ಕಟೀಲು: ಮೈ ಜುಮ್ಮೆನಿಸುವ 'ತೋಟೆದಾರ' ಬೆಂಕಿ ಕ್ರೀಡೆ, ಸ್ಥಳೀಯ ಭಕ್ತರಿಂದ ವಿಶೇಷ ಸೇವೆ
ಇತಿಹಾಸ ಪ್ರಸಿದ್ಧ ದುರ್ಗಾ ಪರಮೇಶ್ವರಿ ದೇವಳದ ಜಾತ್ರಾ ಮಹೋತ್ಸವ ವೇಳೆ ನಡೆಯುವ ಸಂಪ್ರದಾಯವೊಂದು ಮೈ ಜುಮ್ಮೆನಿಸುತ್ತದೆ.

ಇದು ತುಳುನಾಡಿನ ಪರಂಪರೆಯಾಗಿದ್ದು, ಶತಶತಮಾನಗಳಿಂದಲೂ ನಡೆದುಕೊಂಡು ಬಂದಿದೆ.ಅಸುರ ಅರುಣಾಸುರನನ್ನು ಸಂಹರಿಸಿದ ದೇವಿ ವಿಜಯಿಯಾಗಿ ಬರುವ ವೇಳೆ ಈ ರೀತಿ ಬೆಂಕಿಯಿಂದ ಸ್ವಾಗತ ಕೋರಲಾಗುತಿತ್ತು ಎಂಬ ಪ್ರತೀತಿ ಇದೆ.
ಇತಿಹಾಸದಲ್ಲಿ ಪ್ರಾಚೀನ ಕಾಲದಿಂದಲೂ ನಡೆದು ಬಂದಿರುವ ವಿಶೇಷವಾದ ನಂಬಿಕೆ ಹಾಗೂ ಆಚರಣೆ ಇದಾಗಿದ್ದು, ಈ ವೇಳೆ ಭಕ್ತರ ಮೈ ಮೇಲೆ ಕೇವಲ ಶಾಲು ಹಾಗೂ ಧೋತಿಯನ್ನು ಮಾತ್ರ ಧರಿಸಿರುತ್ತಾರೆ. ಹಾಗಿದ್ದರೂ ಈವರೆಗೂ ತೋಟೆದಾರಗದಲ್ಲಿ ಬೆಂಕಿ ಅನಾಹುತ, ಭಕ್ತಾಧಿಗಳ ಮೈ ಮೇಲೆ ಗಾಯಗಳುಂಟಾದ ಉದಾಹರಣೆಗಳಿಲ್ಲ.
ತೋಟೆದಾರ ಎಂಬುದು ಅತ್ತೂರು, ಕೊಡೆತೂರು ಸ್ಥಳೀಯ ಗ್ರಾಮಸ್ಥರಿಂದ ನಡೆಯುವ ವಿಶೇಷ ಸೇವೆಯಾಗಿದೆಯ ಇದರಲ್ಲಿ ಭಾಗವಹಿಸುವವರು ವ್ರತದಲ್ಲಿ ಇರುತ್ತಾರೆ. ಮಧು ಮಾಂಸ ಇತ್ಯಾದಿ ವರ್ಜ್ಯ. ನಂದಿನಿ ನದಿಯಲ್ಲಿ ಮುಳುಗಿ ಮೈಗೆ ಗಂಧ ಲೇಪನ ಮಾಡಿ ಭಕ್ತಿಯಿಂದ ಬೆಂಕಿಯ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಾರೆ.
ಈ ವೈಶಿಷ್ಠ್ಯ ಪೂರ್ಣ ಆಚರಣೆಯಲ್ಲಿ ಪಾಲ್ಗೊಳ್ಳಲು ನಡುರಾತ್ರಿಯ ವೇಳೆ ಸಾವಿರಾರು ಸಂಖ್ಯೆಯ ಭಕ್ತರು ನೆರೆಯುತ್ತಾರೆ. 15ರಿಂದ 20 ಮೀಟರ್ ದೂರದಲ್ಲಿ ನಿಂತಿಕೊಳ್ಳುವ ಎರಡು ಗುಂಪುಗಳು ತಾಳೆಯ ಗರಿಯನ್ನು ಸುತ್ತಿ ಬೆಂಕಿಯನ್ನು ಹೊತ್ತಿಸಿ ಅದನ್ನು ಭಕ್ತರು ಒಬ್ಬರ ಮೇಲೊಬ್ಬರು ಎಸೆಯುತ್ತಾರೆ ಎಂದು ಕಟೀಲು ದುರ್ಗಾ ಪರಮೇಶ್ವರಿ ದೇವಾಲಯದ ಆರ್ಚಕ ಹರಿ ನಾರಾಯಣ ದಾಸ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


