ಕೃಷಿ-ಪರಿಸರ

ಮಧ್ಯರಾತ್ರಿಯಲ್ಲಿ ಎದ್ದು ನೀವು ನಿಮ್ಮ ಅಡುಗೆಮನೆಯಲ್ಲಿ ಸೋರುತ್ತಿದ್ದ ನೆಲ್ಲಿಯನ್ನುನಿಲ್ಲಿಸಿದ್ದು ಯಾವಾಗ?

ಪ್ರಾಮಾಣಿಕವಾಗಿ ನಿಮ್ಮ ಉತ್ತರ ಇಲ್ಲ ಎಂದಾದರೆ, ಒಂದು ಸಮಾಜವಾಗಿ ನಾವು, ನಮ್ಮ ನೀಲಿ ಗ್ರಹದಲ್ಲಿ ಜೀವ ಉಳಿಸುವ ಶಕ್ತಿಯಾದ ನೀರಿನ ಬೆಲೆಯನ್ನು ಅರಿತುಕೊಳ್ಳುವ ಅಗತ್ಯವಿದೆ.

ಮಧ್ಯರಾತ್ರಿಯಲ್ಲಿ ಎದ್ದು ನೀವು ನಿಮ್ಮ ಅಡುಗೆಮನೆಯಲ್ಲಿ ಸೋರುತ್ತಿದ್ದ ನೆಲ್ಲಿಯನ್ನುನಿಲ್ಲಿಸಿದ್ದು ಯಾವಾಗ?
Published On :

ಪ್ರಾಮಾಣಿಕವಾಗಿ ನಿಮ್ಮ ಉತ್ತರ ಇಲ್ಲ ಎಂದಾದರೆ, ಒಂದು ಸಮಾಜವಾಗಿ ನಾವು, ನಮ್ಮ ನೀಲಿ ಗ್ರಹದಲ್ಲಿ ಜೀವ ಉಳಿಸುವ ಶಕ್ತಿಯಾದ ನೀರಿನ ಬೆಲೆಯನ್ನು ಅರಿತುಕೊಳ್ಳುವ ಅಗತ್ಯವಿದೆ.
ನೀರು ಎಂಬ ಸಂಪನ್ಮೂಲದ ಬೆಲೆ ಶೂನ್ಯ ಎಂದು ಹಾಗು ನಮ್ಮ ಬದುಕಿಗೆ ಅದು ಅತ್ಯಂತ ಅವಶ್ಯಕ ಎಂದು ನಾವು ಪರಿಗಣಿಸುತ್ತೇವೆ ಎಂಬುದು ಎಲ್ಲರಿಗೂ ಮುಜುಗರವಲ್ಲವೆ?
ನಿಮ್ಮ ಆಯ್ಕೆ ಮಾಡಿ! ಮೊಬೈಲ್ ಅಥವಾ ನೀರು?
ನಿಮ್ಮ ಮೊದಲ ಸಂಬಳದ ಚೆಕ್ ಬಂದಾಗಿನಿಂದ ನೀವು ಇದುವರಗೆ ಎಷ್ಟು ಮೊಬೈಲ್ ಗಳನ್ನು ಖರೀದಿಸಿದ್ದೀರಿ ಎಂದು ಯೋಚಿಸಿ. 3ಕ್ಕಿಂತ ಹೆಚ್ಚು? ಸರಿ, 5ಕ್ಕಿಂತ ಕಡಿಮೆ ಇಲ್ಲದಿರಬಹುದು? ಅದು ನಮಗೆ ದುಬಾರಿಯಾಗಲೀ ಇಲ್ಲದಿರಲಿ, ನಾವು ಯಾವಾಗಲು ಇತ್ತೀಚಿನ ಮೊಬೈಲ್ ಗ್ಯಾಜೆಟ್ ಹೊಂದಿರಲು ಬಯಸುತ್ತೇವೆ! ಒಬ್ಬ ವ್ಯಕ್ತಿಯೆಂತೆ ನಾವುಗಳೆಲ್ಲಾ ನಮ್ಮ ಜೀವಿತಾವಧಿಯಲ್ಲಿ ಮೊಬೈಲ್ ಗಳನ್ನು ಕೊಳ್ಳಲು ಖರ್ಚು ಮಾಡಿರುವ ಅಂದಾಜು ಹಣದ ಮೊತ್ತ ಒಂದು ಲಕ್ಷಕ್ಕಿಂತ ಹೆಚ್ಚಾಗಿರಬಹುದು. ನೆನಪಿಡಿ, ಇದರಲ್ಲಿ ಮೊಬೈಲ್ ಕರೆ ದರಗಳು ಸೇರುವುದಿಲ್ಲ!
ಅದರಂತೆ, ನಾವು ನೀವುಗಳು ನೀರಿನ ಬಿಲ್ ಗಾಗಿ ಖರ್ಚು ಮಾಡಿರುವ ಹಣವನ್ನು ಲೆಕ್ಕ ಹಾಕಿದರೆ, ಅದು ನಾವು ಮೊಬೈಲ್ ಗಳಿಗೆ ಖರ್ಚು ಮಾಡಿದ ಒಂದಂಶದ ಭಾಗದಷ್ಟಿರಬಹುದು.
ಆದ್ದರಿಂದ, ಭೂಮಿಯ ಮೇಲೆ ನೀರನ್ನು ಸಹ ಅಮೂಲ್ಯವೆಂದು ಎಂದು ಪರಿಗಣಿಸಲು ಅದನ್ನು ದುಬಾರಿ ಬೆಲೆಯ ಮೊಬೈಲ್ ಫೋನ್ ನ ಆಕಾರದಲ್ಲಿ ಅಥವಾ ಅದರಂತೆ ಪ್ಯಾಕ್ ಮಾಡಿ ಬಳಸಬೇಕೇ?

