ಆಮದು ಸೇಬಿಗೆ ಒಂದೇ ಬಂದರು
ಸೇಬು ಪ್ರಿಯರಿಗೆ ಅಷ್ಟೇನೂ ಸವಿ ಸುದ್ದಿಯಲ್ಲ ಇದು. ಧಾರಾಳವಾಗಿ ಆಮದಾಗುತ್ತಿದ್ದ ಸೇಬು ಇನ್ನು ಮುಂದೆ ಪಶ್ಚಿಮ ಕರಾವಳಿಯಲ್ಲಿ ಒಂದೇ ಬಂದರಿಗೆ ಸೀಮಿತವಾಗಲಿದೆ...

Published On :
ಮುಂಬೈ: ಸೇಬು ಪ್ರಿಯರಿಗೆ ಅಷ್ಟೇನೂ ಸವಿ ಸುದ್ದಿಯಲ್ಲ ಇದು. ಧಾರಾಳವಾಗಿ ಆಮದಾಗುತ್ತಿದ್ದ ಸೇಬು ಇನ್ನು ಮುಂದೆ ಪಶ್ಚಿಮ ಕರಾವಳಿಯಲ್ಲಿ ಒಂದೇ ಬಂದರಿಗೆ ಸೀಮಿತವಾಗಲಿದೆ.
ಇನ್ನು ಮುಂಬೈಯ ನ್ಹಾವಾ ಶೆವಾ ಬಂದರಿಗೆ ಸೇಬು ಆಮದಾಗಬೇಕೆಂದು ವಿದೇಶ ವ್ಯಾಪಾರ ಮಹಾ ನಿರ್ದೇಶನಾಲಯ ಆದೇಶಿಸಿದೆ.
ಇದು ಜಾರಿಗೆ ಬಂದರೆ, ದಕ್ಷಿಣ ಭಾರತೀಯ ನಗರಗಳಾದ ಬೆಂಗ ಳೂರು, ವಿಶಾಖಪಟ್ಟಣ, ಹೈದರಾಬಾದ್, ವಿಜಯವಾಡ, ಚೆನ್ನೈ ಮುಂತಾದ ಕಡೆ ಈಗ ಕಿಲೋಗೆ ರು. 250 350ಕ್ಕೆ ಸಿಗುತ್ತಿದ್ದ ಆಮದು ಸೇಬಿನ ದರ ಇನ್ನು ದುಪ್ಪಟ್ಟಾಗಲಿದೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.
ಈ ಆಮದು ಸೇಬು ಅಮೆರಿಕ, ಚೀನಾ, ಚಿಲಿ, ನ್ಯೂಜೆಲೆಂಡ್, ಇಟಲಿ, ಫ್ರಾನ್ಸ್, ಟರ್ಕಿ ಮುಂತಾದೆಡೆಗಳಿಂದ ಬರುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


