ವಾಹನ

ನಿಖರ ಮಾಹಿತಿ

ಚಿನ್ನಕ್ಕೂ, ಭೂಮಿಗೂ ಪೈಪೋಟಿ. ದರದ ವಿಚಾರದಲ್ಲಿ ಯಾರು ಬೇಗ ಗಗನ ಚುಂಬಿಸುತ್ತಾರೆ ಎಂದು....

ನಿಖರ ಮಾಹಿತಿ
Published On :

ಚಿನ್ನಕ್ಕೂ, ಭೂಮಿಗೂ ಪೈಪೋಟಿ. ದರದ ವಿಚಾರದಲ್ಲಿ ಯಾರು ಬೇಗ ಗಗನ ಚುಂಬಿಸುತ್ತಾರೆ ಎಂದು. ಹೀಗಿರುವಾಗ ರಿಯಲ್ ಎಸ್ಟೇಟ್ ಉದ್ಯಮದವರಿಗೆ ಚೂರು ನೆಲ ಸಿಕ್ಕರೆ ಬಿಟ್ಟಾರೆಯೇ? ಗ್ರಾಹಕರನ್ನು ಸೆಳೆಯಲು 'ಅಂಥ ಸೌಲಭ್ಯ ಕೊಡ್ತೀವಿ, ಇಂಥ ಫೆಸಿಲಿಟಿ ಇದೆ, ವಿಶಾಲವಾದ ಪಾರ್ಕ್ ಇದೆ' ಇತ್ಯಾದಿ ಇತ್ಯಾದಿ ಭರವಸೆಗಳನ್ನು ನೀಡುತ್ತಾರೆ.
ಬಡಾವಣೆ ನಕ್ಷೆಯಲ್ಲಿ ಅವೆಲ್ಲವೂ ಇರುತ್ತವೆ ಕೂಡ. ನೋಡನೋಡತ್ತಿದ್ದಂತೆ ಆ ನಿವೇಶನಗಳಲ್ಲಿಯೂ ಕಟ್ಟಡಗಳು ಎದ್ದು ನಿಲ್ಲುತ್ತವೆ. ಬಿಲ್ಡರ್ ಸದ್ದೇ ಇಲ್ಲದೆ ಆ ಜಾಗಗಳನ್ನು ಯಾರಿಗೋ ಮಾರಿರುತ್ತಾನೆ. ರಾಜ್ಯದ ಯಾವುದೇ ಮೂಲೆಗೆ ಹೋದರೂ ಕೇಳುವ, ಕಾಣುವ ಸಾಮಾನ್ಯ ಸಂಗತಿ ಇದು.
ಎಲ್ಲ ಕ್ಷೇತ್ರಗಳಲ್ಲಿಯೂ 'ಅಪವಾದ' (Exception)ಗಳಿರುತ್ತವೆ ಎನ್ನುವುದಕ್ಕೆ ನಿಖರ ಗ್ರೂಪ್ ಉತ್ತಮ ಉದಾಹರಣೆ. ಇದು ಕೂಡ ರಿಯಲ್ ಎಸ್ಟೇಟ್ ವಹಿವಾಟನ್ನೇ ನಡೆಸುವ ಸಂಸ್ಥೆ. ಮಂಡ್ಯ, ಸಕಲೇಶಪುರ, ಆಂಧ್ರಪ್ರದೇಶದ ಪೆನುಕೊಂಡ ಮತ್ತು ನಾರಾಯಣಪುರ (ಇವು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 110 ಕಿ.ಮೀ. ದೂರದಲ್ಲಿವೆ), ಚಲ್ಲಪಲ್ಲಿ, ಗೋರಂಟ್ಲಗಳಲ್ಲಿ ನಿಖರ ತನ್ನ ಚಟುವಟಿಕೆಗಳನ್ನು ನಡೆಸುತ್ತಿದೆ. ಬೇರೆ ರಿಯಲ್ ಎಸ್ಟೇಟ್ ಸಂಸ್ಥೆಗಳಿಂದ ಇದು ಹೇಗೆ ಭಿನ್ನ ಎಂದರೆ ಇವರು ಅಭಿವೃದ್ಧಿಪಡಿಸುವುದು 'ಫಾರ್ಮ್ ಲ್ಯಾಂಡ್'ಗಳನ್ನು. ನಗರದ ಜಂಜಾಟದಿಂದ ಬೇಸತ್ತು ನೆಮ್ಮದಿಯ ನಿವೃತ್ತ ಜೀವನ ಕಳೆಯಲು ಬಯಸುವವರು ಹೂಡಿಕೆ ಮಾಡಲು ಪ್ರಶಸ್ತ ತಾಣಗಳು.
