ಸರ್ಜಿಕಲ್ ಕಾಟನ್

ಇದ್ಯಾವ ಬಗೆಯ ಹತ್ತಿ ಸ್ವಾಮಿ ಅಂದ್ಕೊಂಡ್ರಾ? ಹೌದು, ಇದೊಂದು ಬಗೆಯ ಹತ್ತಿಯ ತಳಿ. ಹತ್ತಿಯಲ್ಲಿ ಹಲವು ವೆರೈಟಿಗಳಿವೆ. ಆ ಪೈಕಿ ಸರ್ಜಿಕಲ್ ಕಾಟನ್ ಕೂಡ ಒಂದು. ಇದನ್ನು ವೈದ್ಯಕೀಯ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ಹಾಗಾಗಿ ಇದಕ್ಕೆ ಸರ್ಜಿಕಲ್ ಕಾಟನ್ ಎಂದು ಕರೆಯುತ್ತಾರೆ. ಇದನ್ನು ಉತ್ತರ ಕರ್ನಾಟಕದ ಹಲವೆಡೆ ಬೆಳೆಯಲಾಗುತ್ತಿದೆ. ಇದಕ್ಕೆ ಮಾರುಕಟ್ಟೆಯಲ್ಲೂ ಭಾರಿ ಬೇಡಿಕೆ. ಅಂದಹಾಗೆ ಹತ್ತಿಯ ವೈಜ್ಞಾನಿಕ ಹೆಸರು Gossyium hirsutum.
ಬೆಳೆಯುವ ವಿಧಾನ
ಸಾಮಾನ್ಯ ಹತ್ತಿ ಬೀಜಗಳನ್ನು ಯಾವ ರೀತಿ ಬಿತ್ತುತ್ತವೆಯೋ ಅದೇ ರೀತಿ ಸರ್ಜಿಕಲ್ ಕಾಟನ್ ಬೀಜಗಳನ್ನು ಬಿತ್ತಬೇಕು. ಅಂದರೆ ಬೀಜದಿಂದ ಬೀಜಕ್ಕೆ 8-12 ಇಂಚು ಅಂತರ ಮತ್ತು ಸಾಲಿನಿಂದ ಸಾಲಿಗೆ ನಿಯಂತ್ರಿಸಬೇಕು. ಬೀಜ ಬಿತ್ತಿದ ಬಳಿಕ ಒಂದೆರಡು ಬಾರಿ ಯಡೆ(ಸಾಲು ಮಾಡುವುದು) ಹೊಡೆಯಬೇಕು. ನಾಲ್ಕೂವರೆ ತಿಂಗಳಿಗೆ ಫಸಲು ಕೈಗೆ ಬರುತ್ತದೆ. ಬೀಜ ನಾಟಿಗೆ ಜೂನ್‌ದಿಂದ ಆಗಸ್ಟ್ ಸೂಕ್ತ. ಇದನ್ನು ಮಳೆ ಮತ್ತು ನೀರಾವರಿಯಾಶ್ರಿತವಾಗಿಯೂ ಬೆಳೆಯಬಹುದು. ಎಕರೆಗೆ ಬಿತ್ತಲು ಎರಡೂವರೆ ಕೆಜೆ ಬೀಜ ಬೇಕಾಗುತ್ತದೆ. ಸಾಮಾನ್ಯವಾಗಿ ಹತ್ತಿಗೆ ಬರುವ ರೋಗಗಳೇ ಇದಕ್ಕೂ ಬರುತ್ತವೆ. ಆದರೆ, ಸಾಮಾನ್ಯ ಹತ್ತಿಗೆ ಹೋಲಿಸಿದರೆ ಸರ್ಜಿಕಲ್ ಕಾಟನ್‌ಗೆ ರೋಗಗಳ ಹಾವಳಿ ಕಡಿಮೆ.
ಮಣ್ಣು
ಕಪ್ಪು ಮಣ್ಣು ಇದಕ್ಕೆ ಅತಿ ಸೂಕ್ತ. ಮರಳು ಮತ್ತು ಕಲ್ಲು ಮಿಶ್ರಿತ ಮಣ್ಣು ಹೊರತುಪಡಿಸಿ ಇತರ ಮಣ್ಣುಗಳಲ್ಲಿ ಇದನ್ನು ಬೆಳೆಯಬಹುದು.
ಮಾರುಕಟ್ಟೆ
ಸರ್ಜಿಕಲ್ ಕಾಟನ್‌ಗೆ ಮಾರುಕಟ್ಟೆ ಸಮಸ್ಯೆಯಿಲ್ಲ. ಯಾಕೆಂದರೆ ಮೊದಲೇ ಕಂಪನಿಯವರ ಜತೆ ಒಪ್ಪಂದ ಮಾಡಿಕೊಂಡು ಬೆಳೆಯಹುದು ಅಥವಾ ರೈತರೇ ತಮಗೆ ಅನುಕೂಲವಾಗುವ ಕಂಪನಿಗೆ ಮಾರಾಟ ಮಾಡಬಹುದು. ಅದು ರೈತರ ವಿವೇಚನೆಗೆ ಬಿಟ್ಟ ವಿಚಾರ. ರಾಜ್ಯದಲ್ಲಿ ಆರ್.ಜೆ.-8 ತಳಿಯ ಸರ್ಜಿಕಲ್ ಕಾಟನ್ ಅನ್ನು ಉತ್ತರ ಕರ್ನಾಟಕದ ಹಲವೆಡೆ ಬೆಳೆಯಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತ್ಲಿಹೊರಿನ ರೈತ ಚನ್ನಬಸಪ್ಪ ಬೂದಿಹಾಳ್ (ಮೊ. 9480127714) ಅವರನ್ನು ಸಂಪರ್ಕಿಸಬಹುದು.
-ಮಹೇಶ್ ಅರಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


