ಸ್ವರ್ಣರಂಜಿತ ಗೌರಿ
ಗೌರಿ ವ್ರತದಲ್ಲಿ ಸುಮಂಗಲೆಯರಿಗೆ ಬಾಗಿನ ಕೊಡುವ ಪದ್ಥತಿ ಇದೆ. ಬಾಗಿನವನ್ನು ಮರದ...

ಗೌರಿ ವ್ರತದಲ್ಲಿ ಸುಮಂಗಲೆಯರಿಗೆ ಬಾಗಿನ ಕೊಡುವ ಪದ್ಥತಿ ಇದೆ. ಬಾಗಿನವನ್ನು ಮರದ ಜೊತೆಯಲ್ಲಿ ಇಟ್ಟು ಕೊಡುವುದು ಸಂಪ್ರದಾಯ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲವರು ಆಕರ್ಷಕ ತಟ್ಟೆ ಬಾಕ್ಸ್, ಚೀಲಗಳಲ್ಲಿ ಬಾಗಿನದ ಸಾಮಾನುಗಳನ್ನು ಇಟ್ಟು ಕೊಡುತ್ತಾರೆ...
ಶೌನಕಾದಿ ಮಹರ್ಷಿಗಳು, ಲೋಕಕಲ್ಯಾಣಕ್ಕಾಗಿ ಹಲವು ವ್ರತಗಳನ್ನು ಬೆಳಕಿಗೆ ತಂದರು. ಸೂತಪುರಾಣಿಕರು ಯಾವ ವ್ರತ ಮಾಡಿದರೆ ಬಹುಬೇಗ ಸಂಕಲ್ಪಸಿದ್ಧಿಯಾಗುವುದು ಎಂಬುದನ್ನು ತಿಳಿಸಿದರು. ಈ ವ್ರತಗಳಲ್ಲಿ ಮುಖ್ಯವಾದವು ಮಹಿಳೆಯರಿಗಾಗಿಯೇ ಮಾಡಿರುವರು. ಅವುಗಳೆಂದರೆ ಗಜಗೌರಿ ವ್ರತ, ಭೀಮನ ಅಮವಾಸ್ಯೆ ವ್ರತ, ಮಂಗಳಗೌರಿ ವ್ರತ, ಸ್ವರ್ಣಗೌರಿ ವ್ರತ, ಪ್ರತಿ ವರ್ಷ ಸ್ವರ್ಣಗೌರಿ ವ್ರತ ಬರುವುದು ಭಾದ್ರಪದ ಶುಕ್ಲ ಪಕ್ಷದ ತದಿಗೆ ದಿನ.
ಸ್ವರ್ಣಗೌರಿ ವ್ರತ
ಈ ಹಬ್ಬದ ದಿನ ಮಂಗಳೆಯರು ಪ್ರಾತಃಕಾಲದಲ್ಲಿ ಎದ್ದು ಮಂಗಳ ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಿ, ನದಿ, ಬಾವಿ, ಕೆರೆಗಳ ಸಮೀಪಕ್ಕೆ ಹೋಗಿ ಗಂಗೆಪೂಜೆ ಮಾಡಿ, ನೀರನ್ನು ತೆಗೆದುಕೊಂಡು ಬರಬೇಕು. ಮನೆ ಬಾಗಿಲಿಗೆ ಬಂದಾಗ ಗಂಗೆ ತಂದವರಿಗೆ ಆರತಿ ಮಾಡಿ ಒಳಗೆ ಕರೆಸಿಕೊಳ್ಳಬೇಕು. ಮೊದಲೇ ನಿರ್ಮಿಸಿದ ಮಂಟಪದಲ್ಲಿ ಆ ಗಂಗೆಯನ್ನು ಕಲಶ ರೂಪದಲ್ಲಿ ಪ್ರತಿಷ್ಠಾಪಿಸಿ, ಅವರವರ ಸಂಪ್ರದಾಯದಂತೆ, ಮಣ್ಣಿನ ಅಥವಾ ಬೆಳ್ಳಿಯ ಗೌರಿಯ ಪ್ರತಿಮೆಯನ್ನು ಮಂಟಪದಲ್ಲಿ ಇಡಬೇಕು.
