ಸಿಂಗಪುರಾಣ
ವಾಣಿಜ್ಯ ವ್ಯವಹಾರದಲ್ಲಿ ವಿಶ್ವದಲ್ಲೇ 4ನೇ ಸ್ಥಾನದಲ್ಲಿರುವ ಸಿಂಗಾಪುರ ಸುಂದರ ಸಿಟಿಗಳ ಪಟ್ಟಿಯಲ್ಲಿ ನಂ.1.

ವಾಣಿಜ್ಯ ವ್ಯವಹಾರದಲ್ಲಿ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿರುವ ಸಿಂಗಾಪುರ ಸುಂದರ ಸಿಟಿಗಳ ಪಟ್ಟಿಯಲ್ಲಿ ನಂ.1. ಕಡಲ ಕಿನಾರೆಗಳನ್ನು ವ್ಯವಸ್ಥಿತವಾಗಿ ಬಳಸಿಕೊಂಡಿರುವ ಇಲ್ಲಿನ ಆಡಳಿತ, ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ. ಬೃಹತ್ ಕಟ್ಟಡಗಳು, ಝೂ, ವಸ್ತು ಸಂಗ್ರಹಾಲಯ, ರೆಸಾರ್ಟ್ಸ್, ಮಾಲ್‌ಗಳು, ಸಾರಿಗೆ ವ್ಯವಸ್ಥೆಯನ್ನು ಶಿಸ್ತುಬದ್ಧವಾಗಿ ಅಷ್ಟೇ ಅಲ್ಲ, ಇವೆಲ್ಲವಕ್ಕೂ ಗ್ಲ್ಯಾಮರ್ ಟಚ್ ನೀಡಿರುವುದು ಸಿಂಗಾಪುರದ ವಿಶೇಷತೆ.
ಸಿಂಗಾಪುರ ಕೇವಲ 700 ವರ್ಷಗಳ ಇತಿಹಾಸವುಳ್ಳ ಒಂದು ಪುಟ್ಟ ದೇಶ. ವಿಸ್ತೀರ್ಣ 740 ಚದರ ಕಿಲೋಮೀಟರ್. 14ನೇ ಶತಮಾನದಲ್ಲಿ ಇಲ್ಲಿ ಕೇವಲ 150 ಜನರಿದ್ದರು. 1800 ರಲ್ಲಿ ಡಚ್ಚರು, ಪೋರ್ಚುಗೀಸರು ಹಾಗೂ ಬ್ರಿಟಿಷರ ಆಗಮನ. 1829ರ ಹೊತ್ತಿಗೆ ಸುಮಾರು 10 ಸಾವಿರ ಜನರು ಇಲ್ಲಿದ್ದರು. ಈಗ ಸಿಂಗಾಪುರದಲ್ಲಿ 50 ಲಕ್ಷ ಜನರಿದ್ದಾರೆ! ಅವರಲ್ಲಿ ಶೇ.77 ಚೀನಿಯರು, ಶೇ.14 ಮಲಯನ್ನರು ಹಾಗೂ ಶೇ.8 ಭಾರತೀಯರಿದ್ದಾರೆ.
ಇಲ್ಲಿ ಎಲ್ಲಿ ನೋಡಿದರೂ ಗಗನಚುಂಬಿ ಕಟ್ಟಡಗಳು. ವಿಶ್ವದಲ್ಲೇ ಅತಿ ದೊಡ್ಡದಾದ ಅಂದರೆ, 65 ಮೀ. ವ್ಯಾಸವುಳ್ಳ ದೈತ್ಯಾಕಾರದ ಚಕ್ರ (GAINT WHEEL) ಇಲ್ಲಿದೆ. ಈ ತೊಟ್ಟಿಲುಗಳಲ್ಲಿ ಕುಳಿತು ಇಡೀ ಸಿಂಗಾಪುರವನ್ನು ವೀಕ್ಷಿಸಬಹುದು. ಮೂರು ಬೃಹದಾಕಾರದ ಕಟ್ಟಡಗಳ ಮೇಲೆ ಹಡಗಿನಾಕಾರದಲ್ಲಿ ನಿರ್ಮಿಸಿರುವ ಆಕಾಶಗೋಪುರ (SKY TOWER) ನೋಡಲು ವಿಸ್ಮಯಕಾರಿ.
ತೆರೆದ ಟ್ರಾಮ್‌ನಲ್ಲಿ ಮಾಡುವ ನೈಟ್ ಸಫಾರಿ ಯಾವುದೋ ಕಾಣದ ಜಗತ್ತಿಗೆ ಕರೆದೊಯ್ಯುತ್ತದೆ. 130 ಪ್ರಬೇಧಗಳ 2500ಕ್ಕೂ ಹೆಚ್ಚು ಕಾಡುಪ್ರಾಣಿಗಳನ್ನು ಇಲ್ಲಿ ವೀಕ್ಷಿಸಬಹುದು. ಬೆಂಕಿಯೊಡನೆ ಸರಸವಾಡುವ ನೃತ್ಯ ತಂಡದ ಸಾಹಸ ಇಲ್ಲಿನ ವಿಶೇಷ ಆಕರ್ಷಣೆ. ಏಷ್ಯಾದಲ್ಲೇ ಅತಿದೊಡ್ಡ ಪಕ್ಷಿಧಾಮ 'ಜೋರಂಗ್'ನ ಚಿಲಿಪಿಲಿ ಕಿವಿಯಲ್ಲಿ ಕೊಳಲೂದುತ್ತದೆ. ಇಲ್ಲಿ ಸುಮಾರು 380ಕ್ಕೂ ಹೆಚ್ಚು ಪ್ರಬೇಧಗಳ 5000ಕ್ಕೂ ಹೆಚ್ಚು ಪಕ್ಷಿಗಳಿವೆ.
