ಸನಾತನಕ್ರಿಯೆಯಿಂದ ಅಮೃತ ಪ್ರಾಪ್ತಿ

ಈ ಸೃಷ್ಟಿಯ ಪ್ರತಿ ಅಣುರೂಪ ಕೂಡ ಪದರಗಳಿಂದ ರಚಿತವಾಗಿದೆ. ಮರದ ತೊಗಟೆಯನ್ನು ಕತ್ತರಿಸಿ ನೋಡಿ, ಹಣ್ಣನ್ನು ಸುಲಿಯಿರಿ, ಮನುಷ್ಯನ ದೇಹ ಕೂಡ ಗಮನಿಸಿ. ಎಲ್ಲವೂ ಪದರಗಳಿಂದ ರಚಿಸಲ್ಪಟ್ಟಿವೆ.
ಮಾನವದೇಹದ ಪದರಗಳನ್ನು ಪಂಚಕೋಶ ಅನ್ನುತ್ತೇವೆ. ಅದೇ ಥರ ಈ ಜಗತ್ತಿನ ಅಂಶಗಳಲ್ಲೂ ಶಕ್ತಿಪದರಗಳಿವೆ. ಪ್ರತಿ ವಸ್ತು, ಘಟನೆ, ಜೀವನಗಳಲ್ಲಿ ವಿಶಿಷ್ಟ ಶಕ್ತಿಯಿದ್ದು ಅದು ಹಲವು ಪದರಗಳಾಗಿವೆ. ಯೋಗದ ಮೂಲಕ ನೀವು ಸೃಷ್ಟಿಯ ನಿಜವಾದ ಶಕ್ತಿಗಳನು ಬಳಸಬಹುದು. ಈ ಹಂತದಲ್ಲೇ ಕಾಣಬರುವ ಶಕ್ತಿಯೇ ನಿಮ್ಮ ದೇಹದಲ್ಲಿ ಬದಲಾವಣೆ ತರುವುದು. ಶಕ್ತಿಯ ಆಯಾಮಗಳನ್ನು ನೀವು ಯೋಗದ ಮೂಲಕ ಅಧ್ಯಯನ ಮಾಡಿ ಅದನ್ನು ಮನುಷ್ಯ, ವಸ್ತು, ಆಚಾರ ವಿಚಾರಗಳಿಂದ ಹೊರತುಪಡಿಸಿ ಗಮನಿಸುವ ಪ್ರಯತ್ನಮಾಡಿ. ಆಗ ನಿಮಗೆ ಶಕ್ತಿ ಪದರಗಳ ಅನುಭೂತಿ ದಕ್ಕುತ್ತದೆ. ಅದನ್ನೇ ವಿವರವಾಗಿ ಕಲಿಯುತ್ತ ಹೋದರೆ ಪರಮೋಚ್ಛ ಶಕ್ತಿಯ ಅನಾರವಣ ನಿಮ್ಮೆದುರು ಆಗುತ್ತದೆ.
ನೀವು ಪುರಾಣ ಕಾಲದ ಹಾಗೂ ಐತಿಹಾಸಿಕ ವ್ಯಕ್ತಿಗಳ ಬದುಕಿನತ್ತ ಒಮ್ಮೆ ಕಣ್ಣಾಯಿಸಿ ನೋಡಿ. ರಾಮ, ಕೃಷ್ಣ, ಕ್ರಿಸ್ತ, ಗುರುನಾನಕ್ ಇವರ ಬದುಕು ಗಮನಿಸಿ. ಇಂದು ನೀವು ಅವರೆಲ್ಲರ ಜನ್ಮದಿನ, ವಿವಾಹ, ಗೆಲುವು, ಮೋಕ್ಷ ಎಲ್ಲವನ್ನು ಸ್ಮರಿಸಿ ಆಚರಿಸುತ್ತೀರಿ. ಅವರೆಲ್ಲ ದೇವರು ಅಥವಾ ದೈವಾಂಶ ಸಂಭೂತರು. ಆದ್ದರಿಂದ ಇವೆಲ್ಲವನ್ನೂ ಆಚರಿಸಲಾಗುತ್ತದೆ ಎನ್ನುವಿರಾ?