ಕೆಲವು ಕಡೆ ಅರಿಸಿನದ ಗೌರಿಯನ್ನು ಮಾಡಿ ಪೂಜಿಸುವರು. 16 ಗಂಟು ಹಾಕಿದ ಅರಿಶಿನದ ದಾರವನ್ನು ಎರಡು ವೀಳ್ಯದೆಲೆ ಮೇಲೆ ಇಟ್ಟು ಅದನ್ನೂ ಗೌರಿಯ ಸಮೀಪದಲ್ಲಿಡಬೇಕು. ಮರದ ಬಾಗಿನವನ್ನು ಮಂಟಪದ ಬಲಭಾಗದಲ್ಲಿ ಒಂದು ಮಣೆ ಮೇಲೆ ಇಡಬೇಕು. ಪುರೋಹಿತರ ಮೂಲಕ ತಮ್ಮ ಸಂಪ್ರದಾಯದಂತೆ ಪೂಜಿಸಬೇಕು. ಪೂಜೆಯ ನಂತರ ಗೌರೀ ದಾರವನ್ನು ಕೈಗೆ ಕಂಕಣ ಕಟ್ಟಿಸಿಕೊಳ್ಳಬೇಕು. ಹೊಸದಾಗಿ ಮದುವೆ ಆದ ಹೆಣ್ಣುಮಕ್ಕಳು 16 ಜೊತೆ ಬಾಗಿನವನ್ನು 16 ಸುಮಂಗಲೆಯರಿಗೆ ನೀಡಬೇಕು. ಹಾಗೂ ತಾಯಿಗೆ ಒಂದು ವಿಶೇಷ ಬಾಗಿನವನ್ನು ಕೊಡಬೇಕು. 16 ವರ್ಷ ಸತತವಾಗಿ ಗೌರಿಪೂಜೆ ಮಾಡಿದ ಸುಮಂಗಲೆಯರು ಕೊನೆಯಲ್ಲಿ ಉದ್ಯಾಪನೆ ಮಾಡಬೇಕು. ಹಾಗೂ 16 ಜನ ಸುಮಂಗಲೆಯರಿಗೆ ಬಾಗಿನ ದಾನ ತಾಯಿಗೆ ಒಂದು ಬಾಗಿನ ಕೊಡಬೇಕು. ತಾಯಿ ಇಲ್ಲದವರು ಅತ್ತಿಗೆ, ದೊಡ್ಡಮ್ಮ, ಚಿಕ್ಕಮ್ಮನವರಿಗೆ ಕೊಡಬಹುದು.
ಏನದು ಗೌರಿ ಬಾಗಿನ?
ಗೌರಿ ವ್ರತದಲ್ಲಿ ಸುಮಂಗಲೆಯರಿಗೆ ಬಾಗಿನ ಕೊಡುವ ಪದ್ಧತಿ ಇದೆ. ಬಾಗಿನವನ್ನು ಮರದ ಜೊತೆಯಲ್ಲಿ ಇಟ್ಟು ಕೊಡುವುದು ಸಂಪ್ರದಾಯ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲವರು ಆಕರ್ಷಕ ತಟ್ಟೆ, ಬಾಕ್ಸ್, ಚೀಲಗಳಲ್ಲಿ ಬಾಗಿನದ ಸಾಮಾನುಗಳನ್ನು ಇಟ್ಟು ಕೊಡುತ್ತಾರೆ.
ಬಾಗಿನದಲ್ಲೇನಿದೆ?
ಒಂದು ಜೊತೆ ಮೊರ, ಮೊರಕ್ಕೆ ಅರಿಸಿನ ಕುಂಕುಮ ಹಚ್ಚಿರುತ್ತಾರೆ. ಅದರಲ್ಲಿ ಅರಿಸಿನ, ಕುಂಕುಮ, ಅಕ್ಕಿ, ಉದ್ದಿನ ಬೇಳೆ, ರವೆ, ಬೆಲ್ಲದ ಅಚ್ಚು, ಉಪ್ಟು, ತೆಂಗಿನಕಾಯಿ, ಹಣ್ಮು, ಅಲಂಕಾರಕ್ಕೆ ಬಳಸುವ ಬಳೆ, ಬಿಚ್ಚೋಲೆ, ಕನ್ನಡಿ ಕಪ್ಪು, ಬಾಚಣಿಕೆ ಎಲೆ ಅಡಕೆ, ರವಿಕೆ ಬಟ್ಟೆ. ಇದು ಸುಮಂಗಲೆಯರಿಗೆ ಕೊಡುವ ಬಾಗಿನ. ಗೌರಿಗೆ ಕೊಡುವ ಬಾಗಿನದಲ್ಲಿ ಇದರ ಜೊತೆಯಲ್ಲಿ ಪೂಜಾ ಸಾಮಗ್ರಿಗಳು, ಗೆಜ್ಜೆವಸ್ತ್ರ, ಶ್ರೀಗಂಧ, ಊದಿನಕಡ್ಡಿ ದಕ್ಷಣೆ ಇಡಬೇಕು. ಮದುವೆಯಾದ ಮೊದಲನೇ ವರ್ಷ ವ್ರತ ಮಾಡುವುದು. 16 ಜೊತೆ ಬಾಗಿನವನ್ನು ಸುಮಂಗಲಿಯರಿಗೆ ಕೊಡಬೇಕು. ವಿವಾಹ ಆಗದೆ ಇರುವ ಮಹಿಳೆಯರು ಈ ವ್ರತವನ್ನು ಮಾಡಿದರೆ ಶೀಘ್ರ ವಿವಾಹವಾಗುವುದು. ಸಂತಾನ ಇಲ್ಲದವರು ಮಾಡಿದರೆ ಸಂತಾನವಾಗುವುದು. ಉತ್ತಮ ಆರೋಗ್ಯಕ್ಕಾಗಿಯೂ ಈ ವ್ರತ ಆಚರಿಸುತ್ತಾರೆ.
-ಮಂಡಗದ್ದೆ ಪ್ರಕಾಶ ಬಾಬು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


