ಮತ್ತೆ ಬಂತು ಡಟ್ಸನ್

ಈಗಾಗಲೇ ಸಾಕಷ್ಟು ಕಾರುಗಳಿಂದ ತುಂಬಿ ಹೋಗಿರುವ ಸಣ್ಣ ಕಾರುಗಳ ವಿಭಾಗಕ್ಕೆ ಮತ್ತೊಂದು ಸೇರ್ಪಡೆಯಾಗಿದೆ.
ನಿಸಾನ್ ಸಂಸ್ಥೆಯ ಅಂಗವಾದ ಮತ್ತು ಕಡಿಮೆ ದರದ ಕಾರುಗಳನ್ನು ಮಾರುಕಟ್ಟೆಗೆ ಬಿಡುವ ಸಂಸ್ಥೆಯಾದ ಡಟ್ಸನ್ ಸಂಸ್ಥೆ 'ಗೋ' ಹೆಸರಿನ ಸಣ್ಣ ಕಾರನ್ನು ಬಿಡುಗಡೆ ಮಾಡಿದೆ. ವಿಚಿತ್ರವೆಂದರೆ ಬಿಡುಗಡೆ ಮಾಡಿದ ತಕ್ಷಣ ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ದೊರೆಯುತ್ತಿಲ್ಲ. ಬದಲಾಗಿ 2014ರಿಂದ ಈ ಕಾರು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಈ ಕಾರನ್ನು 4 ಲಕ್ಷ ಒಳಗಿನ ದರದಲ್ಲಿ ಮಾರಾಟ ಮಾಡಲು ಕಂಪನಿ ನಿರ್ಧರಿಸಿದೆ.
ಸುಮಾರು 32 ವರ್ಷಗಳ ಹಿಂದಿನವರೆಗೂ ಡಟ್ಸನ್ ಕಾರುಗಳು ಭಾರತದಲ್ಲಿ ಸಿಗುತ್ತಿದ್ದವಂತೆ. ಆ ಮೇಲೆ ಈ ಕಂಪನಿ ಭಾರತದಲ್ಲಿ ಕಾರುಗಳ ಉತ್ಪಾದನೆ ಮತ್ತು ಮಾರಾಟ ನಿಲ್ಲಿಸಿತ್ತು.
ಸಣ್ಣ ಕಾರುಗಳ ಒಳಾಂಗಣ ಶೈಲಿಯಲ್ಲಿ ಡಟ್ಸನ್ ಗೋ ಒಂದು ಭರ್ಜರಿ ಬದಲಾವಣೆ ಮಾಡಿದೆ. ಕಾರಿನ ಮುಂಭಾಗದ ಸೀಟಿನಲ್ಲಿ ಬಹುತೇಕ ಎಲ್ಲ ಕಾರುಗಳು ಕೇವಲ 2 ಸೀಟುಗಳನ್ನು ಮಾತ್ರ ನೀಡುತ್ತವೆ. ಹಳೆಯ ಅಂಬಾಸಿಡರ್ ಕಾರನ್ನು ಹೊರತು ಪಡಿಸಿದರೆ ಬೇರೆ ಯಾವುದೇ ಕಾರಿನಲ್ಲಿ ಮುಂಭಾಗದಲ್ಲಿ ಮೂರು ಜನ ಕೂರಲು ಸಾಧ್ಯವಿಲ್ಲ. ಆದರೆ ಡಟ್ಸನ್ ಗೋ ಕಾರಿನಲ್ಲಿ ಮುಂಭಾಗದಲ್ಲಿ ಮೂರು ಮಂದಿ ಕುಳಿತುಕೊಳ್ಳಲು ಅವಕಾಶವಾಗುವಂತೆ ಬೆಂಚ್ ಸೀಟು ಅಳವಡಿಸಲಾಗಿದೆ. ಅಲ್ಲದೇ ಗೇರ್ ಕೊಂಚ ಮುಂಭಾಗದಲ್ಲಿಡಲಾಗಿದೆ.
ಭಾರತದಲ್ಲಿ ಕಾರುಗಳ ಒಳಗೆ 5 ಜನ ಕುಳಿತುಕೊಳ್ಳಬಹುದಾದರೆ 6-7 ಜನ ಕುಳಿತುಕೊಳ್ಳುತ್ತಾರೆ. ಡಟ್ಸನ್ ಗೋನಲ್ಲಿ ಬಹುಶಃ ಆರಾಮವಾಗಿ 6 ಜನ ಕುಳಿತುಕೊಳ್ಳಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


