ಕೃಷಿ-ಪರಿಸರ

ಹಲಸು

ಭವಿಷ್ಯದ ಆಹಾರದ ಬೆಳೆಯೆಂದೇ ಹಲಸನ್ನು ಕರೆಯಲಾಗುತ್ತದೆ. ಯಾಕೆಂದರೆ ಹಲಸಿನಿಂದ 300ಕ್ಕೂ ಅಧಿಕ ನಮೂನೆಯ ...

ಹಲಸು
Published On :

ಭವಿಷ್ಯದ ಆಹಾರದ ಬೆಳೆಯೆಂದೇ ಹಲಸನ್ನು ಕರೆಯಲಾಗುತ್ತದೆ. ಯಾಕೆಂದರೆ ಹಲಸಿನಿಂದ 300ಕ್ಕೂ ಅಧಿಕ ನಮೂನೆಯ ಆಹಾರ ಪದಾರ್ಥಗಳನ್ನು ತಯಾರಿಸಬಹುದು! ಇದರ ಬಗ್ಗೆ ಇತ್ತೀಚೆಗೆ ಜನರಲ್ಲಿ ಅರಿವು ಮೂಡುತ್ತಿದೆ. ಅಲ್ಲದೆ, ಮಾಂಸಕ್ಕೆ ಪರ್ಯಾಯವಾಗಿ ಹಲಸನ್ನು ಬಳಸಲಾಗುತ್ತಿದೆ. ಹಾಗಾಗಿ ಇದನ್ನು ಬೆಳೆಯುವುದರಿಂದ ಸಾಕಷ್ಟು ಲಾಭದಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಇದರ ಮತ್ತೊಂದು ವಿಶೇಷವೆಂದರೆ ಬರ ನಿರೋಧಕ ಗುಣ ಹೊಂದಿದೆ. ಹೆಚ್ಚಿನ ನಿರ್ವಹಣಾ ಕ್ರಮವಿಲ್ಲದೆ ಬೆಳೆಯುತ್ತದೆ. ಎರಡ್ಮೂರು ವರ್ಷ ನಿಯಮಿತವಾಗಿ ನೀರು, ಗೊಬ್ಬರ ಕೊಟ್ಟರೆ ಸಾಕು. ನಂತರ ನಿರ್ವಹಣೆಯ ಅಗತ್ಯವಿಲ್ಲ. ಹಣ್ಣು ಮತ್ತು ಬೀಜದಲ್ಲಿ ಸಾಕಷ್ಟು ಪ್ರಮಾಣದ ಪೋಷಕಾಂಶಗಳಿವೆ. ಹಲಸಿನ ಮೂಲ ಭಾರತ. ಇದರ ವೈಜ್ಞಾನಿಕ ಹೆಸರು ಆ್ಠಡ್ಟ್ಛಿಛ್ಠಠ್ಡಡ ಜಡಿಜ್ಠ್ಟಝಣಟಟ್ಡಡ.
ಬೆಳೆಯುವ ವಿಧಾನ
ಹಲಸಿನ ಗಿಡಗಳನ್ನು ಎರಡು ರೀತಿಯಾಗಿ ಸಸ್ಯಾಭಿವೃದ್ಧಿ ಮಾಡಲಾಗುತ್ತದೆ. ಮೊದಲನೆಯದಾಗಿ ಬೀಜದ ಮೂಲಕ. ಎರಡನೆಯದು ಕಸಿ ವಿಧಾನ. ಮೊದಲು 2್ಢ2 ಅಡಿ ಅಂತರದಲ್ಲಿ ಗುಂಡಿ ತೋಡಬೇಕು. ಬಳಿಕ ಅದನ್ನು ಮುಚ್ಚಬೇಕು. ಹೀಗೆ ಮಾಡುವುದರಿಂದ ಮಣ್ಣು ಸಡಿಲವಾಗುತ್ತದೆ. ನಂತರ ಅಗತ್ಯಕ್ಕೆ ತಕ್ಕಷ್ಟು ಆಳದಲ್ಲಿ ಗಿಡ ನೆಡಬೇಕು. ಒಂದರಿಂದ ಇನ್ನೊಂದು ಗಿಡಕ್ಕೆ ಅಂತರ 25್ಢ25 ಇದ್ದರೆ ಸಾಕು. ಜೂನ್ ತಿಂಗಳು ಗಿಡ ನೆಡಲು ಪ್ರಶಸ್ತ. ವರ್ಷದಲ್ಲಿ 2 ಬಾರಿ ಗೊಬ್ಬರ ಹಾಕಬೇಕು. ಗಿಡಕ್ಕೆ ಸಾಕಾಗುವಷ್ಟು ಮಳೆಯಾಗದಿದ್ದರೆ ನೀರು ಹಾಯಿಸಬೇಕು. ಕನಿಷ್ಠ 3 ವರ್ಷದವರೆಗೆ ನೀರು ಕೊಡಬೇಕಾಗುತ್ತದೆ. ಬಳಿಕ ನೀರು ಹಾಯಿಸಲೇಬೇಕೆಂದೇನಿಲ್ಲ. ಹಲಸಿನ ಮಧ್ಯೆ ಇತರ ಅಲ್ಪಕಾಲಿಕ ಅಂತರ ಬೆಳೆಗಳನ್ನು ಬೆಳೆಯಬಹುದು. ಗಿಡ ನೆಟ್ಟ 5 ವರ್ಷದ ಬಳಿಕ ಫಸಲು ಶುರುವಾಗುತ್ತದೆ. ಇನ್ನು ಇದರ ಎಲೆ, ತೊಗಟೆ ಬಲು ದಪ್ಪವಾಗಿರುತ್ತದೆ. ಹೀಗಾಗಿ ಇದಕ್ಕೆ ಯಾವುದೇ ರೋಗ ತಗುಲದು. ವಿಭಿನ್ನ ಮಣ್ಣು, ವಾತಾವರಣದಲ್ಲಿ ಹೊಂದಿಕೊಂಡು ಬೆಳೆಯುವಂಥ ವಿಶಿಷ್ಟ ಗುಣ ಇದಕ್ಕಿದೆ.
ಹೆಚ್ಚಿನ ಮಾಹಿತಿಗೆ ಪುತ್ತೂರು ತಾಲೂಕಿನ ಶಾಂತಿಗೂಡಿನ ಪರೀಕ್ಷಿತ ತೋಳ್ಪಾಡಿ (ಮೊ. 9740934792) ಅವರನ್ನು ಸಂಪರ್ಕಿಸಬಹುದು.


-ಮಹೇಶ್ ಅರಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.