Story image



ನೀರು ಬರೀ ಅಮೂಲ್ಯ ಪದಾರ್ಥ ಮಾತ್ರವಲ್ಲ, ಅದು ಅತ್ಯಮೂಲ್ಯ ಸಹ ಎಂಬುದನ್ನು ನಾವು ಮನಗಾಣಬೇಕು. ನೀರು ನಮ್ಮ ಗ್ರಹದ 75% ಜಾಗವನ್ನು ಆಕ್ರಮಿಸಿಕೊಂಡಿರಬಹುದು, ಆದರೆ, ಅದರಲ್ಲಿ 2.5% ಮಾತ್ರ ಕುಡಿಯಲು ಯೋಗ್ಯ. ಮುಂದಿನ ಒಂದೆರಡು ದಶಕಗಳಲ್ಲಿ ಏಷ್ಯಾ ಖಂಡ ಒಂದರಲ್ಲೇ ಕುಡಿಯುವ ನೀರಿನ ಬೇಡಿಕೆ 3 ಪಟ್ಟು ಹೆಚ್ಚಾಗಲಿದೆ ಎಂದು ಅಂದಾಜು ಮಾಡಲಾಗಿದೆ!
ಶೋಚನೀಯವೆಂದರೆ, ಸಮುದ್ರದ ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸಲು ನಮ್ಮ ಬಳಿ ಸರಿಯಾದ ತಂತ್ರಜ್ಞಾನ ಇಲ್ಲ.

