ಅಬ್ಬಿ ಅಬ್ಬರ

ಮಡಿಕೇರಿಯಿಂದ ಕೇವಲ 7-8 ಕಿ.ಮೀ ದೂರದಲ್ಲಿರುವ ಅಬ್ಬಿ ಜಲಪಾತ ಕೊಡಗಿನಲ್ಲಿ ತುಂಬಾ ಪ್ರವಾಸಿಗರು ಭೇಟಿ ನೀಡುವ ಸ್ಥಳ. ಕಾಫಿ ತೋಟಗಳ ಮಧ್ಯೆ ಸಣ್ಣದಾಗಿ ಹರಿಯುವ ತೊರೆಯ ಅಬ್ಬಿ ಜಲಪಾತ ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಮಡಿಕೇರಿಯ ಮೊದಲ ಕ್ಯಾಪ್ಟನ್ ನೆನಪಿಗೆ ಅವರ ಮಗಳು ಜೆಸ್ಸಿ ಹೆಸರಿನಲ್ಲಿ ಬ್ರಿಟಿಷರು ಈ ಜಲಪಾತವನ್ನು ಗುರುತಿಸುತ್ತಿದ್ದರು. ಈಗಿನ ಹೆಸರು ಅಬ್ಬಿ ಅಥವಾ ಅಬ್ಬೆ ಎಂದರೆ ಕೊಡವ ಭಾಷೆಯಲ್ಲಿ ಜಲಪಾತ. ಈ ಜಲಪಾತದ ಕರ್ಣಕಠೋರ ಶಬ್ದ ಹೊರತುಪಡಿಸಿ ಸುತ್ತಲಿನ ಇಡೀ ಪರಿಸರವು ಪ್ರಶಾಂತವಾಗಿದೆ. ಬೀಳುವ ನೀರಿನಿಂದಾಗಿ ಸುತ್ತಲಿನ ಪ್ರದೇಶದಲ್ಲಿ ಮಂಜಿನ ಪದರ ನಿರ್ಮಾಣಗೊಳ್ಳುತ್ತದೆ. ಇದು ಕೆಳಗಿನಿಂದ ನೋಡುವವರಿಗೆ ಸುಂದರವಾಗಿ ಕಾಣುತ್ತದೆ. ಮಳೆಗಾಲದಲ್ಲಿ ಈ ಜಲಪಾತದ ಅಬ್ಬರ ಹೇಳತೀರದು. ಜಲಪಾತದ ಎದುರಿಗೆ ಒಂದು ತೂಗುಸೇತುವೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


