ವಾಹನ

ನಯಾ ನಿಸಾನ್ ಟೆರಾನೊ

ನಯಾ ನಿಸಾನ್ ಟೆರಾನೊ
Published On :

ರೆನೋ ಡಸ್ಟರ್‌ನ ಮತ್ತೊಂದು ರೂಪ ನಿಸಾನ್ ಟೆರಾನೊ ಮೂಲಕ ಮಾರುಕಟ್ಟೆಗೆ ಬರುತ್ತಿದೆ. ಹೊಸ ಡಸ್ಟರ್‌ಗಾಗಿ ಐದಾರು ತಿಂಗಳು ಕಾಯುತ್ತಿರುವವರಿಗೆ ಟೆರಾನೊ ಸ್ವಲ್ಪ ಖುಷಿ ನೀಡಬಹುದು. ವಿನ್ಯಾಸದಲ್ಲಿ ಬದಲಾವಣೆಗಳನ್ನು ಹೊಂದಿದ್ದರೂ ಡಸ್ಟರ್‌ನ ಎಂಜಿನ್ ಮತ್ತು ಚಾಸಿಯೊಂದಿಗೆ ನಿಸಾನ್ ಟೆರಾನೊ ಹೆಸರಲ್ಲಿ ಈ ಕಾರು ಮಾರುಕಟ್ಟೆಗೆ ಬರುತ್ತಿದೆ. ನಿಸಾನ್ ಬ್ರಾಂಡ್ ಹೊಂದಿರುವ ಹಿನ್ನೆಲೆಯಲ್ಲಿ ಕಂಪನಿಯ ಕೆಲ ಟ್ರೇಡ್‌ಮಾರ್ಕ್‌ಗಳನ್ನು ನಿರೀಕ್ಷಿಸಬಹುದು.
ಮಾರುಕಟ್ಟೆಯಲ್ಲಿ ಸದ್ದುಮಾಡುವ ಕಾರುಗಳನ್ನು ಇವೆರಡು ಕಂಪನಿಗಳು ಕೆಲ ಕಾಲಗಳ ಬಳಿಕೆ ಅಲ್ಪಮಟ್ಟಿನ ದರ ಹೆಚ್ಚಳ ಮಾಡಿ ಬಿಡುಗಡೆ ಮಾಡುವುದು ಪ್ರತೀತಿ. ಈ ಹಿಂದೆ ನಿಸಾನ್ ಸನ್ನಿ, ಮೈಕ್ರಾವನ್ನು ರೆನೋ ಕಂಪನಿಯು ಸ್ಕಾಲಾ ಹಾಗೂ ಪಲ್ಸ್ ಆಗಿ ಪರಿವರ್ತಿಸಿ ಮಾರುಕಟ್ಟೆಗೆ ಬಿಟ್ಟಿತ್ತು.
ಆಗಸ್ಟ್ 20ರಂದು ಟೆರಾನೊ ಎಸ್‌ಯುವಿ ಮಾರುಕಟ್ಟೆ ಬರುವ ನಿರೀಕ್ಷೆಯಿದೆ. ಡಸ್ಟರ್‌ಗಿಂತ ಸುಮಾರು 50 ಸಾವಿರದವರೆಗೆ ದರ ಹೆಚ್ಚಿರುವ ಸಾಧ್ಯತೆಯಿದೆ. ಕಾರಿನ ಸಂಪೂರ್ಣ ವಿವರ ಹಾಗೂ ದರಪಟ್ಟಿಯನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. ಆದರೆ ಉತ್ತಮ ಆಂತರಿಕ ವಿನ್ಯಾಸ ಮತ್ತು ಉತ್ತಮ ಗುಣಮಟ್ಟದ ಪ್ಲಾಸ್ಟಿಕ್ ನಿರೀಕ್ಷಿಸಬಹುದೇನೊ?
ಡಸ್ಟರ್ ಹಾಗೂ ಟೆರಾನೊನ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಹೆಡ್‌ಲ್ಯಾಂಪ್, ಬಂಪರ್ ಹಾಗೂ ಗ್ರಿಲ್‌ಗಳನ್ನು ಬದಲಿಸಲಾಗಿದೆ. ಡಸ್ಟರ್ ಮಾದರಿಯ ಎಂಜಿನ್‌ನಲ್ಲಿ ಡೀಸೆಲ್ ಕಾರು ಬರುವುದು ಪಕ್ಕಾ ಆಗಿದೆ. ಆದರೆ ಟೆರಾನೊ ಪೆಟ್ರೋಲ್ ಮಾದರಿಯೂ ಬರಲಿದೆಯೋ ಇಲ್ಲವೋ ಎಂಬುದು ಇನ್ನೂ ನಿರ್ಧಾರವಾಗಿಲ್ಲ.
ಕಂಪನಿ ಮೂಲಗಳ ಪ್ರಕಾರ ಡಸ್ಟರ್ ಹಾಗೂ ಟೆರಾನೊ ಕಾರುಗಳ ಒಳ ವಿನ್ಯಾಸದಲ್ಲಿ ಯಾವುದೇ ವ್ಯತ್ಯಾಸವಿಲ್ಲ.
ಡಸ್ಟರ್‌ಗಾಗಿ ಕಾದು ಸುಸ್ತಾದವರು ಅಥವಾ ನಿಸಾನ್ ಬ್ರಾಂಡ್ ಪ್ರಿಯರಿಗೆ ಟೆರಾನೊ ಮುದನೀಡಬಹುದು. ಆದರೆ ಇವರೆಡು ಕಾರುಗಳಿಗೆ ಫೋರ್ಡ್ ಇಕೋಸ್ಪೋರ್ಟ್ ಭಾರಿ ಪೈಪೋಟಿ ನೀಡುತ್ತಿದೆ. ಕರಾರಿನ ಕಾರಣದಿಂದ ನಿಸಾನ್ ತಡವಾಗಿ ಮಾರುಕಟ್ಟೆಗೆ ಬಂದು ಏಟು ತಿನ್ನುವ ಸಾಧ್ಯತೆಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.