ಜಾಝ್ ಆಗಮನ
ಹೋಂಡಾ ಸಂಸ್ಥೆಯ ಆಕರ್ಷಕ ಹ್ಯಾಚ್‌ಬ್ಯಾಕ್ ಜಾಝ್ ಹೊಸ ರೂಪದಲ್ಲಿ ಮಾರುಕಟ್ಟೆಗೆ ಬರುತ್ತಿದೆ.
ಎರಡು ವರ್ಷಗಳ ಹಿಂದೆ ಜಾಝ್ ಬಂದಾಗ ಅತಿಯಾದ ದರ ಹಾಗೂ ಪೆಟ್ರೋಲ್ ಎಂಜಿನ್ ಕಾರಣದಿಂದ ಗ್ರಾಹಕರ ಮನಸೆಳೆಯಲು ವಿಫಲವಾಗಿತ್ತು. ಮಧ್ಯಾವಧಿಯಲ್ಲಿ ದರಪಟ್ಟಿಯನ್ನು ಸ್ವಲ್ಪ ಸಡಿಲಗೊಳಿಸಿದ ಬಳಿಕವೂ ಮಾರುಕಟ್ಟೆಯಲ್ಲಿ ಎದ್ದೇಳಲು ಸಾಧ್ಯವಾಗಲಿಲ್ಲ. ಇದೇ ಕಾರಣದಿಂದ ಈಗ ಜಾಝ್ ಡೀಸೆಲ್ ಎಂಜಿನ್ ಕಾರನ್ನು 2014ರಲ್ಲಿ ಮಾರುಕಟ್ಟೆಗೆ ತರಲು ಹೋಂಡಾ ನಿರ್ಧರಿಸಿದೆ.
ಅಮೇಝ್ ಡೀಸೆಲ್ ಕಾರಿನ ಯಶಸ್ಸಿನ ಬಳಿಕ ಹೋಂಡಾ ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಛಾಪನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಮುನ್ನುಗ್ಗುತ್ತಿದೆ. ಮೊದಲೆಲ್ಲ ಕೇವಲ ಪೆಟ್ರೋಲ್ ಎಂಜಿನ್ ಕಾರುಗಳಿಗೆ ಜೋತುಬಿದ್ದಿದ್ದ ಹೋಂಡಾ ತಡವಾಗಿ ಜ್ಞಾನೋದಯ ಹೊಂದಿದೆ. ಇದರ ಪರಿಣಾಮವಾಗಿ ಸ್ವಿಫ್ಟ್ ಡಿಸೇಲ್ ಕಾರುಗಳ ಉತ್ಪಾದನೆಯನ್ನು ಭಾಗಶಃ ನಿಲ್ಲಿಸಿದೆ. ನೂತನ ಜಾಝ್ ಕಾರು 1.5 ಲೀಟರ್ ಐ-ಡಿಟೆಕ್ ಡೀಸೆಲ್ ಹಾಗೂ 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದಲ್ಲದೇ ಹೊರ ವಿನ್ಯಾಸದಲ್ಲಿ ಸಿವಿಕ್‌ನ ಡೈನಾಮಿಕ್ ಲುಕ್ ಅನ್ನು ಜಾಝ್‌ನಲ್ಲಿ ಅಳವಡಿಸಲಾಗಿದೆ. ಹೆಡ್‌ಲೈಟ್‌ಗೆ ಎಲ್‌ಇಡಿಯನ್ನು ಬಳಸಲಾಗಿದೆ. ಇನ್ನು ದರಪಟ್ಟಿ ವಿಚಾರಕ್ಕೆ ಬಂದರೆ ಬ್ರಿಯೋ ಹಾಗೂ ಅಮೇಝ್ ಕಾರಿನ ನಡುವಿನ ದರವಿರಬಹುದು. ಇನ್ನು ಹೆಚ್ಚಿನ ವಿವರಗಳು ಅಧಿಕೃತವಾಗಿ ಹೊರಬಿದ್ದಿಲ್ಲ. 2014ರ ಆರಂಭದಲ್ಲಿಯೇ ಈ ಕಾರು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

