ಚೈನಾದಲ್ಲಿ ೭೦ ಸೈಬೀರಿಯನ್ ಹುಲಿಮರಿಗಳ ಜನನ
ಚೈನಾದ ಅತಿ ದೊಡ್ಡ ಸೈಬೀರಿಯನ್ ಹುಲಿ ಸಂತತಿ ಕೇಂದ್ರದಲ್ಲಿ ಈ ವರ್ಷ ೭೦ಕ್ಕೂ ಹೆಚ್ಚು ಹುಲಿಮರಿಗಳು ಜನಿಸಿವೆ ಎಂದು ಶನಿವಾರ ತಿಳಿದಿದೆ. ಈ ವಾರ್ಷಿಕ

ಹರ್ಬಿನ್(ಚೈನಾ): ಚೈನಾದ ಅತಿ ದೊಡ್ಡ ಸೈಬೀರಿಯನ್ ಹುಲಿ ಸಂತತಿ ಕೇಂದ್ರದಲ್ಲಿ ಈ ವರ್ಷ ೭೦ಕ್ಕೂ ಹೆಚ್ಚು ಹುಲಿಮರಿಗಳು ಜನಿಸಿವೆ ಎಂದು ಶನಿವಾರ ತಿಳಿದಿದೆ. ಈ ವಾರ್ಷಿಕ ಈಯುವ ಸಮಯ ಮುಕ್ತಾಯವಾಗುತ್ತ ಬಂದಿದೆ ಎಂದು ಕೇಂದ್ರ ತಿಳಿಸಿದೆ.
ಹೀಲೋಂಗ್ಜಿಯಾಂಗ್ ಸೈಬೀರಿಯನ್ ಹುಲಿ ಸಂರಕ್ಷಣಾ ಅಭಯಾರಣ್ಯದಲ್ಲಿ ೧೦೦೦ಕ್ಕೂ ಹೆಚ್ಚು ಹುಲಿಗಳು ಇದ್ದು, ಪ್ರತಿ ವರ್ಷ ಕೆಲವು ಹುಲಿಗಳನ್ನು ಮುಂದಿನ ಸಂತತಿಗಳನ್ನು ಹಡೆಯುವುದಕ್ಕೆ ಆಯ್ಕೆ ಮಾಡಲಾಗುತ್ತದೆ.
"ಇದು ಈ ಪ್ರಾಣಿವರ್ಗದ ಸಮತೋಲನಕ್ಕೆ ಒಳ್ಳೆಯದು" ಎಂದು ಅಭಯಾರಣ್ಯದ ಮುಖ್ಯಸ್ಥ ಲಿಯೂ ಡ್ಯಾನ್ ತಿಳಿಸಿದ್ದಾರೆ.
ಈ ವರ್ಷದ ಕೊನೆಗೆ ಸುಮಾರು ೧೦೦ ಹುಲಿಮರಿಗಳು ಜನಿಸುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಈ ಮರಿಗಳು ತನ್ನ ತಾಯಿಯ ಜೊತೆ ಮೂರು ತಿಂಗಳವರೆಗೆ ವಾಸವಿದ್ದು ನಂತರ ಅಭಯಾರಣ್ಯದ ಹೊರವಲಯಗಳಲ್ಲಿ ಸ್ವತಂತ್ರವಾಗಿ ವಾಸಿಸಲಿವೆ.
ಸೈಬೀರಿಯನ್ ಹುಲಿಗಳನ್ನು ವಿಶ್ವದ ಅತಿ ಹೆಚ್ಚು ಅಳಿವಿನಂಚಿನ ಪ್ರಾಣಿ ಎಂದು ಗುರುತಿಸಲಾಗಿದ್ದು ಇವು ಸಾಮಾನ್ಯವಾಗಿ ಈಶಾನ್ಯ ಚೀನಾ ಮತ್ತು ಪೂರ್ವ ರಶಿಯಾದಲ್ಲಿ ವಾಸಿಸುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


