ಕಣ್ಣು ಕುಕ್‌ತೈತೆ ಗುಜರಾತ್

ಗುಜರಾತ್ ರಾಜ್ಯವು ಭವಿಷ್ಯದಲ್ಲಿ ಆಟೋಮೊಬೈಲ್ ಉದ್ಯಮದ ಸ್ವರ್ಗವಾಗಲಿದೆಯೇ?
ಕಳೆದ 3 ವರ್ಷದ ಆರ್ಥಿಕ ಹಾಗೂ ಆಟೋಮೊಬೈಲ್ ಇಂಡಸ್ಟ್ರಿಗಳ ಲೆಕ್ಕಾಚಾರವನ್ನು ನೋಡಿದರೆ ಇದು ನಿಜವೆನಿಸುತ್ತದೆ. ಹರ್ಯಾಣದ ಗುರಗಾಂವ್, ಮಹಾರಾಷ್ಟ್ರದ ಪುಣೆ, ತಮಿಳುನಾಡಿನ ಚೆನ್ನೈ ಹಾಗೂ ಕರ್ನಾಠಕದ ಕೆಲ ಭಾಗಗಳಲ್ಲಿ 10ಕ್ಕೂ ಅಧಿಕ ವಾಹನ ತಯಾರಿಕೆ ಘಟಕಗಳಿವೆ. ಆದರೆ ಇವತ್ತಿನವರೆಗೆ ಕಾರ್ಯನಿರ್ವಹಿಸುತ್ತಿರುವ ವಾಹನ ತಯಾರಿಕೆ ಘಟಕಗಳು ಗುಜರಾತ್‌ನಲ್ಲಿ ಮೂರೇ ಇರಬಹುದು. ಭವಿಷ್ಯದ ಯೋಜನೆಗಳು ಹಾಗೂ ಒಪ್ಪಂದಗಳನ್ನು ಗಮನಿಸಿದಾಗ ಇನ್ನು 10 ವರ್ಷದೊಳಗೆ 20ಕ್ಕೂ ಅಧಿಕ ತಯಾರಿಕೆ ಘಟಕಗಳು ರಾಜ್ಯಕ್ಕೆ ಲಗ್ಗೆ ಇಡುವ ಸಾಧ್ಯತೆಯಿದೆ.
ಈಗಾಗಲೇ ಪಶ್ಚಿಮ ಬಂಗಾಳದ ಸಿಂಗೂರ್‌ನಿಂದ ಗುಜರಾತ್‌ಗೆ ಟಾಟಾ ನ್ಯಾನೋ ಹೋಗಿ ನಿರ್ಮಾಣ ಪ್ರಾರಂಭಿಸಿದೆ. ಇನ್ನು ಜನರಲ್ ಮೋಟಾರ್ಸ್, ಫೋರ್ಡ್ ಹಾಗೂ ಏಷ್ಯಾ ಮೋಟಾರ್ ವರ್ಕ್ಸ್ ಕೂಡ ಘಟಕ ಸ್ಥಾಪಿಸಿವೆ. ಮಾರುತಿ ಸುಝುಕಿಯು 2015ರಷ್ಟೊತ್ತಿಗೆ ಘಟಕ ಪ್ರಾರಂಭಿಸುವ ಸೂಚನೆ ನೀಡಿದೆ.
ಇವೆಲ್ಲದರ ಮಧ್ಯೆ ಚೀನಾದ ಅತಿ ದೊಡ್ಡ ಖಾಸಗಿ ಮೋಟಾರ್ ತಯಾರಿಕಾ ಸಂಸ್ಥೆ ಗ್ರೇಟ್ ವಾಲ್ ಮೋಟಾರ್ ಕೂಡ ಗುಜರಾತ್ ಕಡೆ ಮುಖ ಮಾಡಿದೆ. ಚೀನಾದಲ್ಲಿ ಸರ್ಕಾರೇತರ ಅತಿ ದೊಡ್ಡ ವಾಹನ ತಯಾರಿಕೆ ಕಂಪನಿ ಎಂಬ ಹೆಗ್ಗಳಿಗೆ ಹೊಂದಿರುವ ಜಿಎಂಡಬ್ಲ್ಯೂ, ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 40 ಸಾವಿರ ಕೋಟಿ ವ್ಯವಹಾರ ನಡೆಸಿದೆ.
ಮತ್ತೊಂದೆಡೆ ಫ್ರಾನ್ಸ್‌ನ ಪ್ರತಿಷ್ಠಿತ ಕಂಪನಿಯಾದ ಫುಗಾಟೋ ಕೂಡ 2015ರೊಳಗೆ ತಯಾರಿಕೆ ಘಟಕ ಪ್ರಾರಂಭಿಸುವ ಸಾಧ್ಯತೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