ನೀವೂ ಅವರಂತೆಯೇ ಎಂಬುದನ್ನು ಗುರುತಿಸಿಕೊಳ್ಳುವ ಪ್ರಯತ್ನ ಮಾಡಿ ನೋಡಿ. ನಿಮ್ಮಲ್ಲಿ ಆ ಶಕ್ತಿಯಿದೆ. ಅದನ್ನು ಮನಗಾಣುವ ವಿಧಾನಗಳು ಗೊತ್ತಿಲ್ಲವಷ್ಟೇ. ಯೋಗ ಮತ್ತು ಸನಾತನಕ್ರಿಯೆಯಿಂದ ನೀವು ಅದನ್ನು ನಿಮ್ಮದಾಗಿಸಿಕೊಳ್ಳಬಹುದು. ಮರೆವು ಮನುಷ್ಯನ ಸಹಜ ಗುಣ.
ಕಲಿಯುಗದಲ್ಲಿ ನಮ್ಮ ಪೂರ್ವಜರ ಬದುಕಿನ ಹಲವು ಘಟನೆಗಳ ದಾಖಲೆಯೇ ಇಲ್ಲ. ಆ ನಂತರವೇ ಈ ಮರೆವನ್ನು ಮೆಟ್ಟಿನಿಲ್ಲಲ್ಲು, ಪ್ರತಿ ಘಟನೆಗಳನ್ನೂ ದಿನಾಂಕದೊಂದಿಗೆ ಅದಕ್ಕೊಂದು ಕಥೆಯನ್ನೂ ಜೋಡಿಸಿ, ಕೆಲವು ಆಚಾರ ಪದ್ಧತಿಗಳೊಂದಿಗೆ ಹಬ್ಬದ ಲೆಕ್ಕದಲ್ಲಿ ನೆನಪಿಟ್ಟುಕೊಳ್ಳುವ ಬಗೆ ಹುಟ್ಟಿಕೊಳ್ತು. ರಾಮ ಕಾರ್ತಿಕ ಅಮಾವಾಸ್ಯೆಯ ದಿನ ಕಾಡಿನಿಂದ ಮನೆಗೆ ವಾಪಸಾದದ್ದು, ಕೃಷ್ಣ ಭಾದ್ರಪದ ಅಷ್ಟಮಿಯಂದು ಹುಟ್ಟಿದ್ದು ಎಲ್ಲವೂ ದಾಖಲಾಗಿರುವುದು ಆನಂತರವೇ. ಆದರೆ ಈ ಎಲ್ಲವೂ ತುಂಬ ವೈಜ್ಞಾನಿಕ ಮತ್ತು ತಾತ್ವಿಕವಾಗಿವೆ.
ಶ್ರಾವಣ ಅಂದರೆ ಅದು ಸಮುದ್ರ ಮಂಥನದ ತಿಂಗಳು. ಸುರಾಸುರರು ಲಕ್ಷ್ಮೀಮಾತೆಯನ್ನು ಒಲಿಸಿಕೊಳ್ಳಲು ಸಮುದ್ರ ಮಂಥನ ಮಾಡಿ ಸಮವಾಗಿ ಹಂಚಿಕೊಳ್ಳುವ ಯೋಜನೆಯಲ್ಲಿದ್ದಾಗ ಸಮುದ್ರದಿಂದ ಹದಿನಾಲ್ಕು ಥರದ ರತ್ನಗಳು ಸಿಕ್ಕವಂತೆ. ಆ ನಂತರ ಹಾಲಾಹಲ ಹೊರಬಂತು. ಅದನ್ನು ಸುರ ಮತ್ತು ಅಸುರ ಎರಡೂ ಪಂಗಡಗಳು ನಿರಾಕರಿಸಿದಾಗ ಶಿವನೇ ಅದನ್ನು ಕುಡಿದು ವಿಷಕಂಠನಾದನು. ಕೊನೆಯಲ್ಲಿ ಬಂದದ್ದು ಅಮೃತ. ಅದನ್ನು ದೇವಲೋಕಕ್ಕೆ ತೆಗೆದುಕೊಂಡು ಹೋಗಲಾಯ್ತು. ಇದು ಆಧ್ಯಾತ್ಮಿಕವಾಗಿ ಹಲವು ವಿಷಯಗಳನ್ನು ಹೇಳುತ್ತದೆ. ತಪ್ಪಸ್ಸು ಮತ್ತು ಸಾಧನೆ ಅಮೃತಯೋಗ ಪಡೆಯಲು ಅತಿ ಮುಖ್ಯ ಅವಶ್ಯ. ಗುರುವೊಬ್ಬನಿದ್ದರೆ, ಆತ ವಿಷಕಂಠನಾಗಿ ನಿಮಗೆ ಅಮೃತ ಪ್ರಾಪ್ತಿಯಾಗುವಂತೆ ಮಾಡುತ್ತಾನೆ.
-ಯೋಗಿ ಅಶ್ವಿನಿ
dhyan@dhyanfoundation.com
ಮೊಬೈಲ್: 7406175228
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


