ಭಕ್ತಿ-ಜ್ಯೋತಿಷ್ಯ

ಬನ್ನಿ ವಿಜಯದಶಮಿಗೆ

ವೃಕ್ಷಗಳಲ್ಲಿ ಅತಿ ಶ್ರೇಷ್ಠವಾದವು ಅರಳಿ, ಔದುಂಬರ, ತೆಂಗು ಹಾಗೂ ಶಮೀವೃಕ್ಷ. ಶಮೀವೃಕ್ಷಕ್ಕೆ ಇನ್ನೊಂದು ಹೆಸರು ಬನ್ನಿಮರ.

ಬನ್ನಿ ವಿಜಯದಶಮಿಗೆ
Published On :

ವೃಕ್ಷಗಳಲ್ಲಿ ಅತಿ ಶ್ರೇಷ್ಠವಾದವು ಅರಳಿ, ಔದುಂಬರ, ತೆಂಗು ಹಾಗೂ ಶಮೀವೃಕ್ಷ. ಶಮೀವೃಕ್ಷಕ್ಕೆ ಇನ್ನೊಂದು ಹೆಸರು ಬನ್ನಿಮರ.

ಈ ವೃಕ್ಷ ದೈವಸ್ವರೂಪಿ. ವಿಜಯದಶಮಿ ಬಂತೆಂದರೆ 'ಬನ್ನಿ' ಯನ್ನು ನೆನೆಯದವರಿಲ್ಲ. ಸಂಭ್ರಮದ ದಸರಾಕ್ಕೆ ತೆರೆ ಬೀಳುವುದು ಈ ಬನ್ನಿ ಮರದಿಂದಲೇ.

ಜಾರ್ವ ಎಂಬ ಮಹಾತಪಸ್ವಿ ಹಾಗೂ ಆತನ ಪತ್ನಿ ಸಮೇಧರಿಗೆ ಶಮೀಕಾ ಎಂಬ ಸುಂದರ ಮಗಳಿದ್ದಳು. ಮುದ್ದಾಗಿ ಬೆಳೆದ ಶಮೀಕಾಳಿಗೆ ಮದುವೆ ವಯಸ್ಸು ಬಂದಿತು. ನಂತರ ತಂದೆ-ತಾಯಿ ಧೌಮ್ಯ ಋಷಿಯ ಪುತ್ರನಾದ ಮಂದಾರನಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಿದರು. ಮಂದಾರ ಕೌಶಿಕ ಮಹರ್ಷಿಯ ಶಿಷ್ಯನಾಗಿದ್ದರು. ನವ ದಂಪತಿ ಒಮ್ಮೆ ವಾಯುವಿಹಾರದಲ್ಲಿದ್ದಾಗ ವನದಲ್ಲಿ ಸೊಂಡಿಲುಗಳಿಂದ ಕೂಡಿದ ಭೃಶುಂಡಿ ಎಂಬ ಮುನಿಯನ್ನು ನೋಡಿದರು. ಅವರನ್ನು ನೋಡಿದ ದಂಪತಿಗೆ ನಗು ಬಂದಿತು.

ಇದನ್ನು ಗಮನಿಸಿದ ಭೃಶುಂಡಿಮುನಿ ನನ್ನನ್ನು ನೋಡಿ ಏತಕ್ಕಾಗಿ ಅಪಹಾಸ್ಯದ ನಗೆ ಬೀರಿದಿರಿ ಎಂದನು. ಆದರೂ ಆ ದಂಪತಿಗಳು ನಗುತ್ತಲೇ ಇದ್ದರು. ಭೃಶುಂಡಿ ಮುನಿಗೆ ಕೋಪ ತಡೆಯಲಾರದೆ ನೀವಿಬ್ಬರೂ ಯಾವ ಪ್ರಾಣಿಗಳಿಗೂ ಪ್ರಯೋಜನಕ್ಕೆ ಬಾರದ ಮರಗಳಾಗಿ ಜನಿಸಿರಿ ಎಂದು ಶಾಪವಿತ್ತರು. ಇದನ್ನು ಕೇಳಿದ ದಂಪತಿಗಳು ಹೆದರಿ ಮುನಿಯ ಪಾದಕ್ಕೆ ಎರಗಿ ತಮ್ಮ ತಪ್ಪಿಗೆ ಕ್ಷಮೆ ಕೇಳಿದರು ಹಾಗೂ ಈ ಶಾಪ ವಿಮೋಚನೆ ಯಾವಾಗ ಆಗುವುದು ಎಂದು ಕೇಳಿದರು. ಗಣಪತಿಯು ಪ್ರಸನ್ನವಾದಾಗ ಶಾಪ ವಿಮೋಚನೆ ಆಗುವುದು ಎಂದು ಹೇಳಿದರು. ಮುನಿಯ ಶಾಪದಂತೆ ಶಮೀಕಳು ಶಮೀವೃಕ್ಷವಾಗಿ, ಮಂದಾರನು ಮಂದಾರ ವೃಕ್ಷವಾಗಿ ಜನಿಸಿದರು. ನವ ದಂಪತಿ ಮನೆಗೆ ಬಾರದೆ ಇದ್ದರಿಂದ ತಂದೆ ತಾಯಿಗಳು ಹುಡುಕಿಕೊಂಡು ಕಾಡಿನೊಳಗೆ ಹೋದರು. ಅಲ್ಲಿ ಅವರು ಎರಡು ವಿಚಿತ್ರವಾದ ಮರಗಳನ್ನು ಕಂಡರು. ಅಲ್ಲದೆ ಋಷಿಯನ್ನು ಕೇಳಲು ನಡೆದ ಸಂಗತಿಯನ್ನು ತಿಳಿಸಿದರು.