ನೀರು ನಮ್ಮ ಗ್ರಹದ ಮೇಲಿರುವ ಅತ್ಯಂತ ಅಮೂಲ್ಯ ಸಂಪನ್ಮೂಲ. ಅದಕ್ಕೆ ಬದಲಿ ಇಲ್ಲ. ಯಾವುದೇ ಮಂತ್ರದಂಡದಿಂದ ನಾವು ನಮ್ಮ ನೈಸರ್ಗಿಕ ಜಲ ಸಂಪನ್ಮೂಲಗಳನ್ನು ಪುನರುತ್ಪಾದಿಸುತ್ತೇವೆ ಎಂದುಕೊಳ್ಳುವುದು ಬರೀ ಕಾಲ್ಪನಿಕ.
ಐಷಾರಾಮಿ ವಸ್ತುಗಳನ್ನು ಹೊಂದುವುದು ಕೆಟ್ಟದ್ದಲ್ಲ. ನಮ್ಮಲ್ಲಿ ಸಾಕಷ್ಟು ಹಣ ಇದ್ದರೆ, ನಾವು ನಮ್ಮ ಜೀವನವನ್ನು ಹೆಚ್ಚು ಆರಾಮವನ್ನಾಗಿ, ಸಾಧ್ಯವಾದರೆ ಐಷಾರಾಮಿಯನ್ನಾಗಿ ಸಹ ಮಾಡಿಕೊಳ್ಳಬೇಕು. ಆದರೆ, ಅದರಲ್ಲಿ ಜವಾಬ್ದಾರಿ ಸಹ ಇರಬೇಕು. ನಾವು ಹೊಂದಿರುವ ಲಕ್ಷುರಿ ಬ್ರ್ಯಾಂಡ್ ಗಳನ್ನು ಕಾಪಾಡಿಕೊಳ್ಳುವಂತೆ, ಅದೇ ರೀತಿ ನಮ್ಮ ಸೀಮಿತ ಜಲ ಸಂಪನ್ಮೂಲಗಳನ್ನು ಸಂರಕ್ಷಿಸಿ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯಲ್ಲವೇ? ಹಾಗು, ಈ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಬಿಸುವುದು ತುಂಬಾ ಕಷ್ಟವೇನಲ್ಲ. ಅವುಗಳಲ್ಲಿ ಕೆಲವೆಂದರೆ;