ಸಿಂಗಾಪುರ 18 ದ್ವೀಪಗಳ ರಾಷ್ಟ್ರ. 13 ದ್ವೀಪಗಳಲ್ಲಿ ಮಿಲಿಟರಿ ನೆಲೆಯಿದೆ. ಉಳಿದ 5 ದ್ವೀಪಗಳಲ್ಲಿ ಮಾತ್ರ ಜನವಸತಿ. ಸಿಂಗಾಪುರದ ಮತ್ತೊಂದು ಪ್ರಮುಖ ಆಕರ್ಷಣೆ ಸೆಂಟೋಸ್ ದ್ವೀಪ. ಸಿಂಗಾಪುರದಿಂದ ಸೆಂಟೋಸ್ ದ್ವೀಪಕ್ಕೆ ಕೇಬಲ್ ಕಾರ್ ಮೂಲಕ ಪಯಣಿಸಬಹುದು. ಇದರಲ್ಲಿ ಸಿಂಗಾಪುರದ 360 ಡಿಗ್ರಿಯ ಪಕ್ಷಿನೋಟಕ್ಕೆ ಬೆರಗಾಗಲೇಬೇಕು.
ಹಿಂದೂ ದೇಗುಲಗಳು
ಸೌತ್ ಬ್ರಿಜ್ ರಸ್ತೆ ಮತ್ತು ಎಶುನ್ ಅವೆನ್ಯೂದ ಶ್ರೀಮಹಾ ಮಾರಿಯಮ್ಮನ್ ದೇಗುಲ, ವಾಟರ್‌ಲೂ ಸ್ಟ್ರೀಟ್‌ನ ಶ್ರೀಕೃಷ್ಣ ಭಗವಾನ್ ದೇಗುಲ, ಜುರಾಂಗ್ ಈಸ್ಟ್‌ನ ಅಲ್ಮಿಗು ಮುರುಗನ್ ಮತ್ತು ಬಾಲಸುಬ್ರಹಮ್ಮಣಿಯಂ ದೇಗುಲ, ಚಂಗಿ ವಿಲೇಜ್‌ರಸ್ತೆಯ ಶ್ರೀರಾಮ ಟೆಂಪ್, ವುಡ್‌ಲ್ಯಾಂಡ್ಸ್ ರಸ್ತೆಯ ಅರಸಕೇಸರಿ ಶಿವಾ ದೇಗುಲ, ಕಲ್ಲಾಂಗ್ ರಸ್ತೆಯ ಮನ್ಮಥ ಕರುನೇಶ್ವರ ದೇಗುಲಗಳು ಸಿಂಗಾಪುರದಲ್ಲಿನ ಹಿಂದೂ ದೇಗುಲಗಳಾಗಿವೆ.
ಒಟ್ಟಿನಲ್ಲಿ ಸಿಂಗಾಪುರ ಪ್ರವಾಸ ವ್ಯವಸ್ಥೆಯನ್ನು ರಾಜ್ಯದ ಅನೇಕ ಟೂರ್ ಮತ್ತು ಟ್ರಾವೆಲ್ ಕಂಪನಿಗಳು ಆಯೋಜಿಸುತ್ತಿವೆ. ಅವುಗಳಲ್ಲಿ ಪ್ರಮುಖವಾಗಿ ತುಮಕೂರಿನ ರೈಸ್ ಕಂಪನಿ, ಬೆಂಗಳೂರಿನ ಆನಂದ ವಿಹಾರಿ, ಗೌರಿಶಂಕರ ಟೂರ್ ಮತ್ತು ಟ್ರಾವೆಲ್ಸ್, ಗೋಲ್ಡನ್ ಟೂರ್ ಮತ್ತು ಟ್ರಾವೆಲ್ಸ್ ಥಾಮಸ್ ಕುಕ್, ಎಸ್‌ಓಟಿಸಿ ಇತ್ಯಾದಿ.
ಸಿಂಗಾಪುರ ಪ್ರವಾಸದ ಪ್ಯಾಕೇಜ್ ಬಗ್ಗೆ ಹೆಚ್ಚಿನ ಮಾಹಿತಿಗೆ ಮೊ. 94498-51328 ಸಂಪರ್ಕಿಸಿ.
- ಚಿತ್ರ- ಲೇಖನ: ವಿಠ್ಠಲ್ ಟಿ.ಎನ್
tnvittal@yahoo.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


