ಹೊಸ ರೋಲ್

6.6 ಲೀಟರ್ ಎಂಜಿನ್. ಆದರೆ ಲಾರಿಯಲ್ಲ. ಕೇವಲ 4.4 ಸೆಕೆಂಡ್‌ಗಳಲ್ಲಿ 100 ಕಿ.ಮೀ. ವೇಗ ತಲುಪಬಲ್ಲದು. ಆದರೆ ರೇಸ್ ಕಾರಲ್ಲ. ಇದು ರೋಲ್ಸ್ ರಾಯ್ಸ್ ಸಂಸ್ಥೆ ಭಾರತದ ಮಾರುಕಟ್ಟೆಗೆ ಬಿಡುತ್ತಿರುವ ಕಾರಿನ ಸ್ಯಾಂಪಲ್ ವಿವರ.
ದೇರ್ ಆಯಾ ತೋ ದುರುಸ್ತ್ ಆಯಾ ಎಂಬ ಮಾತಿನಂತೆ ರೋಲ್ಸ್ ರಾಯ್ಸ್ ಸಂಸ್ಥೆ ವ್ರೈತ್ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಈ ಕಾರು ರೋಲ್ಸ್ ರಾಯ್ಸ್ ಸಂಸ್ಥೆ ಈ ವರೆಗೆ ಉತ್ಪಾದಿಸಿರುವ ಅತ್ಯಂತ ಬಲಶಾಲಿ ಮತ್ತು ಅತ್ಯಾಕರ್ಷಕ ಕಾರು ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ.
ಈ ಕಾರಿನಲ್ಲಿರುವ 6.6 ಲೀಯರ್ ಟ್ವಿನ್ ಟರ್ಬೋ ನ12 ಎಂಜಿನ್ 633ಪಿಎಸ್ ಶಕ್ತಿಯನ್ನು ಉತ್ಪಾದಿಸಬಲ್ಲದು. ಇದರ 800ಎನ್‌ಎಂ ಟಾರ್ಕ್‌ನಿಂದಾಗಿ 100 ಕಿ.ಮೀ. ವೇಗವನ್ನು ಕೇವಲ 4.4 ಸೆಕಂಡ್‌ಗಳಲ್ಲಿ ತಲುಪಬಲ್ಲದು.
ಈ ಕಾರಿನಲ್ಲಿ 8 ಗೇರ್‌ಗಳ ಅಟೋಮೆಟಿಕ್ ಗೇರ್‌ಬಾಕ್ಸ್ ಇದ್ದು, ಜಿಪಿಎಸ್ ತಂತ್ರಜ್ಞಾನದ ಸಹಾಯದಿಂದ ಮುಂದೆ ಬರಲಿರುವ ದಾರಿ ಎಂಥದ್ದು ಎಂಬುದನ್ನು ಮೊದಲೇ ಅರಿತು ಅದಕ್ಕೆ ಸೂಕ್ತವಾಗಿ ಗೇರನ್ನು ಬದಲಾಯಿಸುವ ಸಾಮರ್ಥ್ಯ ಈ ಕಾರಿಗಿದೆಯಂತೆ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


