ಕೃಷಿ-ಪರಿಸರ

ಹೊಂಗೆನಸು

ಹೊಂಗೆನಸು
Published On :

ಹೆಚ್ಚುತ್ತಿರುವ ಇಂಧನ ಬಳಕೆಯಿಂದಾಗಿ ಕೆಲವು ವರ್ಷಗಳಲ್ಲಿ ಅವು ಮುಗಿದುಹೋಗಬಹುದು. ಹೀಗಾಗಿ ಆತಂಕ ಜಗತ್ತಿನಾದ್ಯಂತ ಶುರುವಾಗಿದೆ. ಪರ್ಯಾಯ ಇಂಧನದ ಕಡೆ ಲಕ್ಷ್ಯ ವಹಿಸುವುದು ಅನಿವಾರ್ಯವೂ ಹೌದು. ಜೈವಿಕ ಇಂಧನವೇ ನಮ್ಮ ಮುಂದಿರುವ ಬಹುದೊಡ್ಡ ಆಶಾಕಿರಣ. ರೈತರು ಜೈವಿಕ ಇಂಧನ ನೀಡುವ ಮರ ಬೆಳೆದು ಸಾಕಷ್ಟು ಲಾಭ ಗಳಿಸಬಹುದು. ಹೊಂಗೆ ಮರದಿಂದ ಬಯೋ ಡೀಸೆಲ್ ಉತ್ಪಾದಿಸಿ ವಾಹನ ಚಲಾಯಿಸಬಹುದು. ಹೊಂಗೆಯ ವೈಜ್ಞಾನಿಕ ಹೆಸರು ಪೊಂಗಾಮಿಯಾ ಪಿನ್ನಾಟ (ಕ್ಟಿಟ್ಜಿಛಟ್ಝಛ ಠ್ಝಟಿಟಿಛಡಿಛ). ಇದರ ಬೀಜದಲ್ಲಿ ಶೇ. 25-30ರಷ್ಟು ಎಣ್ಣೆ ಅಂಶವಿರುತ್ತದೆ. ಅಲ್ಲದೆ, ಹೊಂಗೆ ಮರದಿಂದ ಮಣ್ಣಿನ ಸವಕಳಿ ಮತ್ತು ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಬೆಳೆಯುವ ವಿಧಾನ
ಇದನ್ನು ನೇರವಾಗಿ ಜಮೀನಿನಲ್ಲಿ ಬೆಳೆದರೆ ಆಹಾರ ಧಾನ್ಯ, ಇತರ ಬೆಳೆಗಳ ಉತ್ಪಾದನೆಗೆ ಹೊಡೆತ ಬೀಳುವ ಸಾಧ್ಯತೆ ಅಧಿಕ. ಹಾಗಾಗಿ ಜಮೀನಿನ ಬದು, ಹಿತ್ತಿಲು, ಖಾಲಿ ನಿವೇಶನ, ಹೊಳೆ, ಹಳ್ಳ, ನಾಲೆ, ರಸ್ತೆ ಬದಿ ಮತ್ತು ಬಂಜರು ಭೂಮಿ ಹೀಗೆ ಹಲವಾರು ಪ್ರದೇಶದಲ್ಲಿ ಬೆಳೆಯಬಹುದು. ಕಾಂಡದ ಕಡ್ಡಿಯಿಂದ ಸಸಿಗಳನ್ನು ಬೆಳೆಯಬಹುದು. ಹೀಗೆ ಬೆಳೆಸಿದ 8- 12 ತಿಂಗಳ ಗಿಡಗಳನ್ನು 45್ಢ45್ಢ45 ಸೆಂ.ಮೀ. ಜಾಗದಲ್ಲಿ ನೆಡಬೇಕು. ಅದಕ್ಕಿಂತ ಮೊದಲು ಗುಂಡಿಯಲ್ಲಿ ಕೊಟ್ಟಿಗೆ ಗೊಬ್ಬರ, ಕೆಂಪು ಮಣ್ಣನ್ನು ಹಾಕಬೇಕು. ಹೀಗೆ ನಾಟಿ ಮಾಡಿದ 4 ವರ್ಷದ ನಂತರ ಕಾಯಿ ಬಿಡಲು ಶುರು ಮಾಡುತ್ತದೆ. 4 ಕೆಜಿ ಹೊಂಗೆ ಬೀಜದಿಂದ 1 ಲೀಟರ್ ಬಯೋಡೀಸೆಲ್ ಪಡೆಯಬಹುದು.

ಮಾರುಕಟ್ಟೆ
ಬಯೋಡೀಸೆಲ್ ಕೊಳ್ಳಲು ಈಗಾಗಲೇ ತೋಟಗಾರಿಕೆ, ಅರಣ್ಯ ಇಲಾಖೆ, ಕೃಷಿ ವಿವಿ ಜತೆ ರಾಜ್ಯ ಸಾರಿಗೆ ಮತ್ತು ಬಿಎಂಟಿಸಿ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಜೈವಿಕ ಇಂಧನ ಉತ್ಪಾದಕ ರೈತರಿಗೆ ಮಾರುಕಟ್ಟೆ ಸಮಸ್ಯೆ ಉದ್ಭವಿಸದು.

ಉಪಯೋಗ
ಹೊಂಗೆಯಿಂದ ಬರೀ ಬಯೋಡೀಸೆಲ್ ಅಷ್ಟೆ ಅಲ್ಲದೆ, ಅದರ ಹಿಂಡಿಯಿಂದ ಗೊಬ್ಬರ, ಸಾಬೂನು ಮತ್ತು ಚರ್ಮ ಹದ ಮಾಡಲು ಸಹ ಬಳಸುತ್ತಾರೆ. ಎಣ್ಣೆಯನ್ನು ರೈತರು ಟ್ರ್ಯಾಕ್ಟರ್ ಮತ್ತು ಪಂಪ್‌ಸೆಟ್‌ಗೂ ಬಳಸಬಹುದು.

ಗಿಡ ಎಲ್ಲಿ ಸಿಗುತ್ತೆ?
ಹೊಂಗೆ ಗಿಡಗಳನ್ನು ಅರಣ್ಯ ಮತ್ತು ತೋಟಗಾರಿಕೆ ಇಲಾಖೆ ಪೂರೈಸುತ್ತಿದೆ. ಅಲ್ಲದೆ, ನರ್ಸರಿಗಳಲ್ಲೂ ಸಿಗುತ್ತವೆ. ಪ್ರತಿ ಜಿಲ್ಲಾ ಕೇಂದ್ರದಲ್ಲೂ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯವರು ಮಾಹಿತಿ ಕೇಂದ್ರ ತೆರೆದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಬೆಂಗಳೂರಿನ ಜಿಕೆವಿಕೆಯಲ್ಲಿ ಅರಣ್ಯ ಮತ್ತು ಪರಿಸರ ವಿಜ್ಞಾನ ವಿಭಾಗದ ಪ್ರೊ. ಬಾಲಕೃಷ್ಣೇಗೌಡ(9448506060) ಅವರನ್ನು ಸಂಪರ್ಕಿಸಬಹುದು.

- ಮಹೇಶ್ ಅರಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.