ಆಫ್‌ರೋಡಿಂಗ್‌ಗೆ ಎಸ್‌ಯುವಿ ಕ್ಯೂ5
ಯಾವುದೇ ರಸ್ತೆಯಲ್ಲಿ ಬೇಕಾದರೂ ಹೋಗಬಲ್ಲದು ಆಡಿ ಎಸ್‌ಯುವಿ ಕ್ಯೂ5. ಈ ಕಾರಿನ ಗಾತ್ರಕ್ಕೆ ಹೋಲಿಸಿದರೆ ಇದಕ್ಕೆ 2 ಲೀ...

ಯಾವುದೇ ರಸ್ತೆಯಲ್ಲಿ ಬೇಕಾದರೂ ಹೋಗಬಲ್ಲದು ಆಡಿ ಎಸ್‌ಯುವಿ ಕ್ಯೂ5. ಈ ಕಾರಿನ ಗಾತ್ರಕ್ಕೆ ಹೋಲಿಸಿದರೆ ಇದಕ್ಕೆ 2 ಲೀ. ಡೀಸೆಲ್ ಎಂಜಿನ್ ಸಾಮರ್ಥ್ಯ ಕೊಂಚ ಕಡಿಮೆಯಾಗುತ್ತದೆ. ಆದ್ದರಿಂದ ಖರೀದಿ ಮಾಡುವುದೇ ಆಗಿದ್ದರೆ 3 ಲೀ. ಎಂಜಿನ್ ಇರುವ ವಾಹನ ಖರೀದಿಸುವುದೇ ಒಳಿತು. 2 ಲೀ. ಪೆಟ್ರೋಲ್ ಎಂಜಿನ್ 8 ಆಟೋಮ್ಯಾಟಿಕ್ ಗೇರ್‌ಗಳನ್ನು ಹೊಂದಿದ್ದರೆ, 2 ಮತ್ತು 3 ಲೀ. ಡೀಸೆಲ್ ಎಂಜಿನ್‌ಗಳು 7 ಆಟೋ ಗೇರ್‌ಗಳನ್ನು ಹೊಂದಿರಲಿವೆ. 2 ಲೀ. ಡೀಸೆಲ್ ಎಂಜಿನ್ ಹೊಂದಿರುವ ಕ್ಯೂ5, 9 ಸೆಕೆಂಡ್‌ಗಳಲ್ಲಿ 0-100 ವೇಗ ಪಡೆದುಕೊಳ್ಳಬಹುದು. 3 ಲೀ. ಎಂಜಿನ್ ಇದ್ದಲ್ಲಿ 6.5 ಸೆಕೆಂಡ್‌ಗಳಲ್ಲಿ 100 ಕಿ.ಮೀ. ವೇಗ ತಲುಪಬಹುದು.
ಎಲ್ಲಕ್ಕಿಂತ ಮುಖ್ಯವಾಗಿ ಕ್ಯೂ5ನಲ್ಲಿ ಕ್ವಾಟ್ರೊ ತಂತ್ರಜ್ಞಾನವಿದೆ. ಅಂದರೆ ಈ ಕಾರು ಸದಾ 4 ವ್ಹೀಲ್ ಡ್ರೈವ್ ಹೊಂದಿದೆ. ಕ್ವಾಟ್ರೊ ತಂತ್ರಜ್ಞಾನದಲ್ಲಿ ಆಕಸ್ಮಾತ್ ಒಂದು ಚಕ್ರ ನೆಲದ ಸಂಪರ್ಕ ಕಳೆದುಕೊಂಡರೆ ಅಥವಾ ಗಿರಗಿರನೆ ತಿರುಗಲಾರಂಭಿಸಿದರೆ, ತನ್ನಿಂದತಾನೇ ಆ ಚಕ್ರದ ಶಕ್ತಿ ಇನ್ನೊಂದು ಚಕ್ರಕ್ಕೆ ವರ್ಗಾವಣೆಗೊಳ್ಳುತ್ತದೆ. ಇದರಿಂದಾಗಿ ಎಂಥ ಕಠಿಣ ಪರಿಸ್ಥಿತಿಯಲ್ಲೂ ನಿಮ್ಮ ಕಾರು ಸಿಕ್ಕಿಹಾಕಿಕೊಳ್ಳದು. ಅವುಗಳನ್ನು ನೀವು ಸಮರ್ಥವಾಗಿ ದಾಟಿ ಬರಬಲ್ಲಿರಿ. ನೀವು ಕೇವಲ ನಗರ, ಹೆದ್ದಾರಿಯಲ್ಲಷ್ಟೇ ವಾಹನ ಚಲಾಯಿಸುವವರಾಗಿದ್ದರೆ ಈ ಕಾರು ನಿಮಗೆ ನಿರೀಕ್ಷಿತ ಫಲಿತಾಂಶ ನೀಡದಿರಬಹುದು. ಆದರೆ ನೀವು ಆಫ್‌ರೋಡಿಂಗ್ ಮಾಡುವವರಾಗಿದ್ದರೆ, ಗುಡ್ಡಗಾಡು ಪ್ರದೇಶದಲ್ಲಿ ಚಲಾಯಿಸುವವರಾಗಿದ್ದರೆ ಖಂಡಿತ ಕ್ಯೂ5 ನಿಮಗೆ ಉತ್ತಮ ಸಂಗಾತಿ.
ಇದರಲ್ಲೂ ಡೈನಾಮಿಕ್, ಆಟೋ, ಕಂಫರ್ಟ್, ಎಫ್‌ಷಿಯೆನ್ಸಿ (ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರ ಲಭ್ಯವಿದೆ) ಡ್ರೈವಿಂಗ್ ಮಾದರಿಗಳು ಲಭ್ಯವಿದೆ. ಕ್ಯೂ5 ಕಾರು ಐಬಿಸ್ ವೈಟ್, ವಾಲ್‌ನಟ್ ಬ್ರೌನ್ ನಾನ್ ಮೆಟಾಲಿಕ್ ಬಣ್ಣ ಮತ್ತು ಮೂನ್‌ಲೈಟ್ ಬ್ಲ್ಯೂ, ಕುವಿ ಸಿಲ್ವರ್, ಮಾಯಾ ಬ್ರೌನ್, ಮಾನ್ಸೂನ್ ಗ್ರೇ, ಫೀಟನ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