ಶಾಪಗ್ರಸ್ತರಾಗಿದ್ದ ತನ್ನ ಅಳಿಯ ಮತ್ತು ಮಗಳಿಗೆ ದುರ್ವಾಸ ಮುನಿ ಹೇಳಿಕೊಟ್ಟಿದ್ದ ಗಣೇಶನ ಮಂತ್ರವನ್ನು ಹೇಳತೊಡಗಿದನು. ಮರಗಳ ರೂಪದಲ್ಲಿದ್ದ ಅಳಿಯ ಹಾಗೂ ಮಗಳು ಶ್ರದ್ಧಾಭಕ್ತಿಯಿಂದ ಮಂತ್ರವನ್ನು ಜಪಿಸುತ್ತಿದ್ದಂತೆ ಗಣಪತಿ ದರ್ಶನ ಕೊಟ್ಟನು. ಅವನ ದರ್ಶನದಿಂದ ಶಾಪ ವಿಮೋಚನೆಯಾಯಿತು. ಗಣಪತಿಯ ಅನುಗ್ರಹದಿಂದ ಮರಗಳಾಗಿದ್ದ ದಂಪತಿಗಳು ಮತ್ತೆ ಮೊದಲಿನಂತೆ ಆದರು.

ಶಮೀವೃಕ್ಷದ ಉಪಯೋಗ
* ಅರ್ಧಗಂಟೆ ಅಥವಾ ಒಂದು ಗಂಟೆ ಈ ಶಮೀವೃಕ್ಷದ ಕೆಳಗೆ ಕುಳಿತು ಧ್ಯಾನ ಮಾಡಿದರೆ ದೀರ್ಘಕಾಲೀನ ರೋಗಗಳಿದ್ದರೆ ಗುಣವಾಗುವುದು.
* ಹೃದ್ರೋಗ ಇದ್ದರೆ ಈ ಮರದ ಗಾಳಿಯನ್ನು ಪ್ರತಿದಿನ ಸೇವಿಸಿದ್ದರೆ ತೊಂದರೆ ನಿವಾರಣೆ ಆಗುವುದು.
* ಶಮೀ ವೃಕ್ಷ ಇರುವ ಸ್ಥಳದಲ್ಲಿ ಬಾವಿ ತೋಡಿಸಿದರೆ ಸಹಿ ನೀರು ಸಿಗುತ್ತದೆ.
* ವಾಸ್ತುದೋಷ ಇರುವ ಮನೆಯಲ್ಲಿ ಶಮೀವೃಕ್ಷದ ಎಲೆಯನ್ನು ದೇವರ ಮನೆಯಲ್ಲಿಟ್ಟರೆ ದೋಷ ನಿವಾರಣೆ.
* ಸಂತಾನಭಾಗ್ಯ ಇಲ್ಲದವರು ಈ ಶಮೀವೃಕ್ಷವನ್ನು ಬೆಳಗಿನ ಸಮಯದಲ್ಲಿ ಪ್ರದಕ್ಷಿಣಿ ಹಾಕಿದರೆ ಸಂತಾನ ಭಾಗ್ಯ ದೊರೆಯುವುದು.
* ದೀರ್ಘವಾದ ಕೆಮ್ಮು ಇದ್ದರೆ ಈ ವೃಕ್ಷದ ಚಕ್ಕೆಯಿಂದ ಕಷಾಯ ಮಾಡಿ ಕುಡಿದರೆ ಗುಣಮುಖವಾಗುವುದು.
* ವಿವಾಹಕ್ಕೆ ತಡೆಯಾದರೆ 48 ದಿನ ಈ ವೃಕ್ಷವನ್ನು ಪ್ರದಕ್ಷಿಣೆ ಹಾಕಬೇಕು.
* ಮಾಟ-ಮಂತ್ರ ಪ್ರಯೋಗವಾಗಿದ್ದರೆ ಈ ಮರಕ್ಕೆ 21 ದಿನ ಪೂಜೆ ಮಾಡಿದರೆ ಪ್ರಯೋಗದಿಂದ ಹೊರಬರಬಹುದು.
* ಪಾಂಡವರು ವನವಾಸದಲ್ಲಿದ್ದಾಗ ಅವರ ಶಸ್ತ್ರಗಳನ್ನು ಈ ಮರದ ಕೆಳಗೆ ಇಟ್ಟಿದ್ದರು. ಮಾಹಿತಿ ಮೊ. 9886013956.


-ಮಂಡಗದ್ದೆ ಪ್ರಕಾಶ ಬಾಬು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.