ಬೇಳೆ ಬರ ನೀಗಲು ಹೊಸ ತಳಿ
ಭಾರತದ ತೊಗರಿ ಬೇಳೆ ಕೊರತೆಗೆ ಶೀಘ್ರವೇ ಪರಿಹಾರ ಸಿಗಲಿದೆ. ಹೌದು, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು (ಐಎಆರ್‍ಐ) ಕೇವಲ...

ನವದೆಹಲಿ: ಭಾರತದ ತೊಗರಿ ಬೇಳೆ ಕೊರತೆಗೆ ಶೀಘ್ರವೇ ಪರಿಹಾರ ಸಿಗಲಿದೆ. ಹೌದು, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು (ಐಎಆರ್‍ಐ) ಕೇವಲ 120 ದಿನಗಳಲ್ಲಿ ಕಟಾವಿಗೆ ಬರುವ ತೊಗರಿ ತಳಿಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ.
ಸದ್ಯ ಭಾರತದಲ್ಲಿ ಚಾಲ್ತಿಯಲ್ಲಿರುವ ತಳಿಗಳು 160 ರಿಂದ 180 ದಿನಗಳಲ್ಲಿ ಕಟಾವಿಗೆ ಬರುತ್ತಿದ್ದು, ಪ್ರತಿ ಹೆಕ್ಟೇರ್‍ಗೆ 20 ಕ್ವಿಂಟಾಲ್‍ನಷ್ಟು ಫಸಲು ನೀಡುತ್ತಿವೆ. ಆದರೆ, ಹೊಸ ತಳಿ ಕೇವಲ 120 ದಿನಗಳಲ್ಲೇ ಕಟಾವಿಗೆ ಬರಲಿದ್ದು, 20 ಕ್ವಿಂಟಾಲ್ ಫಸಲು ನೀಡಲಿದೆ ಎಂದು ವಿಜ್ಞಾನಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಬಳಕೆಯಲ್ಲಿರುವ ತೊಗರಿ ತಳಿಗಳು ಜೂನ್-ಜುಲೈನಲ್ಲಿ ನಾಟಿ ಮಾಡಿದರೆ, ಮಾಚ್ರ್ -ಏಪ್ರಿಲ್‍ನಲ್ಲಿ... ಅಂದರೆ, 250ರಿಂದ 280 ದಿನಗಳ ನಂತರ ಫಸಲು ನಿಡುತ್ತವೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಬಳಕೆಯಲ್ಲಿರುವ ತಳಿಗಳು 160ರಿಂದ 180 ದಿನಗಳಲ್ಲಿ ಹೆಕ್ಟೇರ್‍ಗೆ 20 ಕ್ವಿಂಟಾಲ್ ಫಸಲು ನಿಡುತ್ತವೆ.
'ಹೊಸ ತಳಿಗೆ ಪಿಎಡಿಟಿ-16 ಎಂದು ನಾಮಕರಣ ಮಾಡಲಾಗಿದೆ. ಇದು ಸಂಕರಗೊಂಡ ತಳಿ. ಸದ್ಯ ಈಗ ಬಳಕೆಯಲ್ಲಿರುವ ತಳಿಗಳು 175 ಸೆ.ಮೀಗಳಷ್ಟು ಬೆಳವಣಿಗೆ ಹೊಂದಿದ್ದು, ಬೆಳೆಯುತ್ತಾ ಹೋದಂತೆಲ್ಲ ಕವಲೊಡೆಯುತ್ತದೆ. ನಂತರ ಮೊಗ್ಗೊಡೆಯಲು ಆರಂಭಿಸುತ್ತದೆ. ಆದರೆ, ಈಗ ಅಭಿವೃದ್ಧಿಗೊಳಿಸಿರುವ ತಳಿ 95 ಸೆ.ಮೀ ಉದ್ದದ ಬೆಳವಣಿಗೆ ಹೊಂದಿದ್ದು, ಹೆಚ್ಚು ಹೂಗಳನ್ನು ಬಿಡುತ್ತದೆ. ಹೂ ಆರಂಭವಾದ ಕೂಡಲೇ ಗಿಡದ ಬೆಳವಣಿಗೆ ನಿಲ್ಲುತ್ತದೆ. ಕಾಳು ಕೂಡಲು ಆರಂಭಿಸುತ್ತದೆ. ಇಷ್ಟೇ ಅಲ್ಲ, ಬೇರೆ ತಳಿಗಳು ಕಟಾವಿಗೆ ಬಂದಿದ್ದರೂ, ಇನ್ನೂ ಹೂಗಳನ್ನು ಬಿಡುತ್ತಿರುತ್ತದೆ.
ಕಾಳುಗಟ್ಟಬೇಕಾದ ಕಾಯಿಗಳು, ಹೂಗಳು ಇನ್ನೂ ಜೀವಂತ ಇರುತ್ತವೆ. ಕಟಾವಿನ ವೇಳೆ ಇವು ನಾಶವಾಗುವ ಸಾಧ್ಯತೆಗಳೂ ಇರುತ್ತವೆ. ಕಟಾವಿನ ವೇಳೆ ಇವು ನಾಶವಾಗುವ ಸಾಧ್ಯತೆಗಳೂ ಇರುತ್ತವೆ. ಆದರೆ, ಪಿಎಡಿಟಿ-16 ತಳಿಯಲ್ಲಿ ಹಾಗಾಗುವುದಿಲ್ಲ, ಎಂದು ಐಎಆರ್ಐನ ತಳಿ ಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ತಂಡದ ನೇತೃತ್ವ ವಹಿಸಿದ್ದ ಪ್ರಭು ಮತ್ತು ಆರ್ ಎಸ್ ರಾಜೆ ತಿಳಿಸಿದ್ದಾರೆ. ಈ ಬೆಳೆ ಪ್ರಾಯೋಗಿಕವಾಗಿ ಯಶಸ್ವಿಯಾಗಿದ್ದು, ವರ್ಷದಲ್ಲಿ ಎರಡು ಫಸಲು ನೀಡುವಷ್ಟು ಶಕ್ತವಾಗಿದೆ. ಈ ತಳಿ ಜಾರಿಗೆ ಬಂದರೆ, ಬೇಳೆ ಅಭಾವ ನೀಗುವ ಸಾಧ್ಯತೆಗಳಿವೆ ಎನ್ನುವುದು ತಜ್ಞರ ಅಭಿಪ್ರಾಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


