ಒಂದು ಸೂರು ಸೇವೆ ನೂರು

ಕಾರು ಮಾರಾಟವಾದ ನಂತರದ ಸೇವೆಗಾಗಿ ಉತ್ತಮ ಹೆಸರು ಪಡೆದಿರುವುದು ಮೈ ಟಿವಿಎಸ್ ಸಂಸ್ಥೆ. ಕಳೆದ ಹತ್ತು ವರ್ಷಗಳಿಂದ ಸೇವೆಯನ್ನು ನೀಡುತ್ತಾ ಬಂದಿದೆ. ಇದೀಗ ಬೆಂಗಳೂರಿನಲ್ಲಿ ಕಾರುಗಳ ಸೇವೆಯ ತನ್ನ 4 ನೇ ಮಳಿಗೆಯನ್ನು ಆರಂಭಿಸುವ ಮೂಲಕ ರಾಜ್ಯದ 7ನೇ ಮಳಿಗೆಯನ್ನು ಆರಂಭಿಸಿದಂತಾಗಿದೆ.
ದೇಶದ ಅತಿ ದೊಡ್ಡ ಬಹು ಬ್ರಾಂಡ್ ಕಾರುಗಳ ಸೇವಾ ಘಟಕಗಳ ಜಾಲವನ್ನೇ ಸಂಸ್ಥೆ ಹೊಂದಿದ್ದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ತನ್ನ ನೂತನ ಮಳಿಗೆ ಆರಂಭಿಸಿದೆ. ಅತ್ಯಾಧುನಿಕ ಸೌಲಭ್ಯದ ತನ್ನ ಈ ನೂತನ ಮಳಿಗೆಯಲ್ಲಿ ಎಲ್ಲ ಬ್ರಾಂಡ್‌ಗಳ ಕಾರುಗಳ ದುರಸ್ತಿಯನ್ನು ಕೈಗೊಳ್ಳಲಿದ್ದು ಕೈಗೆಟುಕುವ ದರದಲ್ಲಿ ಗ್ರಾಹಕರನ್ನು ತಲುಪುವ ಉದ್ದೇಶ ಹೊಂದಿದೆ.
ಹೊಸ ಮಳಿಗೆಯು ಒಟ್ಟಾರೆ 25,000 ಚದರ ಅಡಿ ವಿಸ್ತೀರ್ಣವಿದೆ. ಅತ್ಯಾಧುನಿಕ ಸೌಲಭ್ಯ ಹೊಂದಿರುವ ಕಟ್ಟಡದಲ್ಲಿ 19 ಬೇಗಳು, 3ಡಿ ವ್ಹೀಲ್ ಬ್ಯಾಲೆನ್ಸರ್, ಎಂಜಿನ್ ಸ್ಕ್ಯಾನರ್, ಡಸ್ಟ್ ಫ್ರಿ ಪೇಂಟ್ ಬೂತ್, ನೈಟ್ರೋಜನ್ ಇನ್‌ಫ್ಲೇಟರ್, ಎಸಿ ಗ್ಯಾಸ್ ರೀಚಾರ್ಜರ್‌ಗಳಂಥ ಸೌಲಭ್ಯಗಳಿವೆ. ಮೈ ಟಿವಿಎಸ್‌ನ ಇನ್ನೊಂದು ವಿಶೇಷತೆ ಎಂದರೆ ಇದು ಮೌಲ್ಯಾಧಾರಿತ ವಿಸ್ತರಿಸಲಾದ ಸೇವಾ ಸೌಲಭ್ಯವನ್ನು ಕಾರಿನ ಗ್ರಾಹಕರಿಗೆ ನೀಡುತ್ತಿರುವುದು. ಉತ್ಪಾದಕ ಕಂಪನಿಯ ವಾರಂಟಿ ಅವಧಿ ಮುಗಿದ ಬಳಿಕವೂ ಈ ಸೌಲಭ್ಯ ಬಳಸಬಹುದು. ಇದಕ್ಕಾಗಿ ಗ್ರಾಹಕರ ಅನುಕೊಲಕ್ಕೆಂದು 24x7 ತುರ್ತು ಸೇವೆಯೂ ಲಭ್ಯ.
ಸೇವಾ ಮಳಿಗೆಯ ಉದ್ಘಾಟನೆ ಹಿನ್ನೆಲೆಯಲ್ಲಿ ಆರಂಭಿಕ ಕೊಡುಗೆಯಾಗಿ ಮೈ ಟಿವಿಎಸ್ ಕೆಲ ರಿಯಾಯಿತಿಗಳನ್ನು ಪ್ರಕಟಿಸಿದೆ. ಹೊರಾಂಗಣ ಕವಚದ ಪಾಲಿಷಿಂಗ್ ಮತ್ತು ಒಳಾಂಗಣ ಸ್ವಚ್ಛತೆಗಾಗಿ ಶೇ.10ರಷ್ಟು ರಿಯಾಯಿತಿ, ರಸ್ಟ್ ಕೋಟಿಂಗ್ ಮೇಲೆ ಶೇ.15ರಷ್ಟು, ಎಸಿ ಸಂಬಂಧ ದೂರುಗಳಿಗಾಗಿ ಶೇ.29ರಷ್ಟು ರಿಯಾಯಿತಿ ಇದೆ. ಜೊತೆಗೆ ಕಾರ್ಪೊರೇಟ್ ಸಂಸ್ಥೆಗಳಿಗೆ ಮಾನ್ಸೂನ್ ಆಫರ್, ವಾರ್ಷಿಕ ನಿರ್ವಹಣೆ ಆಫರ್‌ಗಳನ್ನು ಪ್ರಕಟಿಸಿದೆ.