Story image



- ನಿಮ್ಮ ಮನೆ ಅಥವಾ ಅಕ್ಕಪಕ್ಕದಲ್ಲಿ ನೀರು ಸೋರಿಕೆಯ ಪೈಪ್ ಗಳಿದ್ದರೆ, ಅವುಗಳನ್ನು ಬದಲಾಯಿಸಿ. ಪ್ರತಿಯೊಂದು ಹನಿಯೂ ಅಮೂಲ್ಯ.
- ನಿಮ್ಮ ಏರ್ ಕಂಡೀಶನರ್ ಗಳಿಂದ ಹೊರಬರುವ ನೀರನ್ನು ಗಿಡಗಳಿಗೆ ಹಾಕಲು ಬಳಸಿ. ನೀರಿನ ಮರುಬಳಕೆ ಎಂದರೆ ನೀರು ಉಳಿಸಿದಂತೆ.
- ಅದೇ ರೀತಿ, ನಿಮ್ಮ ಆರ್ ಓ ದಿಂದ ಬರುವ ಸಂಸ್ಕರಿಸದ ನೀರನ್ನು ನಿಮ್ಮ ಪಾತ್ರೆ ಮತ್ತು ಪ್ಲ್ಯಾಟ್ ತೊಳೆಯಲು ಬಳಸಿ. ಕುಡಿಯುವ ನೀರನ್ನು ಈ ಉದ್ದೇಶಗಳಿಗೆ ಬಳಸದಿರಲು ಪ್ರಯತ್ನಿಸಿ.
- ಪರಿಸರ ಸ್ನೇಹಿ ಪದಾರ್ಥಗಳಿಂದ ಮಾಡಿದ ಉತ್ಪನ್ನಗಳನ್ನೇ ಕೊಳ್ಳಿರಿ.
- ಕಡಿಮೆ ಪೇಪರ್ ಬಳಸಿ. ನಿಮ್ಮ ದಾಖಲೆಗಳನ್ನು ತಾಂತ್ರಿಕವಾಗಿ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ಕಾಗದವನ್ನು ಮರಗಳನ್ನು ಕತ್ತರಿಸಿ ಅದರ ತಿರುಳಿನಿಂದ ಮಾಡಲಾಗುತ್ತದೆ. ಇದರಿಂದ ಮಣ್ಣು ಸಡಿಲವಾಗುತ್ತದೆ ಮತ್ತು ಇದರಿಂದ ನದಿಗಳಲ್ಲಿ ಹೂಳು ತುಂಬುತ್ತದೆ ಮತ್ತು ನೀರು ಹರಿಯುವಿಕೆಗೆ ಅಡ್ಡಿಯಾಗುತ್ತದೆ. ಮರಗಳನ್ನು ಕಡಿಯುವುದರಿಂದ ಉಂಟಾಗುವ ಮತ್ತೊಂದು ಗಂಭೀರ ಪರಿಣಾಮವೆಂದರೆ ಹವಾಮಾನ ರೀತಿಗಳಲ್ಲಿ ಬದಲಾವಣೆ.
- ನಿಮ್ಮ ಸೆಲ್ ಫೋನ್ ಬ್ಯಾಟರಿಗಳಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನು ಅಂತರ್ಜಲ ಮಲಿನವಾಗದ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಬೇಕು. ನಮ್ಮ ಬಾವಿ ಮತ್ತು ನದಿಗಳಲ್ಲಿ ಇರುವ ಕ್ಯಾಡ್ಮಿಯಮ್, ಸೀಸ, ನಿಕಲ್, ಝಿಂಕ್ ಇತ್ಯಾದಿಯಂತಹ ಕಟು ಲೋಹಗಳ ಅಪಾಯಕಾರಿ ಮಟ್ಟಗಳು ನಿಮಗೆ ತಿಳಿದರೆ ನೀವು ಆಶ್ಚರ್ಯಗೊಳ್ಳುತ್ತೀರಿ.
- ನಮ್ಮ ನದಿಗಳನ್ನು ಗೌರವಿಸಿ. ಸಾವಯವ ಮತ್ತು ಅಜೈವಿಕ ತ್ಯಾಜ್ಯವನ್ನು ನದಿಗಳಿಗೆ ಹಾಕಬೇಡಿ. ದುರದೃಷ್ಟವೆಂದರೆ, ನಮ್ಮ ಎರಡು ಅತಿದೊಡ್ಡ ನದಿಗಳಾದ ಗಂಗಾ ಮತ್ತು ಯಮುನಾ, ಈಗ ವಿಶ್ವದಲ್ಲಿಯೇ ಅತಿಹೆಚ್ಚು ಕಲುಷಿತ ನದಿಗಳ ಪಟ್ಟಿಯಲ್ಲಿ ಸೇರಿವೆ. ಕಲುಷಿತ ನದಿಗಳಿಂದ ನಮ್ಮ ಹಣ್ಣು ಮತ್ತು ತರಕಾರಿಗಳು ಕಲುಷಿತಗೊಳ್ಳುತ್ತವೆ. ಈಗ ನಿಜವಾಜ ಚರಾಸ್ತಿ ಎಂದರೆ ನಮ್ಮ ನದಿಗಳನ್ನು ಉಳಿಸಿಕೊಳ್ಳುವುದು ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ.
- ಸಾರ್ವಜನಿಕ ಸಾರಿಗೆಯನ್ನು ಅತಿಹೆಚ್ಚು ಬಳಸಿ. ನಾವು ನಮ್ಮ ಸ್ವಂತ ಕಾರುಗಳನ್ನು ಹೆಚ್ಚೆಚ್ಚು ಬಳಸಿದರೆ, ನಮ್ಮ ಪರಿಸರದ ಮೇಲೆ ಒತ್ತಡ ಹೆಚ್ಚುತ್ತಲೇ ಇರುತ್ತದೆ. ಕಡೇಯದಾಗಿ, ಇದರಿಂದ ಅನಿಯಮಿತ ಮತ್ತು ಅನಿಶ್ಚಿತ ಮಳೆಯಾಗುತ್ತದೆ.
- ನೀರನ್ನು ಅತ್ಯಮೂಲ್ಯ ಪದಾರ್ಥವನ್ನಾಗಿ ನೋಡಿ. ಅದು ನಿಮ್ಮ ಕುಟುಂಬದ ಆಸ್ತಿ ಅಥವಾ ವಜ್ರಗಳಿಗಿಂತಲೂ ಹೆಚ್ಚು ಅಮೂಲ್ಯ. ಇದು ಏಕೆಂದರೇ, ನೀರು ಬೇಗನೆ ಕ್ಷಯಿಸುತ್ತದೆ.

