ಶಿಖರದ ತಡಿ

ತಡಿಯಾಂಡ ಮೋಳ್ ರಾಜ್ಯದ ಎರಡನೇ ಅತಿ ಎತ್ತರದ ಶಿಖರ. ಈ ಶಿಖರ ಕೊಡಗು ಜಿಲ್ಲೆಯ ಕಕ್ಕಬ್ಬೆ ಪಟ್ಟಣದ ಸನಿಹದಲ್ಲಿದೆ. ಇದು ಕರ್ನಾಟಕ- ಕೇರಳ ಗಡಿಯಲ್ಲಿದ್ದು, ಸಮುದ್ರಮಟ್ಟದಿಂದ 1748 ಮೀಟರ್ ಎತ್ತರದಲ್ಲಿ ಭವ್ಯವಾಗಿ ನಿಂತಿದೆ. ಶಿಖರಗಾಮಿಗಳು ಮತ್ತು ಆರೋಹಿಗಳಿಗೆ ಈ ಶಿಖರ ಕಠಿಣ ಸವಾಲು. ತಡಿಯಾಂಡ ಮೋಳ್ ಮಲೆಯಾಳಂ ಮೂಲದ ಪದ. ಇದರರ್ಥ ಬೃಹತ್ ಪರ್ವತ. ಇದರ ಅರ್ಧ ದೂರವನ್ನು ವಾಹನದಲ್ಲಿ ಕ್ರಮಿಸಬಹುದು. ಶಿಖರದ ಕೆಳಗಿರುವ ನಲಕ್‌ನಾಡು ಆರಮನೆಗೆ ಚಾರಿತ್ರಿಕ ಮಹತ್ವವಿದೆ. ತನ್ನ ಸೈನ್ಯಕ್ಕೆ ಸುರಕ್ಷಿತ ತಂಗುದಾಣವಾಗಿ ಇದನ್ನು ಮಹಾರಾಜಾ ದೊಡ್ಡವೀರರಾಜೇಂದ್ರರು 1792ರಲ್ಲಿ ಕಟ್ಟಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


