ಜಾನುವಾರು ದಂತಕ್ಷೇಮ

ಮನುಷ್ಯರಾದರೆ ಹಲ್ಲುನೋವು ಇದೆಯೆಂದು ಹೇಳುತ್ತಾರೆ. ಆದರೆ, ಪ್ರಾಣಿಗಳಲ್ಲಿ ಆಗುವ ಹಲ್ಲಿನ ತೊಂದರೆ ಪ್ರಾಥಮಿಕವಾಗಿ ಕಂಡುಹಿಡಿಯುವುದು ಕಷ್ಟ. ಬಹಳಷ್ಟು ಬಾರಿ ಹಲ್ಲಿನ ನೋವಿನಿಂದ ಆಗುವ ಬಾಧೆ, ಬಾವು ಆದಾಗ ನಾವು ಪ್ರಾಣಿಗಳತ್ತ ಗಮನಹರಿಸುತ್ತೇವೆ. ನಂತರ ವೈದ್ಯರ ಸಲಹೆ ಪಡೆಯುವುದು, ಪಾಲಿಸುವುದನ್ನು ಮರೆಯಬಾರದು.
ಗಮನಿಸಬೇಕಾದ ಅಂಶ
ಜಾನುವಾರುಗಳ ಬಾಯಿ- ದವಡೆಯಿಂದ ಅದರ ಹಲ್ಲು ಆಚೆ ಬಂದಿದೆಯೇ?
ಒಂದು ಹಲ್ಲು ಮಾತ್ರ ಇತರ ಹಲ್ಲುಗಳಿಗಿಂತ ಮೇಲೆ ಎದ್ದಿದೆಯೇ?
ಮುರಿದ, ಸಿಡಿದ ಸೀಳಿದ ಹಲ್ಲು ಇದೆಯೇ? ಚೂಪಾಗಿದೆಯೇ?
ಬಣ್ಣಗೆಟ್ಟ ಹಲ್ಲುಗಳಿದೆಯೇ?
ಹುಲ್ಲು ತಿನ್ನಲು ಆಗದೆ ಹುಲ್ಲಿನತ್ತಲೇ ನೋಡುತ್ತಿದೆಯೇ?
15- 20 ದಿನಗಳಲ್ಲಿ ತೂಕ ಇಳಿದು ಸೊರಗಿದೆಯೇ?
ಹಲ್ಲುಗಳು ಯಾವುದಾದರೂ ಅಲುಗಾಡುತ್ತಿವೆಯೇ?
ಬಲು ನಿಧಾನವಾಗಿ ತಿನ್ನುವುದು, ತಿಂದ ಆಹಾರ ಬಾಯಿಂದ ಹೊರ ಬೀಳಿಸುತ್ತಿದೆಯೇ?
ಮುಂಭಾಗದ ಬಾಚಿ ಹಲ್ಲುಗಳು ಹುಲ್ಲನ್ನು ಕೀಳಲು, ಎಳೆಯಲು ಅನುಕೂಲ ಮಾಡಿಕೊಡುತ್ತವೆ.
ಹಲ್ಲುಗಳ ಸವೆತವೂ ಮೇವು ತಿನ್ನದಂತೆ ಮಾಡುತ್ತವೆ.
ಹಲ್ಲಿನ ಸಮಸ್ಯೆ ಇದ್ದಾಗ ಮೇವು ನುಂಗುವಾಗ ಕುತ್ತಿಗೆ ಎತ್ತುತ್ತವೆ.
= ಡಾ. ಕೆ.ವಿ. ಸಂತೋಷ್ ಹೊಳಲ್ಕೆರೆ
ಮೊ. 9342466936
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


