ವಾಹನ

ಬರಲಿದೆ ಬಿಎಸ್4 ಡೀಸೆಲ್ ಅಂಬಾಸಿಡರ್

ಬರಲಿದೆ ಬಿಎಸ್4 ಡೀಸೆಲ್ ಅಂಬಾಸಿಡರ್
Published On :

ಬಿಎಸ್4 ಸ್ಟ್ಯಾಂಡರ್ಡ್ ಹೊಂದಿರುವ ಡೀಸೆಲ್ ಅಂಬಾಸಿಡರ್ ಮುಂದಿನ ತಿಂಗಳು ಮಾರುಕಟ್ಟೆಗೆ ಬರಲಿದ್ದು, 17 ಮಹಾನಗರಗಳಲ್ಲಿ ಮತ್ತೆ ನೆಲೆಯೂರಲು ಇದರಿಂದ ಸಾಧ್ಯವಾಗಲಿದೆ.
ಮಾಲಿನ್ಯ ನೀತಿಗಳ ಅನ್ವಯ ಬಿಎಸ್ 3 (ಭಾರತ್ ಸ್ಟೇಜ್ 3) ಮಾಲಿನ್ಯ ನಿಯಂತ್ರಣ ಹೊಂದಿರುವ ವಾಹನಗಳನ್ನು ದಿಲ್ಲಿ, ಕೋಲ್ಕತಾ, ಮುಂಬೈ, ಬೆಂಗಳೂರು ಸೇರಿದಂತೆ ಒಟ್ಟು 17 ನಗರಗಳಲ್ಲಿ ಮಾರಾಟ ಮತ್ತು ನೋಂದಣಿ ಮಾಡಿಸುವಂತಿಲ್ಲ. ಈ ನಗರಗಳಲ್ಲಿ ಮಾರಾಟ ಮಾಡುವ ಮತ್ತು ನೋಂದಣಿ ಮಾಡಿಸುವ ವಾಹನಗಳು ಬಿಎಸ್4 ಸ್ಟೇಜ್ ನಿಯಮಗಳಿಗೆ ಒಳಪಟ್ಟಿರಬೇಕು. ಈ ಕಾರಣದಿಂದಾಗಿಯೇ ಮಾರುತಿ 800, ಅಂಬಾಸಿಡರ್ ಮುಂತಾದ ಕಾರುಗಳು ಮಹಾನಗರಗಳಿಂದ ಮಾಯವಾಗಿದ್ದು.
ಆದರೆ ಈಗ ಅಂಬಾಸಿಡರ್ ಡೀಸೆಲ್ ಕಾರು ಬಿಎಸ್4 ಮಾನ್ಯತೆಯೊಂದಿಗೆ ರಸ್ತೆಗಿಳಿಯಲು ಸಿದ್ಧವಾಗಿದೆ. ಇದರಿಂದಾಗಿ ದೇಶದ 17 ನಗರಗಳಲ್ಲಿ ಅಂಬಾಸಿಡರ್ ಮತ್ತೆ ಕಾಣಿಸಿಕೊಳ್ಳಲಿದೆ. ವಿಶೇಷವಾಗಿ ಕೋಲ್ಕತಾದಲ್ಲಿ ಬಾಡಿಗೆ ಕಾರುಗಳಲ್ಲಿ ಸಿಂಹಪಾಲು ಅಂಬಾಸಿಡರ್‌ನದ್ದು. 2010 ಏಪ್ರಿಲ್‌ನಿಂದ ಅಲ್ಲಿ ಅಂಬಾಸಿಡರ್ ಕಾರು ಮಾರಾಟ ಸ್ಥಗಿತವಾಗಿತ್ತು.
ಮಾಲಿನ್ಯ ನಿಯಂತ್ರಣಗಳಲ್ಲದೇ ಇತರೆ ರೀತಿಯಲ್ಲೂ ಹೊಸ ಅಂಬಾಸಿಡರ್ ಕಾರು ಹಿಂದಿನ ಕಾರುಗಳಿಗಿಂತ ಉತ್ತಮವಾಗರಲಿದೆ ಎಂದು ಕಂಪನಿ ಹೇಳಿದೆ. ಆದರೆ ಹೊಸ ಕಾರಿನಲ್ಲಿ ಇನ್ನೂ ಯಾವ ಯಾವ ಬದಲಾವಣೆಗಳನ್ನು ಮಾಡಲಾಗಿದೆ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.