ಮಲ್ಲಿಗೆ

ಪುಷ್ಪ ಕೃಷಿಯಲ್ಲಿ ಮಲ್ಲಿಗೆ ಅಗ್ರಗಣ್ಯ. ಇದರಲ್ಲಿ ಹಲವಾರು ತಳಿಗಳಿವೆ. ಆ ಪೈಕಿ ಸುವಾಸನೆ ಮಲ್ಲಿಗೆ ಪ್ರಮುಖವಾದದ್ದು. ಇದನ್ನು 'ಹಡಗಲಿ ಮಲ್ಲಿಗೆ' ಅಂತಲೂ ಕರೆಯುತ್ತಾರೆ.
ಬೆಳೆಯುವ ವಿಧಾನ
ಮಲ್ಲಿಗೆ ಇದೊಂದು ದೀರ್ಘಕಾಲಿಕ ಪುಷ್ಪ ಬೆಳೆ. ಒಮ್ಮೆ ನಾಟಿ ಮಾಡಿದರೆ, ಕನಿಷ್ಠ 20 ವರ್ಷದವರೆಗೆ ಹೂವನ್ನು ಪಡೆಯಬಹುದು. ಮೊದಲು ಜಮೀನನ್ನು ಹದಗೊಳಿಸಿದ ಬಳಿಕ 8 ್ಢ 8 ಅಡಿ ಅಂತರದಲ್ಲಿ ಗಿಡ ನಾಟಿ ಮಾಡಬೇಕು. ನಂತರ 3-4 ದಿನಕ್ಕೊಮ್ಮೆ ನೀರು ಹಾಯಿಸಬೇಕು. ಇದು ಗಿಡ ನೆಟ್ಟ 2 ವರ್ಷದ ನಂತರ ಚೆನ್ನಾಗಿ ಹೂವು ಬಿಡಲು ಪ್ರಾರಂಭಿಸುತ್ತದೆ. ಇದಕ್ಕಿಂತ ಮೊದಲೇ ಹೂ ಬಿಡುತ್ತದೆ. ಆದರೆ, ಇಳುವರಿ ಪ್ರಮಾಣ ಕಡಿಮೆ ಇರುತ್ತದೆ. ಇನ್ನು ಹೂವು ಬಿಡಿಸಲು ಆಳುಗಳು ಹೆಚ್ಚು ಬೇಕಾಗುತ್ತವೆ. ನಿತ್ಯವೂ ಹೂ ಬಿಡಿಸಬೇಕು. ಒಂದು ದಿನ ಹೂ ಬಿಡಿಸದಿದ್ದರೆ ಅವು ಹಾನಿಯಾದಂತೆ ಸರಿ. ಮಲ್ಲಿಗೆ ಕೃಷಿ ಕೈಗೊಳ್ಳಲು ಮಳೆಗಾಲದ ಆರಂಭ ಅಂದರೆ ಜೂನ್ ಪ್ರಶಸ್ತ. ಮಳೆಗಾಲದಲ್ಲಿ ಇದರ ಇಳುವರಿ ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ಹೂವು ಬಿಡುವುದಿಲ್ಲ. ಆ ಸಮಯದಲ್ಲಿ ಗಿಡವನ್ನು 2 ಅಡಿ ಬಿಟ್ಟು ಉಳಿದದ್ದನ್ನು ಕಟಾವು ಮಾಡಬೇಕು. ಚಳಿಗಾಲದ ನಂತರ ಚಿಗುರೊಡೆಯುತ್ತದೆ. ಬಳಿಕ ಹೂವು ಪ್ರಾರಂಭಿಸುತ್ತದೆ. ಈ ರೀತಿ ಪ್ರತಿ ಚಳಿಗಾಲದಲ್ಲೂ ಕಟಾವು ಮಾಡಬೇಕು. ಚೆನ್ನಾಗಿ ನಿರ್ವಹಣೆ ಮಾಡಿದರೆ ವರ್ಷಕ್ಕೆ ಎಕರೆ ಜಮೀನಲ್ಲಿ ಕನಿಷ್ಠ ರು. 2 ಲಕ್ಷ ಆದಾಯ ನಿಶ್ಚಿತ.
ಮಣ್ಣು
ಸಾಮಾನ್ಯವಾಗಿ ಮಲ್ಲಿಗೆ ಎಲ್ಲ ನಮೂನೆಯ ಮಣ್ಣಲ್ಲೂ ಬೆಳೆಯುತ್ತದೆ. ಮರಳು ಮಿಶ್ರಿತ ಕೆಂಪು ಮಣ್ಣು ಮತ್ತು ಮಸಾರೆ (ಕಲ್ಲುಮಿಶ್ರಿತ ಮಣ್ಣು) ಭೂಮಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಳುವರಿ ಬರುತ್ತದೆ.
ರೋಗ/ ಕೀಟ
ಇದಕ್ಕೆ ಪ್ರಮುಖವಾಗಿ ಮಜ್ಜಿಗೆ ರೋಗ ಮತ್ತು ಮೊಗ್ಗು ತಿನ್ನುವ ಹುಳು ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಶಿವಾನಂದನಗರದ ಶರಣಬಸವ (9164115121) ಅವರನ್ನು ಸಂಪರ್ಕಿಸಬಹುದು.
-ಮಹೇಶ್ ಅರಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


