ಕೃಷಿ-ಪರಿಸರ

'ಮೋದಿ ಮಾವು' ಬೆಳೆದ ಮಾವು ಬೆಳೆಗಾರ

ಮಾವು ಬೆಳೆಗಾರ ಹಾಜಿ ಕಾಲಿಮುಲ್ಲಾ 'ಮೋದಿ ಮಾವು' ಹೆಸರಿನ ಮಾವಿನ ತಳಿಯೊಂದನ್ನು ಬೆಳದಿದ್ದು ಮೋದಿ ಹೆಸರಿನ ಈ ಹಣ್ಣಿನ ರಾಜ ಪ್ರಧಾನಿ ಮೋದಿ

'ಮೋದಿ ಮಾವು' ಬೆಳೆದ ಮಾವು ಬೆಳೆಗಾರ
ಮಾವು ಬೆಳೆಗಾರ ಹಾಜಿ ಕಾಲಿಮುಲ್ಲಾ
Published On :

ಲಕನೌ: ಮಾವು ಬೆಳೆಗಾರ ಹಾಜಿ ಕಾಲಿಮುಲ್ಲಾ 'ಮೋದಿ ಮಾವು' ಹೆಸರಿನ ಮಾವಿನ ತಳಿಯೊಂದನ್ನು ಬೆಳದಿದ್ದು ಮೋದಿ ಹೆಸರಿನ ಈ ಹಣ್ಣಿನ ರಾಜ ಪ್ರಧಾನಿ ಮೋದಿ ಅವರನ್ನು ತಲುಪಿ ಅವರು ಅದರ ರುಚಿ ನೋಡಬೇಕೆಂಬ ಆಶಯ ಹೊಂದಿದ್ದಾರೆ.

"ಮೋದಿ ಮಾವಿನ ತಳಿಯ ಮೊದಲ ಹಣ್ಣುಗಳನ್ನು ಪ್ರಧಾನಿ ಮೋದಿಯವರಿಗಾಗಿ ಇಟ್ಟಿದ್ದೇನೆ ಆದರೆ ಅವರಿಗೆ ಇವುಗಳನ್ನು ಕಳುಹಿಸುವ ಮಾರ್ಗ ತಿಳಿಯದು" ಎಂದಿದ್ದಾರೆ ಕಾಲಿಮುಲ್ಲಾ. ಹಲವಾರು ತಳಿಯ ಮಾವುಗಳನ್ನು ಬೆಳೆದು ಅವುಗಳಿಗೆ ತಾರೆಯರ ಹೆಸರಿಡುವ ಕಾಲಿಮುಲ್ಲಾ ಪದ್ಮಶ್ರೀ ಪುರಸ್ಕೃತ. "ಹಣ್ಣುಗಳ ರಾಜನನ್ನು ನಾನೇ ನನ್ನ ಕೈಯಾರ ಅವರಿಗೆ ಕೊಡುವ ಆಸೆ ಮತ್ತು ಅವುಗಳನ್ನು ಅವರು ಇಷ್ಟ ಪಡುತ್ತಾರೆ ಎಂಬುದರ ಬಗ್ಗೆ ನನಗೆ ವಿಶ್ವಾಸವಿದೆ" ಎನ್ನುತ್ತಾರೆ.

ಈ ತಳಿಯ ರುಚಿ ತುಂಬಾ ಚೆನ್ನಾಗಿದೆ ಹಾಗೂ ನೋಡಲು ಕೂಡ ಸುಂದರವಾಗಿದೆ. ಮಾವಿನ ಸಿಪ್ಪೆಯ ಮೇಲೆ ಗೆರೆಗಳಿದ್ದು ಅದು ಹೊಳೆಯುತ್ತದೆ ಎಂದಿದ್ದಾರೆ. "ಇದನ್ನು ರುಚಿ ನೋಡಿರುವವರೆಲ್ಲರೂ ಬಹಳ ಪ್ರಶಂಸಿಸಿದ್ದಾರೆ" ಎಂದು ಲಕನೌ ಹೊರಭಾಗದ ಮಲಿಹಾಬಾದಿನಲ್ಲಿ ಮಾವಿನ ತೋಪು ಹೊಂದಿರುವ ಕಾಲಿಮುಲ್ಲಾ ಹೇಳುತ್ತಾರೆ.

ಈ ಮಾವಿನ ಬೆಳೆಗಾರ ತಾರೆ ತಾನೇ ಒಂದು ಸಂಸ್ಥೆಯಂತೆ ಬೆಳೆದಿದ್ದು, ೩೦೦ ತಳಿಯ ಮಾವು ಬಿಡುವ ಒಂದು ಮರವನ್ನು ಹೊಂದಿರುವುದಾಗಿ ಹೇಳಿಕೊಳ್ಳುತ್ತಾರೆ. 'ಮೋದಿ ಮಾವಿನ' ಐದು ಕಸಿಗಳನ್ನು ಸಿದ್ಧಪಡಿಸಿದ್ದು ಪ್ರಧಾನಿಯವರು ಅವುಗಳನ್ನು ಗುಜರಾತಿನಲ್ಲಿ ನೆಡಬೇಕೆಂದು ಆಸೆಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.