ಕೃಷಿ-ಪರಿಸರ

ಏಲಕ್ಕಿ ಬಾಳೆ

ಏಲಕ್ಕಿ ಬಾಳೆ
Published On :

ಮಾವಿನ ನಂತರ ಅತಿ ಹೆಚ್ಚು ಬೆಳೆಯುವ ಹಣ್ಣು ಬಾಳೆ. ಒಟ್ಟಾರೆ ಇದರ ತಳಿಗಳು ಐವತ್ತರ ಆಸುಪಾಸು. ಆದರೂ ವಾಣಿಜ್ಯ ದೃಷ್ಟಿಯಿಂದ ಬಳಕೆಯಲ್ಲಿರುವುದು 10ರಿಂದ 12 ಮಾತ್ರ. ಅದರಲ್ಲಿ ಏಲಕ್ಕಿ ಬಾಳೆಯೂ ಪ್ರಮುಖ ತಳಿ. ಗಾತ್ರದಲ್ಲಿ ತೀರಾ ಚಿಕ್ಕದು. ತಿನ್ನಲು ಬಲು ರುಚಿಕರ. ಬಾಳೆಯಲ್ಲಿ ವಿಟಮಿನ್ 'ಎ' ಯಥೇಚ್ಚ. ಂ್ಡಡಛ ಛ್ಛ್ಡಟ್ಝಟಿಛಡಿಛ ಇದರ ವೈಜ್ಞಾನಿಕ ಹೆಸರು.

ಬೆಳೆಯುವ ವಿಧಾನ
ಇತರ ಬಾಳೆ ತಳಿಗಳನ್ನು ಯಾವ ರೀತಿ ಬೆಳೆಯುತ್ತಾರೋ, ಅದೇ ರೀತಿ ಇದನ್ನು ಬೆಳೆಯಬೇಕು. ಅಂದರೆ 2 ್ಢ2 ಜಾಗದಲ್ಲಿ ಒಂದೂವರೆ ಅಡಿ ಆಳದ ಗುಂಡಿ ತೋಡಬೇಕು. ಗಿಡದಿಂದ ಗಿಡಕ್ಕೆ 6್ಗ6 ಅಡಿ ಅಂತರ ಅಗತ್ಯ. ಬಳಿಕ ಅದಕ್ಕೆ ಬಾಳೆ ಗಡ್ಡೆಯನ್ನು ನೆಡಬೇಕು. ಗಡ್ಡೆ ನೆಟ್ಟ ತಿಂಗಳ ಬಳಿಕ ಗಿಡವಾಗಿ ಚಿಗುರೊಡೆಯುತ್ತದೆ. ವಾರಕ್ಕೊಮ್ಮೆ ನೀರು ಹಾಯಿಸಬೇಕು. 6 ತಿಂಗಳ ಬಳಿಕ ಗೊಬ್ಬರ ಹಾಕಬೇಕು. 12 ತಿಂಗಳ ನಂತರ ಫಸಲು ನೀಡಲಾರಂಭಿಸುತ್ತದೆ. ಇತರ ತಳಿಗಳಿಗೆ ಹೋಲಿಸಿದರೆ ಏಲಕ್ಕಿ ಬಾಳೆಗೆ ರೋಗ, ಕೀಟಗಳ ಹಾವಳಿ ತೀರಾ ಕಮ್ಮಿ. ನಾಟಿ ಮಾಡಲು ಎಕರೆಗೆ 1200 ಗಡ್ಡೆ ಬೇಕಾಗುತ್ತದೆ. ತೆಂಗು, ಅಡಕೆ ಅಥವಾ ಇತರ ದೀರ್ಘಕಾಲದ ಬೆಳೆಗಳ ಮಧ್ಯ ಅಂತರ ಬೆಳೆಯಾಗಿಯೂ ಇದನ್ನು ಬೆಳೆಯಬಹುದು.

ಮಣ್ಣು
ಕೆಂಪು ಮತ್ತು ಕಪ್ಪು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮರಳು ಮಿಶ್ರಿತ ಮಣ್ಣು ಇದಕ್ಕೆ ಒಗ್ಗದು. ಹೆಚ್ಚಿನ ಮಾಹಿತಿಗೆ ಕುಂದಾಪುರ ತಾಲೂಕಿನ ಕೌರಂಜುರನ ಪದ್ಮನಾಭ್ ಅಡಿಗ (ಮೊ. 9483932203) ಸಂಪರ್ಕಿಸಬಹುದು.

-ಮಹೇಶ್ ಅರಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.