Story image



ಎಲ್ಲಿಯವರಗೆ ನಾವು ನಾಗರೀಕರು ಈ ಸಲಹೆಗಳನ್ನು ಅಳವಜಿಸಿಕೊಳ್ಳುವುದಿಲ್ಲವೋ, ಅಲ್ಲಿಯವರಗೆ ನಾವೇ ಸೃಷ್ಟಿಸಿಕೊಂಡ ಕುಗ್ಗುತ್ತಿರುವ ನೀರಿನ ಸಮಸ್ಯೆಯನ್ನು ನೋಡುತ್ತಲೇ ಇರಬೇಕಾಗುತ್ತದೆ.
ನೀರಿನ ಸಮಸ್ಯೆಯನ್ನು ತಗ್ಗಿಸಲು ಕಾರ್ಪೊರೇಟ್ ಸಂಸ್ಥೆಗಳು ಸಹ ತಮ್ಮದೇ ಪ್ರಯತ್ನ ಮಾಡುತ್ತಿವೆ. ನಮ್ಮ ಜಲ ಸಂಪನ್ಮೂಲಗಳನ್ನು ಕಾಪಾಡಿಕೊಳ್ಳಲು ಮತ್ತು ಬಲಪಡಿಸಲು ಫಿನೊಲೆಕ್ಸ್ ನಂತಹ ಕಂಪನಿಗಳು ವಿವಿಧ ಸಮುದಾಯಗಳ ಜೊತೆ, ಮಹಿಳೆಯರು, ಮಕ್ಕಳು ಮತ್ತು ಸಮುದಾಯ ನಾಯಕರುಗಳ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಿವೆ. ಪಿವಿಸಿ ಪೈಪ್ಸ್ ಮತ್ತು ಫಿಟ್ಟಿಂಗ್ ಗಳನ್ನು ವಿಶೇಷವಾಗಿ ತಯಾರಿಸುವ ಫಿನೊಲೆಕ್ಸ್ ಪೈಪ್ಸ್, ಜಲ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ತನ್ನ ಸಿಎಸ್ಆರ್ ಪಾಲುದಾರ ಮುಕುಲ್ ಮಾಧವ್ ಫೌಂಡೇಶನ್ ಮೂಲಕ ಸಮುದಾಯಗಳೊಂದಿಗೆ ಕೈಜೋಡಿಸುತ್ತಿದೆ. ತನ್ನ ಹಲವಾರು ಕಾರ್ಯಕ್ರಮಗಳೊಂದಿಗೆ ಕಂಪನಿಯು ಬಹಳ ಜನರಲ್ಲಿ ನೀರು ಒಂದು ಅಮೂಲ್ಯ ಸಂಪನ್ಮೂಲವೆಂಬ ಅರಿವನ್ನು ತರಲು ನೆರವಾಗಿದೆ.
ಅತ್ಯಮೂಲ್ಯ ಪದಾರ್ಥವಾಗಿ ನೀರಿನ ಭವಿಷ್ಯ ಅತಿಸೂಕ್ಷ್ಮ. ಫಿನೊಲೆಕ್ಸ್ ನಂತಹ ಕಂಪನಿಗಳ ಮತ್ತು ನಾಗರೀಕರ ಸಂಘಟಿತ ಪ್ರಯತ್ನಗಳಿಂದ ನೀರಿನ ಕುರಿತು ನಮ್ಮ ದೃಷ್ಟಿಕೋನದಲ್ಲಿ ಬೃಹತ್ ಬದಲಾವಣೆಯಾಗುತ್ತದೆ ಎಂಬುದನ್ನು ಮಾತ್ರ ನಾವು ನಿರೀಕ್ಷಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.