ಬರಲಿದ್ದಾನೆ ಗೂರ್ಖಾ

ಫೋರ್ಸ್ ಮೋಟಾರ್ಸ್ ಸಂಸ್ಥೆ ಫೋರ್ಸ್ 1 ಮೂಲಕ ಎಸ್‌ಯುವಿ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ಈಗ ಗೂರ್ಖಾ ವಾಹನದ ಮೂಲಕ ಜೀಪ್ ಮಾದರಿಯ ವಾಹನ ಕ್ಷೇತ್ರಕ್ಕೆ ಲಗ್ಗೆಯಿಡಲು ಸಿದ್ಧವಾಗಿದೆ.
ಸಧ್ಯ ಮಾರುಕಟ್ಟೆಯಲ್ಲಿ ಜೀಪ್ ಕ್ಷೇತ್ರದಲ್ಲಿ ಮಹಿಂದ್ರಾ ಸಂಸ್ಥೆಯೇ ಅನಭಿಷಿಕ್ತ ದೊರೆ. ಗ್ರಾಹಕರಿಗೆ ಬೇರೆ ಆಯ್ಕೆ ಇರಲಿಲ್ಲ. ಮಹಿಂದ್ರ ಸಂಸ್ಥೆ ಇತ್ತೀಚೆಗಷ್ಟೇ ಥಾರ್ ಮಾದರಿಯ ಜೀಪು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಜೀಪ್ ಪ್ರೇಮಿಗಳ ಮನಸೆಳೆದಿತ್ತು. ಅದು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ಈಗ ಫೋರ್ಸ್ ಮೋಟಾರ್ಸ್ ಸಂಸ್ಥೆ ಗೂರ್ಖಾ ಎಂಬ ಜೀಪ್ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಪೈಪೋಟಿಗೆ ಅವಕಾಶ ಕಲ್ಪಿಸಿದೆ. ಮರ್ಸಿಡೀಸ್ ಬೆಂಝ್ 2.6 ಲೀಟರ್ ಎಂಜಿನ್ ಹೊಂದಿದ್ದು, 5 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. ಮರ್ಸಿಡೆಸ್ ಎಂಜಿನ್ ಹೊಂದಿರುವುದು ಇದರ ಪ್ರಮುಖ ಆಕರ್ಷಣೆ.
ರೂಫ್ ರೇಲ್ಸ್ ಮತ್ತು ಅಲಾಯ್ ವೀಲ್ಸ್ ಹೊಂದಿರುವುದರಿಂದ ಆಕರ್ಷಕ ರೂಪವೂ ಇದೆ. ಆರಂಭದಲ್ಲಿ ಗೂರ್ಖಾ ಕೇವಲ ಭಾರತ್ ಸ್ಟೇಜ್ 3 ಮಾದರಿಯಲ್ಲಿ ಮಾತ್ರ ಲಭ್ಯವಿದೆ. ಅಂದರೆ ದಿಲ್ಲಿ, ಮುಂಬಯಿ, ಬೆಂಗಳೂರು, ಚೆನ್ನೈ, ಕೋಲ್ಕತಾ ಮುಂತಾದ ಮಹಾನಗರಗಳಲ್ಲಿ ಲಭ್ಯವಿರುವುದಿಲ್ಲ. ನೀವು ಖರೀದಿಸಿದರೂ ಈ ನಗರಗಳಲ್ಲಿ ವಾಹನ ರಿಜಿಸ್ಟರ್ ಮಾಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಭಾರತ್ ಸ್ಟೇಜ್ 4 ಮಾದರಿಯೂ ಮಾರುಕಟ್ಟೆಗೆ ಬರಬಹುದು.
2 ವೀಲ್ ಡ್ರೈವ್ ಮತ್ತು 4 ವೀಲ್ ಡ್ರೈವ್ (ನಾಲ್ಕೂ ಚಕ್ರಗಳಿಗೆ ಎಂಜಿನ್ ಪವರ್ ಹೋಗುವ ವ್ಯವಸ್ಥೆ) ಆಯ್ಕೆಗಳಿದ್ದು, ಸಾಫ್ಟ್ ಟಾಪ್ ಮತ್ತು ಪಾರ್ಡ್ ಟಾಪ್ ಮಾದರಿಯಲ್ಲಿ 5 ಮತ್ತು 6 ಜನ ಕುಳಿತುಕೊಳ್ಳುವ ವ್ಯವಸ್ಥೆಯ ಆಯ್ಕೆಯಿದೆ. 6.25 ಲಕ್ಷದಿಂದ 8.05 ಲಕ್ಷ ರು.ವರೆಗೆ ಗೂರ್ಖಾ ಲಭ್ಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


