ವಾಹನ

ಹುಂಡೈ ಐಎಕ್ಸ್ 35

ಹುಂಡೈ ಐಎಕ್ಸ್ 35
Published On :

ಹುಂಡೈ ಕಂಪನಿ ಇತ್ತೀಚೆಗೆ ಹೊಸ ವಾಹನವನ್ನೇ ಮಾರುಕಟ್ಟೆಗೆ ಬಿಟ್ಟಿಲ್ಲ. ಇರುವ ಕಾರುಗಳನ್ನೇ ಹೊಸ ಶೈಲಿಯಲ್ಲಿ ಮರುಪರಿಚಯಿಸಿದೆ. ಆದ್ದರಿಂದ ಅತ್ಯಂತ ಹೆಚ್ಚು ಬೇಡಿಕೆಯಲ್ಲಿರುವ ಮಿನಿಎಸ್‌ಯುವಿ ಕ್ಷೇತ್ರಕ್ಕೆ ಹುಂಡೈ ಪ್ರವೇಶಿಸಲಿದೆ ಎಂಬ ನಿರೀಕ್ಷೆಯಿದೆ. ಹುಂಡೈ ಐಎಕ್ಸ್ 35 ಕೂಡ ಕಂಪನಿಯ ಪ್ಲ್ಯೂಡಿಕ್ ಶೈಲಿಯಲ್ಲಿ ವಿನ್ಯಾಸಗೊಳ್ಳಲಿದೆ. ಇದರಿಂದಾಗಿ ನೋಡಿದ ತಕ್ಷಣ ನೀವು ಇದು ಹುಂಡೈ ಕಂಪನಿ ಕಾರು ಎಂದು ಗುರುತಿಸಬಲ್ಲಿರಿ. ಅತ್ಯಾಕರ್ಷಕ ನೋಟ ಮತ್ತು ನಿಜವಾಗಿ ಕೊಟ್ಟ ಹಣಕ್ಕಿಂತ ಹೆಚ್ಚು ದುಬಾರಿ ಕಾರಿನಂತೆ ಕಾಣುವ ಗುಣ ಗ್ರಾಹಕರನ್ನು ಆಕರ್ಷಿಸಬಹುದು ಎಂದು ಕಂಪನಿ ಅಂದಾಜಿಸಿದೆ. ಆದರೆ ಈಗ ಐ10 ಗ್ರ್ಯಾಂಡ್‌ನಲ್ಲಿ ಕೆಲಸ ಮಾಡುತ್ತಿರುವ 1.1 ಲೀ. ಸಿಆರ್‌ಡಿಇ ಎಂಜಿನ್ ಇದಕ್ಕೂ ಅಳವಡಿಸಲು ಚಿಂತನೆ ನಡೆದಿದೆ ಎಂಬುದು ಕೊಂಚ ಬೇಸರದ ಸಂಗತಿ. ದಾಖಲೆಯಲ್ಲಿ 1.1 ಲೀ. ಎಂಜಿನ್ ಚಿಕ್ಕದಾದರೂ ಪವರ್‌ನಲ್ಲಿ ಇತರೆ ಎಂಜಿನ್‌ಗಳಿಗೇನೂ ಕಡಿಮೆ ಇಲ್ಲದಂತೆ ಇದು ಕೆಲಸ ಮಾಡಲಿದೆ ಎಂದು ಕಂಪನಿ ಹೇಳಿದೆ. ಈಗ ವೆರ್ನಾದಲ್ಲಿ ಕಾರ್ಯನಿರ್ವಹಿಸುತ್ತಿರುವ 1.6 ಲೀ. ಸಿಆರ್‌ಡಿಇ ಎಂಜಿನ್ ಏನಾದರೂ ಐಎಕ್ಸ್35ಗೆ ಅಳವಡಿಸಿದರೆ ಅದು ಈ ಮಾದರಿಯಲ್ಲಿ ಅತ್ಯಂತ ಹೆಚ್ಚು ಶಕ್ತಿಯುತ ಎಂಜಿನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಆಗ ಹೆಚ್ಚು ಪವರ್ ಬಯಸುವವರು ಹುಂಡೈ ಐಎಕ್ಸ್35ಗೆ ಮುಗಿಬೀಳುವುದರಲ್ಲಿ ಅಚ್ಚರಿಯಿಲ್ಲ. ಹುಂಡೈ ಕಂಪನಿ ಈ ಕಾರನ್ನು 7-8 ಲಕ್ಷ ಆರಂಭಿಕ ಬೆಲೆಗೆ ಮಾರುಕಟ್ಟೆಗೆ ಪರಿಚಯಿಸುವ ನಿರೀಕ್ಷೆಯಿದೆ.

- ವಕ್ರದಂತ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.