ಸೀನುವ ಕೋತಿ, ನಡೆಯುವ ಮೀನು: ಹಿಮಾಲಯದಲ್ಲಿ ೨೦೦ ಹೊಸ ಜೀವಿಗಳ ಪತ್ತೆ
ಸುಮಾರು ದೂರ ನೆಲದ ಮೇಲೆ ನಡೆದು ವಾತಾವರಣದ ಗಾಳಿಯನ್ನೇ ಉಸಿರಾಡಿ ಬದುಕಬಲ್ಲ ಮೀನು, ಮಳೆಯಲ್ಲಿ ಸೀನುವ ಕೋತಿಯನ್ನೂ ಒಳಗೊಂಡಂತೆ ಪೂರ್ವ ಹಿಮಾಯದಲ್ಲಿ ೨೦೦

ಸುಮಾರು ದೂರ ನೆಲದ ಮೇಲೆ ನಡೆದು ವಾತಾವರಣದ ಗಾಳಿಯನ್ನೇ ಉಸಿರಾಡಿ ಬದುಕಬಲ್ಲ ಮೀನು, ಮಳೆಯಲ್ಲಿ ಸೀನುವ ಕೋತಿಯನ್ನೂ ಒಳಗೊಂಡಂತೆ ಪೂರ್ವ ಹಿಮಾಯದಲ್ಲಿ ೨೦೦ ಬಗೆಯ ಹೊಸ ಜೀವಿಗಳನ್ನು ಪತ್ತೆ ಹಚ್ಚಿರುವುದಾಗಿ ಲಾಭರಹಿತ ಸಂಸ್ಥೆ ಡಬ್ಲ್ಯು ಡಬ್ಲ್ಯು ಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಸೋಮವಾರ ಬಿಡುಗಡೆಯಾದ 'ಹಿಡನ್ ಹಿಮಾಲಯಾಸ್: ಎಷಿಯಾಸ್ ವಂಡರ್ಲ್ಯಾಂಡ್' ಎಂಬ ವರದಿಯಲ್ಲಿ ೨೦೦ ಬಗೆಯ ಜೀವರಾಶಿಯಲ್ಲಿ ೧೩೩ ಬಗೆಯ ಸಸ್ಯಗಳು, ೩೯ ಬಗೆಯ ಆಕಶೇರುಕಗಳು, ೨೬ ಬಗೆಯ ಮೀನುಗಳು, ೧೦ ಬಗೆಯ ಉಭಯವಾಸಿಗಳು, ಒಂದು ಸರೀಸೃಪ, ಒಂದು ಪಕ್ಷಿ ಮತ್ತು ಒಂದು ಸಸ್ತನಿಯನ್ನು ೨೦೦೯ ಮತ್ತು ೨೦೧೪ರ ಮಧ್ಯ ಸಂಶೋಧಿಸಿರುವುದಾಗಿ ತಿಳಿಸಿದೆ. ಇದು ಭೂತಾನ್, ಭಾರತ, ನೇಪಾಳ, ಮಯನ್ಮಾರ್, ಬರ್ಮಾ ಮತ್ತು ಟಿಬೆಟ್ ದೇಶಗಳ ಹಿಮಾಲಯ ಶ್ರೇಣಿಯನ್ನು ಒಳಗೊಂಡಿದೆ.
ಈ ಭಾಗದಲ್ಲಿ ಹೆಚ್ಚುತ್ತಿರುವ ಮನುಷ್ಯನ ಹಸ್ತಕ್ಷೇಪ, ಅಭುವೃದ್ಧಿ ಕೆಲಸಗಳು ಈ ಜೀವರಾಶಿಗೆ ಮಾರಕವಾಗಬಹುದು ಎಂದು ಕೂಡ ಈ ಸಂಸ್ಥೆ ಎಚ್ಚರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


