ವಾಹನ

ಎಕ್ಸ್‌ಯುವಿ ಡಬ್ಲ್ಯು 4

ಎಕ್ಸ್‌ಯುವಿ ಡಬ್ಲ್ಯು 4
Published On :

ಮಹೀಂದ್ರಾ ಕಂಪನಿ ಅತ್ಯಂತ ಕಡಿಮೆ ದರಕ್ಕೆ ಉತ್ತಮ ಸವಲತ್ತುಗಳನ್ನು ಹೊಂದಿರುವ ಎಕ್ಸ್‌ಯುವಿ ಡಬ್ಲ್ಯು 4 ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಇತ್ತೀಚೆಗಷ್ಟೇ ಟಾಟಾ ಕಂಪನಿ ಸಫಾರಿ ಸ್ಟಾರ್ಮ್‌ನ ಎಕ್ಸ್‌ಫ್ಲೋರರ್ ಮಾದರಿಯನ್ನು ರು. 10.80 ಲಕ್ಷಕ್ಕೆ ಪರಿಚಯಿಸಿದ್ದರೆ, ಅದಕ್ಕೆ ಪೈಪೋಟಿ ನೀಡುವಂತೆ ಮಹೀಂದ್ರಾ ಕಂಪನಿ ಎಕ್ಸ್‌ಯುವಿ ಡಬ್ಲ್ಯು 4 ಮಾದರಿಯನ್ನು ರು. 10.83 ಲಕ್ಷ ದರವನ್ನೇ ನಿಗದಿಪಡಿಸಿದೆ. ದರ ಕಡಿಮೆಯಾದರೂ ಮಡಚಬಹುದಾದ ಸೀಟುಗಳು, ಎರಡು ಎಸಿ, ಬಟನ್ ಮೂಲಕನೇ ತೆರೆಯುವ ಮತ್ತು ಮುಚ್ಚುವ ಸೈಡ್ ಮಿರರ್‌ಗಳು, ಎಲ್‌ಇಡಿ ಡೇಲೈಟ್, ಎಂಪಿ3 ಪ್ಲೇಯರ್, ಬೇಕಾದ ಹಾಗೆ ಆಡ್ಜಸ್ಟ್ ಮಾಡಬಹುದಾದ ಚಾಲಕನ ಸೀಟು, ನಾಲ್ಕೂ ಚಕ್ರಕ್ಕೆ ಡಿಸ್ಕ್‌ಬ್ರೇಕ್, ಎಬಿಎಸ್- ಇಬಿಡಿ ಮುಂತಾದ ಸೌಲಭ್ಯಗಳನ್ನು ಈ ಮಾದರಿಯಲ್ಲೂ ಉಳಿಸಿಕೊಂಡಿರುವುದರಿಂದ ಗ್ರಾಹಕರನ್ನು ಬಲವಾಗಿ ಆಕರ್ಷಿಸುವುದು ಗ್ಯಾರಂಟಿ. ಮಹೀಂದ್ರಾ ಕಂಪನಿಯ ಎಕ್ಸ್‌ಯುವಿ ಈಗಾಗಲೇ ಗ್ರಾಹಕರನ್ನು ಆಕರ್ಷಿಸಿದ್ದು, 74,000 ಕಾರುಗಳ ಮಾರಾಟವಾಗಿವೆ. ಹೊಸ ಮಾದರಿಯ ಎಕ್ಸ್‌ಯುವಿಯಲ್ಲಿ ಮಳೆ ಬಂದಕೂಡಲೇ ಆರಂಭವಾಗುವ ವೈಪರ್ಸ್, ಟಚ್‌ಸ್ಕ್ರೀನ್ ಮೂಸಿಕ್ ಸಿಸ್ಟಂ, ಜಿಪಿಎಸ್- ನೇವಿಗೇಷನ್ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್ ಮುಂತಾದ ಕೆಲವು ಅತ್ಯಾಧುನಿಕ ಸೌಲಭ್ಯಗಳನ್ನು ನೀಡಲಾಗಿಲ್ಲ. ಆದರೆ, ಮಾರಾಟ ಬೆಲೆ ಮತ್ತು ಇರುವ ಸೌಲಭ್ಯಗಳನ್ನು ಗಮನಿಸಿದರೆ ನಿಸಾರ್ ಟೆರಾನೊ ಮತ್ತು ರೇನೋ ಡಸ್ಟರ್‌ಗೆ ಪೈಪೋಟಿ ನೀಡುವ ಎಲ್ಲ ಲಕ್ಷಣಗಳಿವೆ. ಅವುಗಳಿಗಿಂತ ದೊಡ್ಡ ಕಾರು ಕೂಡ ಹೌದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.