ವಾಹನ

ಆಟೊಮೊಬೈಲ್ ಲಾಸ್

ಭಾರತೀಯ ಆಟೊಮೊಬೈಲ್ ಉದ್ಯಮ ಕುಸಿಯುತ್ತಿದೆ ಎನ್ನುವುದನ್ನು ಮತ್ತೊಮ್ಮೆ ಭಾರತೀಯ ಅಟೊಮೊಬೈಲ್ ಉತ್ಪಾದಕರ...

ಆಟೊಮೊಬೈಲ್ ಲಾಸ್
Published On :

ಭಾರತೀಯ ಆಟೊಮೊಬೈಲ್ ಉದ್ಯಮ ಕುಸಿಯುತ್ತಿದೆ ಎನ್ನುವುದನ್ನು ಮತ್ತೊಮ್ಮೆ ಭಾರತೀಯ ಅಟೊಮೊಬೈಲ್ ಉತ್ಪಾದಕರ ಸಂಘ (ಎಸ್‌ಐಎಎಂ) ಬಹಿರಂಗಪಡಿಸಿದೆ.
ದ್ವಿಚಕ್ರ ವಾಹನ ಹೊರತುಪಡಿಸಿ ಮತ್ತ್ಯಾವುದೇ ವಿಭಾಗದಲ್ಲಿ ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಧನಾತ್ಮಕ ಬೆಳವಣಿಗೆ ಕಂಡಿಲ್ಲ. ವಾಣಿಜ್ಯೋದ್ದೇಶ ವಾಹನಗಳು, ಕಾರು, ಜೀಪು ಹಾಗೂ ತ್ರಿಚಕ್ರ ವಾಹನಗಳ ಮಾರುಕಟ್ಟೆಯಲ್ಲೂ ಋಣಾತ್ಮಕ ಬೆಳವಣಿಗೆ ಕಂಡಿದೆ. ಆದರೆ, ಅಕ್ಟೋಬರ್‌ನ ಹಬ್ಬದ ವ್ಯಾಪಾರದಿಂದ ಅಲ್ಪಮಟ್ಟಿಗೆ ಉದ್ಯಮ ಚೇತರಿಸಿಕೊಂಡಿದೆ ಎಂದು ಎಸ್‌ಐಎಎಂ ತನ್ನ ಮಧ್ಯವಾರ್ಷಿಕ ವರದಿಯಲ್ಲಿ ಹೇಳಿದೆ.
ಏಪ್ರಿಲ್‌ನಿಂದ ಅಕ್ಟೋಬರ್‌ವರೆಗಿನ ಒಟ್ಟಾರೆ ವ್ಯಾಪಾರದಲ್ಲಿ ಶೇ.3ರಷ್ಟು ಬೆಳವಣಿಗೆ ಕಂಡಿದೆ. ಹಾಗೆಯೇ ಕಳೆದ ಅಕ್ಟೋಬರ್‌ನಿಂದ ಒಂದು ವರ್ಷದ ವ್ಯಾಪಾರ ಪರಿಗಣಿಸಿದರೆ ಶೇ.14ರಷ್ಟು ಬೆಳವಣಿಗೆ ಕಂಡಿದೆ. ಆದರೆ, ಇದರಲ್ಲಿ ದ್ವಿಚಕ್ರ ವಾಹನದ ಶೇ.6ರಷ್ಟು ಬೆಳವಣಿಗೆಯೇ ದೊಡ್ಡ ಪಾಲು ಹೊಂದಿದೆ. ಇನ್ನು ವಾರ್ಷಿಕ ವಹಿವಾಟಿನಲ್ಲೂ ದ್ವಿಚಕ್ರ ವಾಹನಗಳ ಶೇ.18ರಷ್ಟು ಬೆಳವಣಿಗೆಯೇ ಒಟ್ಟಾರೆ ಮಾರುಕಟ್ಟೆಯ ಧನಾತ್ಮಕ ಸೂಚ್ಯಂಕಕ್ಕೆ ಕಾರಣವಾಗಿದೆ.
2013-14ನೇ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಒಟ್ಟು 20.87 ಲಕ್ಷ ವಾಹನಗಳು ವ್ಯಾಪಾರವಾಗಿವೆ. ಇದೇ ಸಮಯದಲ್ಲಿ ಶೇ.5ರಷ್ಟು ಋಣಾತ್ಮಕ ಬೆಳವಣಿಗೆಯನ್ನು ಕಾರು ಮಾರುಕಟ್ಟೆ ಕಂಡಿದೆ. ವಾಣಿಜ್ಯೋದ್ದೇಶದ ವಾಹನಗಳ ಮಾರುಕಟ್ಟೆಯಲ್ಲಿ ಶೇ.16ರಷ್ಟು ಇಳಿಮುಖವಾಗಿದೆ. ಇವೆರಡು ಕ್ಷೇತ್ರದ ಋಣಾತ್ಮಕ ಬೆಳವಣಿಗೆಯೇ ವಾಹನ ಉತ್ಪಾದಕರನ್ನು ಕಂಗೆಡಿಸಿದೆ. ವಿಚಿತ್ರವೆಂದರೆ ರಫ್ತು ಪ್ರಮಾಣದಲ್ಲಿ ಶೇ.6ರಷ್ಟು ಬೆಳವಣಿಗೆ ಕಂಡುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.