ಕೃಷಿ-ಪರಿಸರ

ಹರಳು

ಹರಳು
Published On :

ಜಮೀನಿನ ಬದುವನ್ನು ಖಾಲಿ ಬಿಡುವುದಕ್ಕಿಂತ ಅದನ್ನು ಲಾಭದಾಯಕವಾಗಿ ಮಾಡಿಕೊಳ್ಳಬಹುದು. ಅದು ಹೇಗೆ ಅಂತೀರಾ? ಹೂವು, ಹಣ್ಣಿನ ಗಿಡಗಳು, ಅರಣ್ಯಾಧಾರಿತ ಗಿಡ ಮತ್ತು ಜೈವಿಕ ಇಂಧನ ಉತ್ಪಾದಿಸುವ ಮರಗಳನ್ನು ಬೆಳೆದು ಲಾಭ ಗಳಿಸಬಹುದು. ಇದರಿಂದ ಮಣ್ಣು ಸವೆತ ತಡೆದಂತಾಗುತ್ತದೆ. ಪರಿಸರ ಸಮತೋಲನಕ್ಕೂ ಸಹಕಾರಿ. ಅಂಥ ಗಿಡಗಳ ಪೈಕಿ ಹರಳು (ಔಡಲ) ಗಿಡ ಪ್ರಮುಖವಾದದ್ದು. ಇದರ ವೈಜ್ಞಾನಿಕ ಹೆಸರು ಖಜ್ಛ್ಝಟ್ಡಿಡ ್ಛ್ಟಟಟ್ಡಟ್ಝಿಡ. ಬಹುಪಯೋಗಿಯಾದ ಇದನ್ನು ಬೆಳೆಯುವುದರಿಂದ ಸಾಕಷ್ಟು  ಲಾಭಗಳಿವೆ.
ಬೆಳೆಯುವ ವಿಧಾನ
ಹರಳನ್ನು ಹೆಚ್ಚಾಗಿ ಜಮೀನಿನ ಬದುವಿನಲ್ಲೇ ಹೆಚ್ಚು ಬೆಳೆಯುತ್ತಾರೆ. ಇದಕ್ಕೆ ಮಹತ್ತರ ಕಾರಣವಿದೆ. ಅದೇನೆಂದರೆ, ಬದುವಿನಲ್ಲಿ ಹಾಕುವುದರಿಂದ ಇತರ ಬೆಳೆಗಳಿಗೆ ಸೈನಿಕನಂತೆ ರಕ್ಷಣೆ ಒದಗಿಸುತ್ತದೆ. ಗಿಡವು ಕಹಿಯಾಗಿರುವುದರಿಂದ ಇದನ್ನು ತಿನ್ನುವ ಕೀಟಗಳು ಸಾಯುತ್ತವೆ. ಹೀಗಾಗಿ ಜಮೀನಿನಲ್ಲಿರುವ ಬೆಳೆಗಳಿಗೆ ಕೀಟ, ರೋಗ ಬಾಧೆ ಬಾರದಂತೆ ತಡೆಯುತ್ತದೆ. ಹರಳಿನ ಬೀಜವನ್ನು 3 ಅಡಿ ಅಂತರದಲ್ಲಿ ಹಾಕಬೇಕು. ಇದಕ್ಕೆ ಯಾವುದೇ ಥರದ ನಿಯಂತ್ರಣ ಕ್ರಮದ ಅಗತ್ಯವಿಲ್ಲ. ತನ್ನಷ್ಟಕ್ಕೆ ಬೆಳೆಯುತ್ತದೆ. ಜೂನ್ ಬೀಜ ನಾಟಿಗೆ ಸಕಾಲ. ಸಾಮಾನ್ಯವಾಗಿ ಎಲ್ಲ ನಮೂನೆಯ ಮಣ್ಣಲ್ಲಿ ಇದನ್ನು ಬೆಳೆಯಬಹುದು. ಕಪ್ಪು ಮಣ್ಣಲ್ಲಿ ಚೆನ್ನಾಗಿ ಇಳುವರಿ ಬರುತ್ತದೆ. ಕಡಿಮೆ ಮಳೆಯಾಗುವ ಪ್ರದೇಶದಲ್ಲೂ ಬೆಳೆಯುತ್ತದೆ. ಆದ್ದರಿಂದ ಇದಕ್ಕೆ ಬರನಿರೋಧಕ ಎಂದು ಕರೆಯುತ್ತಾರೆ. ಬಿತ್ತಿದ 5 ತಿಂಗಳಿಗೆ ಇಳುವರಿ ಕೈಗೆ ಸಿಗುತ್ತದೆ. ಒಂದು ಗಿಡದಿಂದ ಕನಿಷ್ಠ 1ರಿಂದ 2 ಕೆಜಿ ಬೀಜ ಸಿಗುತ್ತದೆ.
ಉಪಯೋಗ
ಹರಳಿನ ಬೀಜದಿಂದ ಎಣ್ಣೆಯನ್ನು ತೆಗೆದು ಜೈವಿಕ ಇಂಧನವಾಗಿ ಬಳಸುತ್ತಾರೆ. ಜಂತುನಿವಾರಕ, ಮೈ- ಕೈ ನೋವು ಹೋಗಲಾಡಿಸಲು ಪ್ರಮುಖವಾಗಿ ಉಪಯೋಗಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗುಂಡೇನಟ್ಟಿಯ ಶಂಕರ ಲಂಗಟಿ (ಮೊ. 9972150378) ಅವರನ್ನು ಸಂಪರ್ಕಿಸಬಹುದು.

ಮಹೇಶ್ ಅರಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.