ಗುಣಮಟ್ಟದ ಸೇವೆಯೇ ಗುರಿ
ಉದ್ಯಾನ ನಗರಿಯಲ್ಲಿ ನಾಲ್ಕನೇ ಮಳಿಗೆಯನ್ನು ಉದ್ಘಾಟಿಸುವ ಮೂಲಕ ಮೈ ಟಿವಿಎಸ್ ಗ್ರಾಹಕರ ವಿಶ್ವಾಸ ಗಳಿಕೆ ನಮ್ಮ ಗುರಿ ಎಂಬುದನ್ನು ಸಾಬೀತುಪಡಿಸಿದಂತಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಕರ್ನಾಟಕದ ಎರಡನೇ ಹಂತದ ನಗರಗಳಲ್ಲಿ ಸೇವಾ ಕೇಂದ್ರಗಳನ್ನು ವಿಸ್ತರಿಸ ಬಯಸಿದ್ದೇವೆ. ಒಂದೇ ಚಾವಣಿಯಡಿ ಎಲ್ಲ ಸೇವೆ ಒದಗಿಸುವ ಪ್ಯಾಕೇಜ್‌ಗಳನ್ನು ಪರಿಚಯಿಸುತ್ತಿದ್ದೇವೆ. ನಮ್ಮ ನುರಿತ ತಂತ್ರಜ್ಞರು ಬಹು ಬ್ರಾಂಡ್ ಕಾರುಗಳ ಸೇವೆಯನ್ನು ನಿಭಾಯಿಸಲು ಶಕ್ತರಿದ್ದು ನಿಗದಿತ ಸಮಯದಲ್ಲಿ ಗುಣಮಟ್ಟದ ಸೇವೆ ನೀಡುವ ಖಾತರಿಯನ್ನು ಒದಗಿಸುತ್ತೇವೆ ಎನ್ನುತ್ತಾರೆ ಮೈಟಿವಿಎಸ್ ಸಿಇಒ ಸಂಜಯ್ ನಿಗಮ್.
ಬೆಂಗಳೂರಿನ ಗ್ರಾಹಕರ ಸೇವೆಗಾಗಿ ಹಲವು ಯೋಜನೆಯನ್ನು ಕೈಗೊಂಡಿದ್ದೇವೆ. ವಿವಿಧ ರಾಜ್ಯಗಳಿಂದ ಬಂದು ಉದ್ಯಾನನಗರಿಯಲ್ಲಿ ನೆಲೆಸಿರುವವರಿಗೆ ಇಂಥ ಯೋಜನೆಗಳು ಅನುಕೂಲವಾಗಲಿವೆ. ಅಲ್ಲದೆ ನಮ್ಮಲ್ಲಿ ಸದಸ್ಯತ್ವದ ಕೆಲ ಯೋಜನೆಗಳಿದ್ದು ಅವುಗಳಲ್ಲಿ ತಮ್ಮ ಹೆಸರು ದಾಖಲಿಸಿಕೊಂಡು ತಮ್ಮ ಕಾರ್ಡ್ ಪಡೆದುಕೊಳ್ಳಬಹುದು. ಇಂಥ ಕಾರ್ಡ್‌ದಾರರಿಗೆ ನಮ್ಮ ಎಲ್ಲ ಸೇವಾ ಮಳಿಗೆಗಳಲ್ಲಿ ಅವರು ಸೌಲಭ್ಯ ಪಡೆಯಬಹುದು. ಅಂದರೆ ರಾಜ್ಯದ ಒಳಗಾಗಲಿ ಅಥಾವಾ ಹೊರ ರಾಜ್ಯಗಳಲ್ಲಿ ಈ ಸೌಲಭ್ಯ ಪಡೆಯಬಹುದು ಎನ್ನುತ್ತಾರೆ ಅವರು.
ಹೆಚ್ಚಿನ ಮಾಹಿತಿಗಾಗಿ ಕಾಪೋರೇಟ್ ಕಮ್ಯುನಿಕೇಷನ್ಸ್ ಮುಖ್ಯಸ್ಥ ವಿ. ಮಾಧವನ್, ಮೊ.966770 08432 ಅಥವಾ ಇ ಮೇಲ್- ಟಛಝಛಢಛಟಿ.ಢಅಡಿಢಡ.್ಝಟಿ ಸಂಪರ್ಕಿಸಬಹುದು.
- ಚನ್ನಮಲ್ಲಿಕಾರ್ಜುನ ಹದಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


