ಆಸ್ಟ್ರೇಲಿಯಾದ ಫ್ರೀಜರ್ ನಲ್ಲಿ ೭೦ ಮೊಸಳೆಗಳ ತಲೆ ಪತ್ತೆ
ಉತ್ತರ ಆಸ್ಟ್ರೇಲಿಯಾದ ಸಣ್ಣ ಪಟ್ಟಣವೊಂದರಲ್ಲಿ ೭೦ ಮೊಸಳೆಗಳ ತಲೆಗಳನ್ನು ಕಡಿದು ಹಾಕಿದ್ದು ಅವುಗಳನ್ನು ಫ್ರೀಜರ್ ನಲ್ಲಿ ಕೊಳೆಯಲು ಎಸೆಯಲಾಗಿದೆ ಎಂದು

ಸಿಡ್ನಿ: ಉತ್ತರ ಆಸ್ಟ್ರೇಲಿಯಾದ ಸಣ್ಣ ಪಟ್ಟಣವೊಂದರಲ್ಲಿ ೭೦ ಮೊಸಳೆಗಳ ತಲೆಗಳನ್ನು ಕಡಿದು ಹಾಕಿದ್ದು ಅವುಗಳನ್ನು ಫ್ರೀಜರ್ ನಲ್ಲಿ ಕೊಳೆಯಲು ಎಸೆಯಲಾಗಿದೆ ಎಂದು ಮಾಧ್ಯಮವೊಂದು ಮಂಗಳವಾರ ವರದಿ ಮಾಡಿದೆ.
ಆಸ್ಟ್ರೇಲಿಯಾದ ಉತ್ತರ ಪ್ರಾಂತ್ಯದ ಡಾರ್ವಿನ್ ನಗರದಿಂದ ೪೦ ಕಿಮೀ ದೂರದಲ್ಲಿರುವ ಹಮ್ಟಿ ಡೂ ಎಂಬ ಸಣ್ಣ ಪಟ್ಟಣದ ಪ್ರಾದೇಶಿಕ ಅಂಗಡಿಯ ಹತ್ತಿರ ಬಿಟ್ಟು ಹೋಗಿದ್ದ ಈ ಪ್ರೀಜರ್ ಅನ್ನು ಮಕ್ಕಳು ನೋಡಿದ್ದಾರೆ.
ಕನಿಷ್ಠ ೫೦ ರಿಂದ ೭೦ ಮೊಸಳೆಗಳ ತಲೆಗಳನ್ನು ಫ್ರೀಜರ್ ಒಳಗೆ ತುರುಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಭಯಾರಣ್ಯ ಮತ್ತು ಅರಣ್ಯ ಅಧಿಕಾರಿಗಳು ಜೊತೆಗೂಡಿ ತನಿಖೆ ನಡೆಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಮೊಸಳೆಗಳನ್ನು ಸಂರಕ್ಷಿತ ಜೀವವಲಯದಲ್ಲಿ ಗುರುತಿಸಲಾಗಿದ್ದು ಭೇಟಿಯಾಡಿದವರಿಗೆ ೫೫,೭೭೯ ಡಾಲರ್ ದಂಡ ಅಥವಾ ಐದು ವರ್ಷದ ಜೈಲುಶಿಕ್ಷೆ ನೀಡಲಾಗುತ್ತದೆ.
ನಾಗರಿಕ ಸಮುದಾಯಕ್ಕೆ ಭೀತಿ ಎನಿಸುವಲ್ಲಿ ಮಾತ್ರ ಸೀಮಿತ ಸಂಖ್ಯೆಯ ಮೊಸಳೆಗಳನ್ನು ಭೇಟೆಯಾಡಲು ಪರವಾನಗಿ ನೀಡಲಾಗುತ್ತದೆ.
ಜಾಗತಿಕ ಫ್ಯಾಶನ್ ಮಾರುಕಟ್ಟೆಯಲ್ಲಿ ಮೊಸಳೆ ಚರ್ಮಕ್ಕೆ ಅಪಾರ ಬೇಡಿಕೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


