ಬೃಹತ್ ಯಜ್ಞ ನಡೆಸಲು ಮುಂದಾದ ತೆಲಂಗಾಣ ಸಿಎಂ ಕೆಸಿಆರ್; ಎಲ್ಲಾ ಮುಖ್ಯಮಂತ್ರಿಗಳಿಗೂ ಆಹ್ವಾನ
ತೆಲಂಗಾಣ ಮುಖ್ಯಮಂತ್ರಿ ಕೆ.ಸಿ ಚಂದ್ರಶೇಖರ್ ರಾವ್ ಮಹಾಸುದರ್ಶನ ಯಜ್ಞ ನಡೆಸಲು ಉದ್ದೇಶಿಸಿದ್ದಾರೆ.

Published On :
ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಸಿ ಚಂದ್ರಶೇಖರ್ ರಾವ್ ಮಹಾಸುದರ್ಶನ ಯಜ್ಞ ನಡೆಸಲು ಉದ್ದೇಶಿಸಿದ್ದಾರೆ.
ಹೈದರಾಬಾದ್ ಬಳಿ ಇರುವ ಯಾದಾದ್ರಿಯ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದಲ್ಲಿ ಈ ಯಜ್ಞ ನಡೆಯಲಿದ್ದು, ಇದಕ್ಕಾಗಿ ನಡೆಸಬೇಕಿರುವ ತಯಾರಿಗಳ ಬಗ್ಗೆ ತ್ರಿದಂಡಿ ಚಿನ್ನಾ ಜಿಯರ್ ಸ್ವಾಮಿಗಳೊಂದಿಗೆ ಸಿಎಂ ಚರ್ಚೆ ನಡೆಸಿದ್ದಾರೆ.
100 ಎಕರೆ ಪ್ರದೇಶದಲ್ಲಿ 1048 ಯಜ್ಞ ಕುಂಡಗಳು ಸ್ಥಾಪನೆಯಾಗಲಿದ್ದು, 1000 ಮಂದಿ ಋತ್ವಿಜರು, 3000 ಸಹಾಯಕರು ಯಜ್ಞವನ್ನು ನಡೆಸಿಕೊಡಲಿದ್ದಾರೆ. ಬದ್ರಿನಾಥ್, ಶ್ರೀರಂಗಂ, ಜಗನ್ನಾಥ, ತಿರುಪತಿ ಹಾಗೂ ಇನ್ನಿತರ ಶ್ರೀಕ್ಷೇತ್ರಗಳ ವೈಷ್ಣವ ಪೀಠಾಧಿಪತಿಗಳನ್ನು ( ಭಾರತ ಹಾಗೂ ವಿದೇಶ) ಯಜ್ಞಕ್ಕೆ ಆಹ್ವಾನಿಸಲಾಗುತ್ತದೆ.
ಸಿಎಂ ಕೆಸಿಆರ್ ಕೇಂದ್ರ ಸರ್ಕಾರದ ಗಣ್ಯರು, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ಸಚಿವರು, ಹಿಂದೂ ಧರ್ಮದ ಎಲ್ಲಾ ಗುರುಗಳನ್ನು ಆಹ್ವಾನಿಸುವ ಯೋಜನೆ ಹೊಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
KCRchief ministersಕೆಸಿಆರ್Telangana CMMahasudarshana yagnachinna jeeyar swamijiತೆಲಂಗಾಣ ಸಿಎಂಮಹಾಸುದರ್ಶನ ಯಜ್ಞಚಿನ್ನ ಜೀಯರ್ ಸ್ವಾಮೀಜಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


