ಆಗಾಗ ಕಾಣಿಸಿಕೊಂಡು ಕಣ್ಮರೆಯಾಗುವ ಗುಜರಾತ್ ನ ದೇವಾಲಯದಲ್ಲಿರುವ ಶಿವಲಿಂಗ!
ಭಾರತದಲ್ಲಿರುವ ಸಹಸ್ರಾರು ದೇವಾಲಯಗಳಲ್ಲಿ ಒಂದೊಂದೂ ಒಂದೊಂದು ವಿಶೇಷತೆ, ವಿಭಿನ್ನತೆ ಹೊಂದಿದ್ದು ವಿಶ್ವದಾದ್ಯಂತ ಜನರನ್ನು ಆಕರ್ಷಿಸುತ್ತಿವೆ. ಈ ಪೈಕಿ ಗುಜರಾತ್ ನ ಸ್ತಂಬೇಶ್ವರ ಮಹದೇವ್ ದೇವಸ್ಥಾನವೂ ಒಂದು.

Published On :
ಭಾರತದಲ್ಲಿರುವ ಸಹಸ್ರಾರು ದೇವಾಲಯಗಳಲ್ಲಿ ಒಂದೊಂದೂ ಒಂದೊಂದು ವಿಶೇಷತೆ, ವಿಭಿನ್ನತೆ ಹೊಂದಿದ್ದು ವಿಶ್ವದಾದ್ಯಂತ ಜನರನ್ನು ಆಕರ್ಷಿಸುತ್ತಿವೆ. ಈ ಪೈಕಿ ಗುಜರಾತ್ ನ ಸ್ತಂಬೇಶ್ವರ ಮಹದೇವ್ ದೇವಸ್ಥಾನವೂ ಒಂದು.
ಗುಜರಾತ್ ನ ವಡೋದರದಿಂದ 52 ಕಿಮಿ ದೂರದಲ್ಲಿರುವ ಕವಿ ಕಾಂಬೋಯಿಯಲ್ಲಿ ಸ್ತಂಬೇಶ್ವರ ದೇವಾಲಯಕ್ಕೆ ಪೌರಾಣಿಕ ಇತಿಹಾಸವಿದ್ದು, ದೇವಾಲಯದ ರಚನೆಗೆ 150 ವರ್ಷಗಳ ಇತಿಹಾಸವಿದ್ದು ಶಿವನ ಸುತ ಸ್ಕಂದ, ಕಾರ್ತಿಕೇಯನಿಂದ ಸ್ಥಾಪಿಸಲ್ಪಟ್ಟಿದೆ ಎಂಬ ನಂಬಿಕೆ ಇದೆ. ಇದು ಸಮುದ್ರ ದಂಡೆಯ ಬಳಿ ಇದ್ದು, ಸಮುದ್ರದ ಅಲೆಗಳು ಕಡಿಮೆ ಇದ್ದಾಗ ಮಾತ್ರ ದೇವಾಲಯದಲ್ಲಿರುವ ಶ್ವೇತ ವರ್ಣದ ಶಿವಲಿಂಗ ಕಾಣಿಸುತ್ತದೆ ಎಂಬುದು ಈ ದೇವಾಲಯದ ಮತ್ತೊಂದು ವಿಶೇಷ.
ಸ್ಕಂದ ಪುರಾಣದ ಕುಮಾರಿಕ ಕಾಂಡದ ಪ್ರಕಾರ, ತಾರಕಾಸುರನ ಹತ್ಯೆಯ ನಂತರ ಕಾರ್ತಿಕೇಯ ಈ ಕ್ಷೇತ್ರದಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡಿದ ಎಂಬ ಐತಿಹ್ಯವಿದೆ. ತಾರಕಾಸುರನನ್ನು ಹತ್ಯೆ ಮಾಡಿದ್ದಕ್ಕಾಗಿ ಒಂದೆಡೆ ದೇವತೆಗಳು ಕಾರ್ತಿಕೇಯನನ್ನು ಪ್ರಶಂಸಿಸುತ್ತಿದ್ದರೆ, ತನ್ನ ತಂದೆಯ ಅಂದರೆ ಶಿವನ ಭಕ್ತನಾಗಿದ್ದ ತಾರಕಾಸುರನನ್ನು ವಧಿಸಿದ್ದಕ್ಕೆ ಕಾರ್ತಿಕೇಯ ಅಸಮಾಧಾನಗೊಂಡಿರುತ್ತಾನೆ, ತನ್ನ ಅಸಮಾಧಾನವನ್ನು ಹೋಗಲಾಡಿಸಿಕೊಳ್ಳಲು ಕಾರ್ತಿಕೇಯ ವಿಷ್ಣುವಿನ ಬಳಿಗೆ ಹೋಗಿ ಪರಿಹಾರ ಕೇಳಿದಾಗ ಮೂರು ಶಿವಲಿಂಗಗಳನ್ನು ಪ್ರತಿಷ್ಠಾಪನೆ ಮಾಡುವಂತೆ ವಿಷ್ಣು ಸೂಚಿಸುತ್ತಾನೆ. ವಿಷ್ಣುವಿನ ಸಲಹೆಯಂತೆ ಕಾರ್ತಿಕೇಯ ಸ್ಥಾಪಿಸಿದ ಮೂರು ಲಿಂಗಗಳ ಪೈಕಿ ಗುಜರಾತ್ ನಲ್ಲಿ ಅಲೆಗಳು ಹೆಚ್ಚಾದಾಗ ಕಣ್ಮರೆಯಾಗುವ, ಕಡಿಮೆಯಾದಾಗ ಗೋಚರವಾಗುವ ಸ್ತಂಬೇಶ್ವರ ಮಹದೇವ್ ದೇವಾಲಯದ ಲಿಂಗವೂ ಒಂದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


