ಕಾರ್ ವ್ಯ್ರಾಪ್!

ಕಾರುಗಳ ವಿನ್ಯಾಸ ಬದಲಾಯಿಸಲು, ಹೊಸ ಹೊಸ ಶೈಲಿ, ಬಣ್ಣಗಳಲ್ಲಿ ಕಾರನ್ನು ಬದಲಾಯಿಸುತ್ತ ಸದಾ ಹೊಸತನ ಅನುಭವಿಸಲು, ನೋಡುಗರನ್ನು ಸೆಳೆಯಲು ಬಂದಿದೆ ಹೊಸ ಸಾಧನ.
ಅದರ ಹೆಸರು ಕಾರ್ ವ್ಯ್ರಾಪ್!
ನೀವು ಕಾರಿಗೆ ಹೊಸ ಬಣ್ಣ ಬಳಿಯಬೇಕಿಲ್ಲ. ಇರುವ ಬಣ್ಣ ತೆಗೆಯಬೇಕಿಲ್ಲ. ವಾರಗಟ್ಟಲೆ ಕಾರನ್ನು ಗ್ಯಾರೇಜ್‌ನಲ್ಲಿ ಬಿಡಬೇಕಿಲ್ಲ. ಬದಲಾಗಿ ಒಂದು ದಿನ ಅಥವಾ ಅರ್ಧ ದಿನದಲ್ಲಿ ನಿಮ್ಮ ಕಾರಿನ ಹೊರ ಸ್ವರೂಪ ಬದಲಾಯಿಸಬಲ್ಲ ಅವಕಾಶವಿದು.
ಕಾರ್ ಕೇರ್ ವಿಭಾಗದಲ್ಲಿ ಪ್ರಸಿದ್ಧವಾಗಿರುವ 3ಎಂ ಕಂಪನಿ ಈ ಕಾರ್ ವ್ಯ್ರಾಪ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕಾರಿನ ಓರೆ, ಕೋರೆ, ತಿರುವುಗಳಲ್ಲಿ ಸರಿಯಾಗಿ ಅಂಟಿ ಕುಳಿತುಕೊಳ್ಳಬಹುದು. ಅಲ್ಲದೇ 3 ವರ್ಷದೊಳಗೆ ಯಾವಾಗ ಬೇಕಾದರೂ ಇದನ್ನು ತೆಗೆಯಬಹುದಂತೆ! ಇದರಿಂದಾಗಿ 1-2 ವರ್ಷಕ್ಕೊಮ್ಮೆ ಹಳೆ ವ್ಯ್ರಾಪ್ ತೆಗೆದು ಹೊಸ ವ್ಯ್ರಾಪ್ ಹಾಕುವ ಮೂಲಕ ಕಾರಿಗೆ ಮತ್ತೆ ಹೊಸತನ ನೀಡಬಹುದು. ಅದರ ಸಹಾಯದಿಂದ ಸುಲಭವಾಗಿ ನಿಮ್ಮ ಕಾರಿನ ಸ್ಕ್ರ್ಯಾಚ್‌ಗಳನ್ನು ಕೂಡ ನಿವಾರಿಸಬಹುದು.
ಕಾರ್ ವ್ಯ್ರಾಪ್ ಗಳಲ್ಲಿ ಸಾಕಷ್ಟು ಬಣ್ಣ, ವೈವಿಧ್ಯಮಯ ಫಿನಿಶ್‌ಗಳು ಕೂಡ ಇವೆ. ಆದ್ದರಿಂದ ಗ್ರಾಹಕರಿಗೆ ಸಾಕಷ್ಟು ಆಯ್ಕೆ ಲಭ್ಯವಾಗಲಿದೆ. ಕಾರಿನ ಟಾಪ್, ಕೇವಲ ಬಾನೆಟ್, ಎರಡು ಬಾಗಿಲು ಮಾತ್ರ ಹೀಗೆ ಗ್ರಾಹಕರು ತಮ್ಮ ಕಾರಿನ ಯಾವುದೇ ಭಾಗಕ್ಕೆ ಇದನ್ನು ಅಳವಡಿಸಬಹುದು. ಸಂಪೂರ್ಣ ಕಾರಿಗೆ ಅಳವಡಿಸಲೇಬೇಕೆಂಬ ನಿಯಮವಿಲ್ಲ. ಈ ವ್ಯ್ರಾಪ್ ಗಳು ಉತ್ತಮ ತಂತ್ರಜ್ಞಾನ ಸಹಾಯದಿಂದ ಅಳವಡಿಸುವ ಸಂದರ್ಭದಲ್ಲಿ ಗಾಳಿಯ ಗುಳ್ಳೆಗಳು (ಏರ್‌ಬಬಲ್ಸ್) ಸಿಕ್ಕಿಕೊಳ್ಳದಂತೆ ಮಾಡಲಾಗುವುದು.
ಕೇಸರಿ, ಹಳದಿ, ನೀಲಿ, ಕಪ್ಪು ಹೀಗೆ ವಿವಿಧ ಬಣ್ಣಗಳಲ್ಲಿ ಮತ್ತು ಕಾರ್ಬನ್ ಫೈಬರ್, ಬ್ರೆಶ್ಡ್ ಮೆಟಲ್, ಮ್ಯಾಟ್, ಹೈಗ್ಲೋಸ್, ಸ್ಯಾಟಿನ್ ಫಿನಿಶ್‌ಗಳಲ್ಲಿ ಲಭ್ಯವಿದೆ.
- ವಕ್ರದಂತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