ನಿವೇಶನ ಯಾವುದೇ ಅಳತೆಯದ್ದಾಗಿರಲಿ; ತೆಂಗು, ಮಾವು, ಶ್ರೀಗಂಧ, ಸಿಲ್ವರ್ ಓಕ್, ಕಾಫಿ, ಕಾಳುಮೆಣಸು ಇತ್ಯಾದಿ ಸಸಿಗಳನ್ನು ಉಚಿತವಾಗಿ ನೀಡುತ್ತಾರೆ. ಮಾತ್ರವಲ್ಲ, ಅವುಗಳನ್ನು ನಿವೇಶನದ ಸುತ್ತಲೂ ನೆಟ್ಟು, ಅಚ್ಚುಕಟ್ಟಾಗಿ ಬೇಲಿ ಹಾಕಿ, ನಿತ್ಯ ನೀರುಣ್ಣಿಸಿ ಐದು ವರ್ಷ ಕಾಲ ಉಚಿತ ಆರೈಕೆ ಮಾಡುತ್ತಾರೆ. ಆ ನಂತರವೂ ಕಾಳಜಿ ವಹಿಸುತ್ತಾರೆ, ಆದರೆ ಅದಕ್ಕೆ ತುಸು ಶುಲ್ಕವಿದೆ. ನಿವೇಶನದ ಕನಿಷ್ಠ ಅಳತೆ ಎಂದರೆ 3500 ಚದರ ಅಡಿ. ಹೀಗಾಗಿ ಎಷ್ಟೇ ವಿಶಾಲವಾಗಿ ಮನೆ ಕಟ್ಟಿಕೊಂಡರೂ ಸುತ್ತಮುತ್ತ ಬೇಕಾದಷ್ಟು ಜಾಗ ಇರುತ್ತದೆ. ಹಿತ್ತಿಲು, ಹೂದೋಟ, ಬೇಕಿದ್ದರೆ ಪುಟ್ಟ ತೋಟವನ್ನೇ ಮಾಡಿಕೊಳ್ಳಬಹುದು. ನೀರಂತೂ ಧಾರಾಳವಾಗಿ ಸಿಗುತ್ತದೆ. ನಿವೇಶನದ ಅಂಚಿನಲ್ಲಿ ಬೆಳೆದು ನಿಲ್ಲುವ ಮರಗಳು. ಇವೆಲ್ಲ ಸೇರಿ ಫಾರ್ಮ್ ಹೌಸ್ ಅನುಭವವನ್ನೇ ನೀಡುತ್ತವೆ. ಬೆಲೆ ಮಾರುಕಟ್ಟೆ ದರಕ್ಕಿಂತ ತೀರಾ ಕಡಿಮೆ ಎನ್ನುವುದು ಗಮನಿಸಬೇಕಾದ ಮತ್ತೊಂದು ಅಂಶ.
ಅದೆಲ್ಲ ಬಿಡಿ. ಯಾವುದೇ ಪ್ರಾಜೆಕ್ಟ್ನಲ್ಲಿ ನಿವೇಶನ ಕೊಂಡರೂ ನಿಮಗೊಂದು ಬಂಪರ್ ಬೋನಸ್. ಅದು ಕ್ಲಬ್ ಸದಸ್ಯತ್ವ. ಅದಕ್ಕೆ ಯಾವುದೇ ಶುಲ್ಕ ನೀಡಬೇಕಿಲ್ಲ. ಸದಸ್ಯರಿಗಾಗಿಯೇ ಮಂಡ್ಯದ ಬಿ. ಹೊಸೂರಿನಲ್ಲಿ, ವಿ.ಸಿ. ನಾಲೆ ಪಕ್ಕದಲ್ಲೇ 30 ಎಕರೆಯಲ್ಲಿ 'ನಿಖರ ಗಾರ್ಡನ್ಸ್' ಇದೆ. ಇಲ್ಲಿ ನಿವೇಶನಗಳೂ ಇವೆ, ರೆಸಾರ್ಟ್ ಮಾದರಿ ಸೌಲಭ್ಯಗಳೂ ಇವೆ. ಹವಾನಿಯಂತ್ರಿತ ಕಾಟೇಜ್ಗಳು, ಕ್ಲಬ್ ಹೌಸ್, ಟೆಂಟ್ ಹೌಸ್, ಈಜುಕೊಳ, ಮಸಾಜ್ ಪಾರ್ಲರ್, ಜಿಮ್, ಬಹುಉದ್ದೇಶದ ಸಭಾಂಗಣ, ಬಾಸ್ಕೆಟ್ ಬಾಲ್ ಮತ್ತು ಷಟಲ್ ಕಾಕ್ ಕ್ರೀಡಾಂಗಣಗಳು, ಸ್ನೂಕರ್ ಎಲ್ಲವೂ ಇವೆ. ಜತೆಗೆ ರುಚಿಕಟ್ಟಾದ ಭೋಜನ. ಕೃಷಿ ಭೂಮಿಯಾಗಿದ್ದ ಈ ಪ್ರದೇಶವನ್ನು ಹಾಗೆಯೇ ಉಳಿಸಿಕೊಂಡು ನಿವೇಶನಗಳನ್ನು ರಚಿಸಲಾಗಿದೆ, ರೆಸಾರ್ಟ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅಲ್ಲಲ್ಲಿ ತೆಂಗಿನಮರಗಳಿಗೆ ಜೋಲಿಗಳನ್ನು ಕಟ್ಟಲಾಗಿದ್ದು, ಎಲ್ಲಿ ಬೇಕಾದರೂ ಆರಾಮವಾಗಿ ಪವಡಿಸಿ ವಿರಮಿಸಬಹುದು. ಮಕ್ಕಳಿಗೆ ಮುದ ನೀಡುವ ವಿನೂತನ ರೀತಿಯ ಬೇಕಾದಷ್ಟು ಆಟಿಕೆಗಳಿವೆ. ಇಲ್ಲಿ ಹೊರಗಿನವರಿಗೆ ಪ್ರವೇಶವಿಲ್ಲ. ಸದಸ್ಯರಿಗೆ ಮಾತ್ರ. ಅವರು ಕಾಟೇಜ್ ಅಥವಾ ಟೆಂಟ್ಹೌಸ್ಗಳಲ್ಲಿ ವಾಸ್ತವ್ಯ ಮಾಡುವುದಾದರೆ ರು. 1500 ಶುಲ್ಕ. ಮಸಾಜ್ ಪಾರ್ಲರ್ ಹೊರತುಪಡಿಸಿ ಉಳಿದ ಸೇವೆಗಳು ಉಚಿತ.  'ಇದೆಲ್ಲ ಬೊಗಳೆ ಇರಬಹುದು' ಎನ್ನುವ ಅನುಮಾನ ನಿಮ್ಮಲ್ಲಿ ಮೂಡಿದರೆ ಅಚ್ಚರಿ ಇಲ್ಲ ಬಿಡಿ. ನಿಖರದಲ್ಲಿ ಇರುವವರು ಯಾರೂ ವ್ಯಾಪಾರಿ ಮನೋಭಾವದವರಲ್ಲ. ಸಾರ್ವಜನಿಕ ವಲಯದ ಬ್ಯಾಂಕ್ಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳ ನಿವೃತ್ತ ನೌಕರರು, ಅಧಿಕಾರಿಗಳು ಸೇರಿ 1997ರಲ್ಲಿ ಸ್ಥಾಪಿಸಿಕೊಂಡ ಸಂಸ್ಥೆ 'ನಿಖರ ಭಾರತ್ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಟ್'. ಇದು ಪಬ್ಲಿಕ್ ಲಿಮಿಟೆಟ್ ಕಂಪನಿ. ಸಂಸ್ಥೆ ಅಧ್ಯಕ್ಷ ಕೋದಂಡರಾಮ ಪಿ. ಬಿಬಿಎಂ ಮತ್ತು ಕಾನೂನು ಪದವೀಧರ. ಭಾರತೀಯ ಸ್ಟೇಟ್ ಬ್ಯಾಂಕ್ನಲ್ಲಿ ವಿವಿಧ ಹುದ್ದೆಗಳಲ್ಲಿ ಎರಡು ದಶಕಗಳ ಸುದೀರ್ಘ ಸೇವೆ ಸಲ್ಲಿಸಿದ ಅನುಭವಿ. ನ್ಯಾಯಸಮ್ಮತ ವ್ಯಾಪಾರದಲ್ಲಿ ಅವರ ನಂಬಿಕೆ. ಗ್ರಾಹಕರ ವಿಶ್ವಾಸಕ್ಕೆ ಮೋಸ ಮಾಡಬಾರದು ಎನ್ನುವುದು 'ನಿಖರ'ಕ್ಕೆ ಕಾಲಿಡುವ ಮೊದಲು ಮಾಡಿಕೊಂಡಿದ್ದ ಸಂಕಲ್ಪ. ಇವತ್ತಿನವರೆಗೂ ಅದರಂತೆಯೇ ನಡೆದುಕೊಂಡು ಬರುತ್ತಿದ್ದಾರೆ. ಹೀಗಾಗಿಯೇ ರಿಯಲ್ ಎಸ್ಟೇಟ್ನ ಸಾಂಪ್ರದಾಯಿಕ ಪರಿಕಲ್ಪನೆ ಅಳಿಸಿ ಹೊಸ ಭಾಷ್ಯ ಬರೆಯಲು ಸಾಧ್ಯವಾದದ್ದು.
ಆಸಕ್ತರಿಗೆ ಉಚಿತವಾಗಿ ಸೈಟ್ ವಿಸಿಟ್ ಮಾಡುವ ಅವಕಾಶ ಇದೆ. ಮಾಹಿತಿಗೆ: (080) 26615316/ 26671006. ಮಿಂಚಂಚೆ: nikharagroup@gmail.com  www.nikharagroup.biz

- ಚಿರಾಗ್ ಹೆಗಡೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.