ಈರುಳ್ಳಿ ಬಿಕ್ಕಟ್ಟು: ಈಜಿಪ್ಟ್ ನಿಂದ ೧೮ ಸಾವಿರ ಟನ್ ಆಮದು
ಈರುಳ್ಳಿ ಬೆಲೆ ಇಳಿಯುವ ಯಾವುದೇ ಸೂಚನೆಗಳು ತೋರುತ್ತಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಈಗಲೂ ೬೦ ರಿಂದ ೭೦ ರೂ ಇದ್ದು, ಈ ಬಿಕ್ಕಟ್ಟು ಪರಿಹರಿಸಲು

ನವದೆಹಲಿ: ಈರುಳ್ಳಿ ಬೆಲೆ ಇಳಿಯುವ ಯಾವುದೇ ಸೂಚನೆಗಳು ತೋರುತ್ತಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಈಗಲೂ ೬೦ ರಿಂದ ೭೦ ರೂ ಇದ್ದು, ಈ ಬಿಕ್ಕಟ್ಟು ಪರಿಹರಿಸಲು ಭಾರತ ಈಜಿಪ್ಟ್ ನಿಂದ ೧೮೦೦೦ ಟನ್ ಈರುಳ್ಳಿಯನ್ನು ಕಳೆದ ಎರಡು ತಿಂಗಳಿನಿಂದ ಆಮದು ಮಾಡಿಕೊಂಡಿದೆ.
ಇಲ್ಲಿಗಿಂತಲೂ ಹೆಚ್ಚು ಕೆಂಪು ಬಣ್ಣದ ಈರುಳ್ಳಿ ಕಳೆದ ವಾರ ಭಾರತೀಯ ತರಕಾರಿ ಮಂಡಿಗಳಿಗೆ ಲಗ್ಗೆ ಇಟ್ಟಿದೆ.
ಈಜಿಪ್ಟಿನ ಕಾಂಪಿಟೆಂಟ್ ಅಥಾರಿಟಿ ನೀಡಿರುವ ಮಾಹಿತಿ ಪ್ರಕಾರ ಆಗಸ್ಟ್ ಮತ್ತು ಸೆಪ್ಟಂಬರ್ ೨೦೧೫ರಲ್ಲಿ ಭಾರತ ೧೮೦೦೦ ಟನ್ ಈರುಳ್ಳಿಯನ್ನು ಆಮದು ಮಾಡಿಕೊಂಡಿದೆ.
ಇಷ್ಟೇ ಪ್ರಮಾಣದ ಈರುಳ್ಳಿಯನ್ನು ಭಾರತ ಮತ್ತೆ ತರಿಸಿಕೊಳ್ಳಲಿದೆ ಎಂಬುದು ಕೂಡ ತಿಳಿದುಬಂದಿದೆ.
ಈ ಆಮದು ೨೦೧೪-೨೦೧೫ರಲ್ಲಿ ೫೬೭ ಟನ್ ಇತ್ತು. ಈ ವರ್ಷ ಇದು ಸುಮಾರು ೩೫೦೦೦ಟನ್ ಗೆ ಏರಲಿದೆ ಎಂದು ತಿಳಿದುಬಂದಿದೆ.
ಈರುಳ್ಳಿ ಹೆಚ್ಚು ಬೆಳೆಯುವ ರಾಜ್ಯಗಳಲ್ಲಿ ಅಕಾಲಿಕ ತೀವ್ರ ಮಳೆಯಿಂದಾಗ ಬೆಳೆ ನಾಶವಾಗಿತ್ತು. ಅಲ್ಲದೆ ಮಾರಾಟಗಾರರು ಈರುಳ್ಳಿಯನ್ನು ಹೆಚ್ಚು ಕೂಡಿಹಾಕಿಕೊಂಡಿದ್ದರಿಂದ, ಮಾರುಕಟ್ಟೆಯಲ್ಲಿ ಅಭಾವ ಉಂಟಾಗಿ ಬೆಲೆ ಗಗನಕ್ಕೇರಿತ್ತು.
ಭಾರತ ಈಜಿಪ್ಟಿನಿಂದ ಕಿತ್ತಳೆಹಣ್ಣನ್ನು ಕೂಡ ಆಮದು ಮಾಡಿಕೊಳ್ಳುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


