ಹೊಂಡಾ ಜಾಝ್ ನಿಂತಿತು, ಮುಂದೆ...?

ಹೊಂಡಾ ಕಂಪನಿಯ ಆಕರ್ಷಕ ಮಾದರಿಗಳಲ್ಲಿ ಒಂದಾಗಿದ್ದ, ಸಾಕಷ್ಟು ಜನಪ್ರಿಯವೂ ಆಗಿದ್ದ ಜಾಝ್ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸಿದೆ. ಮಾರಾಟಗಾರರು ಕೂಡ ಹೊಸದಾಗಿ ಜಾಝ್ ಕಾರುಗಳ ಬುಕಿಂಗ್ ಸ್ಥಗಿತಗೊಳಿಸಿದ್ದಾರೆ. ಈವರೆಗೆ ಯಾರು ಕಾರನ್ನು ಬುಕ್ ಮಾಡಿದ್ದಾರೋ ಅವರಿಗೆ ಜಾಝ್ ಕಾರು ನೀಡುವುದಾಗಿ ಕಂಪನಿ ಹೇಳಿದೆ.
2011ರಲ್ಲಿ ಹೊಂಡಾ ಕಂಪನಿ ಜಾಝ್ ಸೇರಿದಂತೆ ಕೆಲವು ಕಾರುಗಳ ದರ ಕಡಿತ ಮಾಡಿತ್ತು. ಬಳಿಕ ಜಾಝ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ದರ ಕಡಿತದಿಂದ ಕಂಪನಿಗೆ ನಷ್ಟವಾಗುತ್ತಿತ್ತು. ಇದೇ ಕಾರಣಕ್ಕೆ ಜಾಝ್ ಉತ್ಪಾದನೆ ಸ್ಥಗಿತಗೊಳಿಸಲು ನಿರ್ಧರಿಸಲಾಯಿತು ಎನ್ನಲಾಗುತ್ತಿದೆ. ಇನ್ನೊಂದು ಮೂಲದ ಪ್ರಕಾರ ಹೊಂಡಾ 'ಅಮೇಝ್' ಎಂಬ ಹೊಸ ಕಾರನ್ನು ಮಾರುಕಟ್ಟೆಗೆ ಬಿಡಲು ಸಿದ್ಧವಾಗಿದೆ. ಮೊದಲ ಬಾರಿಗೆ ಡೀಸೆಲ್ ಎಂಜಿನ್ ಅಳವಡಿಸಲೂ ನಿರ್ಧರಿಸಿದೆ. ಹೊಸ ಕಾರಿನ ಉತ್ಪಾದನೆಗೆ ಅನುಕೂಲ ಮಾಡಿಕೊಡಲು ಜಾಝ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ ಎಂದೂ ಹೇಳಲಾಗುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಗ್ರಾಹಕರಿಂದ ಬೇಡಿಕೆ ಹೆಚ್ಚಿದ್ದರೂ ತಿಂಗಳಿಗೆ 400 ಜಾಝ್ ಕಾರುಗಳನ್ನು ಮಾತ್ರ ನೀಡಲಾಗುತ್ತಿತ್ತು. ಇದರಿಂದಾಗಿ ಗ್ರಾಹಕರು ಜಾಝ್‌ಗಾಗಿ ಸಾಕಷ್ಟು ಕಾಯುವಂತಾಗಿತ್ತು. ಆದರೆ ಹೊಂಡಾ ಸಿವಿಕ್‌ನಂತೆ ಜಾಝ್ ಉತ್ಪಾದನೆಯನ್ನು ಕಾಯಂ ಸ್ಥಗಿತಗೊಳಿಸುವುದಿಲ್ಲ. ಕೆಲಸಮಯದ ನಂತರ ಮತ್ತೆ ಹೊಸ ಅವತಾರದಲ್ಲಿ ಬರಲಿದೆ ಎಂದು ಕಂಪನಿ ಮೂಲಗಳು ಹೇಳುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


