. ವೇಗದಲ್ಲಿ ಹೋಗುತ್ತಿದ್ದಾಗ ತಕ್ಷಣವೇ ರಸ್ತೆಯ ಮತ್ತೊಂದು ಬದಿಯಿಂದ ವಾಹನ ಅಡ್ಡ ಬಂತು. ತಕ್ಷಣ ಬ್ಯಾಕ್ ಬ್ರೇಕ್ ಮಾತ್ರವೇ ಅಪ್ಲೈ ಮಾಡಿದೆ. ತತ್‌ಕ್ಷಣವೇ ಬೈಕ್ ನಿಯಂತ್ರಣಕ್ಕೆ ಬಂತು. ನಂತರ ಬೈಕ್‌ನ ಕ್ಯಾಟ್‌ಲಾಗ್ ತೆಗೆದು ಓದಿದಾಗ ತಿಳಿಯಿತು ಈ ಬೈಕ್‌ನಲ್ಲಿ ಕಾಂಬಿ ಬ್ರೇಕ್ ಸಿಸ್ಟಮ್(ಸಿಬಿಎಸ್) ಇದೆ ಅಂತ. ಈ ಸಿಸ್ಟಮ್‌ನಿಂದ ನೀವು ಒಂದು ಬ್ರೇಕ್ ಅಪ್ಲೈ ಮಾಡಿದರೇ ಸಾಕು ಎರಡು ಚಕ್ರಗಳ ನಿಯಂತ್ರಣವನ್ನು ಸಾಧಿಸಬಹುದು.
ಡಿಸ್ಕ್ ಬ್ರೇಕ್ ವೈಶಿಷ್ಟತೆ ಹೊಂದಿರುವ ಸಿಬಿ ಟ್ರಿಗರ್‌ನಲ್ಲಿ ಮೂರು ವಿವಿಧ ರೀತಿಯ ಮಾಡಲ್ ಬೈಕ್‌ಗಳಿವೆ.
ನಿಮ್ಮ ಇಷ್ಟಾನುಸಾರ ಅಥವಾ ನಿಮ್ಮ ಬಜೆಟ್‌ಗೆ ಹೊಂದುವ ರೀತಿಯ ಬೈಕ್ ನೀವು ಖರೀದಿಸಬಹುದು. ಸಿಂಗಲ್ ಡಿಸ್ಕ್ ಬ್ರೇಕ್‌ನಲ್ಲಿ ಮುಂದಿನ ಚಕ್ರಕ್ಕೆ, ಡಬಲ್ ಡಿಸ್ಕ್ ಬ್ರೇಕ್‌ನಲ್ಲಿ ಎರಡೂ ಚಕ್ರಕ್ಕೂ ಪ್ರತ್ಯೇಕ ಬ್ರೇಕ್‌ಗಳಿರುತ್ತವೆ. ಇದರ ಬದಲಾಗಿ ಕಾಂಬಿ ಡಿಸ್ಕ್ ಬ್ರೇಕ್ ಇರುವ ಬೈಕ್ ಖರೀದಿಸಿದರೇ ಒಂದೇ ಬ್ರೇಕ್ ಒತ್ತುವುದರಿಂದ ಎರಡು ಚಕ್ರಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು.
ಏರ್ ಫಿಲ್ಟರ್
ಈ ಬೈಕ್‌ನಲ್ಲಿ ವಿಸ್‌ಕೋಸ್ ಏರ್ ಫಿಲ್ಟರ್ ಅಳವಡಿಸಿದೆ. ಇದು ಧೂಳಿನ ಕಣಗಳನ್ನು ಹೆಚ್ಚು ನಿಯಂತ್ರಿಸಿ ಎಂಜಿನ್ ಕೂಲ್ ಆಗಿರಲು ಸಹಾಯ ಮಾಡುತ್ತದೆ. ಸಾಂಪ್ರದಾಯಿಕ ಏರ್ ಫಿಲ್ಟರ್‌ಗಳನ್ನು ಪ್ರತಿ 4,000 ಕಿ.ಮೀ.ಗೆ ಕ್ಲೀನ್ ಮಾಡಬೇಕಾಗಿರುತ್ತದೆ ಮತ್ತು ಪ್ರತಿ 12,000 ಕಿ.ಮೀ. ಹೊಸ ಫಿಲ್ಟರ್ ಅನ್ನು ಅಳವಡಿಸಬೇಕಾಗುತ್ತದೆ. ಆದರೆ, ವಿಸ್‌ಕೋಸ್ ಏರ್ ಫಿಲ್ಟರ್ ಅಳಡಿಸಿರುವುದರಿಂದ ನೀವು 16,000 ಕಿ.ಮೀ. ಓಡಿ ನಂತರವಷ್ಟೇ ಹೊಸದನ್ನು ಅಳವಡಿಸಬಹುದು.
ಫೀಚರ್ಸ್ ಏನೇನು?
* ಡಿಜಿಟಲ್ ಮೀಟರ್
* ಮೀಟರ್‌ನಲ್ಲೇ ಸಮಯ ತೋರಿಸುವ ಗಡಿಯಾರ
* ಮೈಲೇಜ್ 60 ಕಿ.ಮೀ. ಪ್ರತಿ ಲೀಟರ್
* ಮೋನೋ ಸಸ್ಸ್‌ಪೆನ್ಷನ್
* ಟ್ಯೂಬ್ ಲೆಸ್ ಟೈಯರ್
* ಬಣ್ಣ: ಗ್ರೀನ್ ಮೆಟಾಲಿಕ್, ಸಿಯೆನಾ ರೆಡ್, ಬ್ಲಾಕ್
* 137 ಕೆ.ಜಿ. ತೂಕ
* ಮುಂದಿನ ಡಿಸ್ಕ್ ಬ್ರೇಕ್ ಬೈಕ್ ರು. 81,920 (ಆನ್‌ರೋಡ್)
* ಎರಡು ಡಿಸ್ಕ್ ಬ್ರೇಕ್ ಬೈಕ್ ರು. 85, 414
* ಸಿಬಿಎಸ್ ಬೈಕ್ 92, 984
- ದೇವರಾಜ್ ಎಲ್.
djtrupti@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


