ಕೃಷಿ-ಪರಿಸರ

ಕರಡಿ ಧಾಮದಲ್ಲಿ ಅಪರೂಪದ ಹಾವು

ತಾಲೂಕಿನ ಕಮಲಾಪುರ ಬಳಿ ಇರುವ ದರೋಜಿ ಕರಡಿ ಧಾಮದಲ್ಲಿ ಅಪೂರ್ವ ಹಾವೊಂದನ್ನು ವನ್ಯಜೀವಿ ಛಾಯಾಗ್ರಾಹಕಯ...

ಕರಡಿ ಧಾಮದಲ್ಲಿ ಅಪರೂಪದ ಹಾವು
ಹಾವಿನ ಚಿತ್ರ
Published On :

ಹೊಸಪೇಟೆ: ತಾಲೂಕಿನ ಕಮಲಾಪುರ ಬಳಿ ಇರುವ ದರೋಜಿ ಕರಡಿ ಧಾಮದಲ್ಲಿ ಅಪೂರ್ವ ಹಾವೊಂದನ್ನು ವನ್ಯಜೀವಿ ಛಾಯಾಗ್ರಾಹಕಯ ಪಂಪಯ್ಯಸ್ವಾಮಿ ಪತ್ತೆ ಹಚ್ಚಿದ್ದಾರೆ. ಇದು ಅಪರೂಪದ ಬ್ರೈಡಲ್ ಸ್ನೇಕ್. ಹಂಪಿ ಪರಿಸರದಲ್ಲಿ ಇಂತಹ ಹಾವನ್ನು ಇದೇ ಮೊದಲ ಸಲ ನೋಡುತ್ತಿದ್ದೇವೆ. ಸುಮಾರು ಒಂದು ಅಡಿಗೂ ಹೆಚ್ಚು ಉದ್ದ ಇರುವ ಈ ಹಾವು ಮರಿ ಇರಬೇಕು. ಆದರೆ ಬಳ್ಳಾರಿಯ ಖ್ಯಾತ ಉರಗ ತಜ್ಞ ಆದಿತ್ಯ ವಟ್ಟಂ ಅವರು ಈ ಹಾವಿನ ಚಿತ್ರವನ್ನು ಗಮನಿಸಿ, ಇದು `ಬಾರಿಡ್ ವೂಲ್ಫ್ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ಬಗೆಯ ಹಾವನ್ನು ತಾವು ಬಳ್ಳಾರಿ ಪರಿಸರದಲ್ಲಿ ಎರಡು ಸಲ ಸಂರಕ್ಷಿಸಿದ್ದಾಗಿ ಹೇಳಿದ್ದಾರೆ. ಬಾರಿಡ್ ವೂಲ್ಫ್ ಹಾವು ಹಂಪಿಯ ಪರಿಸರದಲ್ಲಿ ವಿರಳ ಎಂದು ಉರಗ ತಜ್ಞರು ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.