ನಂದಿನಿ ನದಿಯ ಮಧ್ಯಭಾಗದಲ್ಲಿರುವ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ
ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ನದಿಯ ಮಧ್ಯ ಭಾಗದಲ್ಲಿರುವುದು ಈ ಕ್ಷೇತ್ರದ ವಿಶೇಷತೆ.

Published On :
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪುಣ್ಯ ಕ್ಷೇತ್ರಗಳಲ್ಲಿ ಶ್ರೀಶಕ್ತಿಪೀಠವಾಗಿರುವ ಕಟೀಲು ಪ್ರಮುಖವಾದ ಪುಣ್ಯಕ್ಷೇತ್ರ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ನದಿಯ ಮಧ್ಯ ಭಾಗದಲ್ಲಿರುವುದು ಈ ಕ್ಷೇತ್ರದ ವಿಶೇಷತೆ.
ಪುರಾಣಗಳ ಪ್ರಕಾರ ಜಾಬಾಲಿ ಮಹರ್ಷಿಯ ಶಾಪದಿಂದ ಇಂದ್ರನ ಬಳಿಯಿದ್ದ ಕಾಮಧೇನುವಿನ ಮಗಳು ನಂದಿನಿ ನದಿಯಾಗಿ ಹರಿಯುತ್ತಾಳೆ. ಶಾಪ ವಿಮೋಚನೆಗಾಗಿ ಜಾಪಾಲಿ ಮಹರ್ಷಿಯ ಬಳಿ ಪ್ರಾರ್ಥಿಸಿದಾಗ ದುರ್ಗಾದೇವಿಯನ್ನು ಪ್ರಾರ್ಥಿಸಿದರೆ ಶಾಪ ವಿಮೋಚನೆಗೆ ದೇವಿಯೇ ಮಾರ್ಗ ಸೂಚಿಸುತ್ತಾಳೆಂದು ಜಾಬಾಲಿ ಮಹರ್ಷಿ ಸೂಚಿಸುತ್ತಾರೆ. ನಂದಿನಿ ನದಿ ಶಾಪವಿಮೋಚನೆಗಾಗಿ ದುರ್ಗಾಪರಮೇಶ್ವರಿಯಲ್ಲಿ ಪ್ರಾರ್ಥಿಸಿದಾಗ ನಂದಿನಿ ನದಿಯಲ್ಲಿ ತಾನೇ ಹುಟ್ಟಿ ಶಾಪ ವಿಮೋಚನೆ ಮಾಡುತ್ತಾಳೆ. ಇದೇ ನಂದಿನಿ ನದಿಯ ಮಧ್ಯಭಾಗದಲ್ಲಿರುವ ದುರ್ಗಾಪರಮೇಶ್ವರಿ ದೇವಾಲಯದ ಪೌರಾಣಿಕ ಹಿನ್ನೆಲೆ.
ಜಾಬಾಲಿ ಮಹರ್ಷಿಗಳು ಲೋಕಕಲ್ಯಾಣಕ್ಕಾಗಿ ಒಂದು ಯಜ್ಞವನ್ನು ನಡೆಸಲು ನಿರ್ಣಯಿಸಿ ಪುಣ್ಯ ಹಸುವಾಗಿದ್ದ ಕಾಮಧೇನುವನ್ನು ಭೂಮಿಗೆ ಕರೆತರಲು ನಿರ್ಧರಿಸಿದನು. ಕಾಮಧೇನುವನ್ನು ತರಲು ದೇವತೆಗಳ ಒಡೆಯನಾದ ಇಂದ್ರನ ಒಪ್ಪಿಗೆ ಕೇಳಿದಾಗ ಇಂದ್ರನು ಕಾಮಧೇನುವು ವರುಣ ಲೋಕಕ್ಕೆ ಹೋಗಿರುವುದರಿಂದ ಅದರ ಬದಲು ನಂದಿನಿಯನ್ನು ಕರೆದೊಯ್ಯಬಹುದಾಗಿ ತಿಳಿಸಿದನು. ಆದರೆ ಜಾಬಾಲಿ ಮಹರ್ಷಿಯೊಂದಿಗೆ ಹೋಗಲು ನಿರಾಕರಿಸಿದ ನಂದಿನಿಗೆ ಜಾಬಾಲಿ ಮಹರ್ಷಿ ಶಾಪ ನೀಡುತ್ತಾರೆ. ಶಾಪ ವಿಮೋಚನೆಗಾಗಿ ಪ್ರಾರ್ಥಿಸಿದಾಗ ದುರ್ಗಿಯು ಪ್ರತ್ಯಕ್ಷವಾಗಿ ಜಬಲಿ ಮಹರ್ಷಿಯ ಶಾಪದಂತೆ ನದಿಯಾಗಿ ಹರಿಯುವಂತೆ ಹೇಳಿದಳು. ನಂತರ ತಾನೇ ಆಕೆಯ ಮಗಳಂತೆ ಹುಟ್ಟಿ ಮಹರ್ಷಿ ಜಬಲಿಯ ಶಾಪ ವಿಮೋಚನೆಗೊಳಿಸುವುದಾಗಿ ಆಶೀರ್ವದಿಸಿದಳು. ನಂತರ ಅರುಣಾಸುರನೆಂಬ ರಾಕ್ಷಸನ ಸಂಹಾರ ಮಾಡಬೇಕಾಗುತ್ತದೆ. ಎರಡು ಅಥವಾ ನಾಲ್ಕು ಕಾಲಿನ ಯಾವುದೇ ಪ್ರಾಣಿಯಾಗಲಿ ಹಾಗೂ ಆಯುಧದಿಂದಾಗಲಿ ತನಗ ಸಾವು ಬರಬಾರದೆಂದು ಅರುಣಾಸುರನೆಂಬ ರಾಕ್ಷಸ ವರ ಪಡೆದಿದ್ದ ಕಾರಣ, ದೇವಿಯು ದುಂಬಿಗಳ ರೂಪದಲ್ಲಿ ಆತನನ್ನು ಸಂಹಾರ ಮಾಡುತ್ತಾಳೆ, ಅರುಣಾಸುರನ ಸಂಹಾರವಾದ ನಂತರ ದೇವತೆಗಳಲೆಲ್ಲಾ ಭ್ರಮರಾಂಬಿಕೆಗೆ (ದುಂಬಿಗಳ ರಾಣಿ) ಉಗ್ರರೂಪದಿಂದ ಶಾಂತಿ ಸ್ವಭಾವವನ್ನು ಹೊಂದಲು ಪ್ರಾರ್ಥಿಸಿದರು ಆಗ ದೇವಿಯು ಶಾಂತ ರೂಪದಲ್ಲಿ ನಂದಿನಿ ನದಿಯ ಕೇಂದ್ರ ಭಾಗದಲ್ಲಿ ಬಂದು ಅವತರಿಸುತ್ತಾಳೆ, ಇದೇ ವೇಳೆ ನಂದಿನಿಗೆ ನೀಡಲಾಗಿದ್ದ ಶಾಪವಿಮೋಚನೆ ಮಾಡುತ್ತಾಳೆ. ನಂದಿನಿ ನದಿಯಿಂದ ದುರ್ಗೆ ಅವತರಿಸಿದ್ದಕ್ಕಾಗಿ ಈ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರು ಬಂದಿದೆ.
ದುಂಬಿಗಳಿಂದ ಅರುಣಾಸುರ ಸಾಯಲು ಕಾರಣವೆಂದರೆ ಆತನು ಪಡೆದಿದ್ದ ವರ. ಎರಡು ಅಥವಾ ನಾಲ್ಕು ಕಾಲಿನ ಯಾವುದೇ ಪ್ರಾಣಿಯಾಗಲಿ ಹಾಗೂ ಆಯುಧದಿಂದಾಗಲಿ ತನಗ ಸಾವು ಬರಬಾರದೆಂದು ಆತ ವರ ಪಡೆದಿದ್ದ. ನಂತರ ದೇವತೆಗಳಲೆಲ್ಲಾ ಸೇರಿಕೊಂಡು ಭ್ರಮರಾಂಬಿಕೆಗೆ (ದುಂಬಿಗಳ ರಾಣಿ) ಉಗ್ರರೂಪದಿಂದ ತನ್ನ ಚೆಲುವಿನ ಮತ್ತು ಶಾಂತಿ ಸ್ವಭಾವವನ್ನು ಹೊಂದಲು ಪ್ರಾರ್ಥಿಸಿದರು. ಆಗ ದೇವಿಯು ತನ್ನ ಸುಂದರವಾದ ರೂಪದಲ್ಲಿ ನಂದಿನಿ ನದಿಯ ಕೇಂದ್ರ ಭಾಗದಲ್ಲಿ ಬಂದು ಅವತರಿಸಿ, ನಂದಿನಿಗೆ ನೀಡಿದ್ದ ಆಕೆಯ ಮಗಳಾಗಿ ಹುಟ್ಟುವ ವಚನವನ್ನು ಈಡೇರಿಸಿದಳು. ಆಕೆ ನೆಲೆಸಿದ ಸಣ್ಣ ದ್ವೀಪಕ್ಕೆ ಕಟೀಲು ಎಂಬ ಹೆಸರು ಬಂದಿತು. ಸಂಸ್ಕೃತದಲ್ಲಿ ಕಟಿ ಎಂದರೆ ಮಧ್ಯ ಭಾಗ ಮತ್ತು ಇಳ ಎಂದರೆ ಭೂಮಿ ಅದರಿಂದ ಈ ಸ್ಥಳವನ್ನು ಕಟೀಲು ಎಂದು ಕರೆಯಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


