ಪುಣ್ಯಕೋಟಿ ಪಂಡಿತ
ಭೂಮಿಗೆ ನಾವು ಒಂದು ಕಾಳು ಎಸೆದರೆ ಅದು ಸಾವಿರಾರು ಕಾಳಾಗಿ ಪರಿವರ್ತಿಸಿ ಮರಳಿ ಫಲ ನೀಡುವ ಜಗತ್ತಿನ ಏಕೈಕ...

ಭೂಮಿಗೆ ನಾವು ಒಂದು ಕಾಳು ಎಸೆದರೆ ಅದು ಸಾವಿರಾರು ಕಾಳಾಗಿ ಪರಿವರ್ತಿಸಿ ಮರಳಿ ಫಲ ನೀಡುವ ಜಗತ್ತಿನ ಏಕೈಕ ಉದ್ಯಮವೆಂದರೆ ಕೃಷಿ. ಕೃಷಿಯೇ ನನ್ನ ಧ್ಯೇಯ ವಾಕ್ಯ ಎನ್ನುತ್ತಲೇ ಅದರಲ್ಲಿ ಅದ್ವಿತೀಯ ಸಾಧನೆಗೈದವರು ಈಶ್ವರಪ್ಪ ಹಂಚಿನಾಳ.
ಬರದ ನಾಡೆಂದು ಹೆಸರಾದ ಮುಂಡರಗಿ ತಾಲೂಕಿನ ನಾಗರಹಳ್ಳಿಯ 70 ಎಕರೆ ಭೂಮಿಯಲ್ಲಿ 'ಪುಣ್ಯಕೋಟಿ ವೃಕ್ಷಧಾಮ' ನಿರ್ಮಿಸುವ ಮೂಲಕ ಕೃಷಿ ಪಂಡಿತ ಈಶ್ವರಪ್ಪ ಹಂಚಿನಾಳ ಎಲ್ಲರ ಗಮನ ಸೆಳೆದಿದ್ದಾರೆ.
ಜೀವಾಮೃತ
14 ಎಕರೆ ಮಾವು, 10 ಎಕರೆ ಚಿಕ್ಕು, 4 ಎಕರೆ ಫಾರೆಸ್ಟ್ ಪ್ಲಾಂಟೇಶನ್ಗಳೆಂದು ಕರೆಸಿಕೊಳ್ಳುವ ಹಲಸು, ನೇರಳೆ, ಗೋಂಡಂಬಿ, 20ಕ್ಕೂ ಹೆಚ್ಚು ಎಕರೆ ಕಬ್ಬು ಬೆಳೆದಿದ್ದಾರೆ. ಎಕರೆಗೆ 9.50 ಟನ್ ತಾಳೆ ತೆಳೆಯುವ ಮೂಲಕ ಅವರು ರಾಜ್ಯಮಟ್ಟದ ದಾಖಲೆ ಸ್ಥಾಪಿಸಿದ್ದಾರೆ. ಗೋಮೂತ್ರಕ್ಕೆ ಬೆಲ್ಲ- ಹಿಟ್ಟು ಬೆರೆಸಿ ಜೀವಾಂಶಗಳು ದುಪ್ಪಟ್ಟಾಗುವಂತೆ ಮಾಡಿ ಅದಕ್ಕೆ 'ಜೀವಾಮೃತ' ಎಂದು ಹೆಸರಿಟ್ಟಿದ್ದಾರೆ. ತಾವೇ ಗೊಬ್ಬರ ತಯಾರಿಸಿ, ಸಾವಯವ ಕೃಷಿ ಕೈಗೊಂಡಿದ್ದಾರೆ.
ವಿಶೇಷ ರುಚಿ
ಈಶ್ವರಪ್ಪ ಅವರ ತೋಟದ ಮಾವು, ನೇರಳೆಯಂಥ ಹಣ್ಣುಗಳಿಗೆ ವಿಶೇಷ ರುಚಿ ಇರುತ್ತದೆ. ಕಸಿ ಮೂಲಕ ವೈವಿಧ್ಯಮಯ ಹಣ್ಣುಗಳನ್ನು ಬೆಳೆದಿದ್ದಾರೆ. ಭೂಮಿಯ ತೇವಾಂಶ ಕಾಯ್ದುಕೊಳ್ಳುವ ಅಗತ್ಯ ಮನಗಂಡಿರುವ ಈಶ್ವರಪ್ಪ ಹಂಚಿನಾಳ ತಮ್ಮ ತೋಟದಲ್ಲಿ ಅರ್ಧ ಎಕರೆ ಭೂಮಿಯಲ್ಲಿ ನೀರಿನ ಬೃಹತ್ ಸಂಗ್ರಹಣೆಗಾಗಿ ಕೆರೆ ನಿರ್ಮಿಸಿ ಪಕ್ಕದ ತುಂಗಭದ್ರಾ ನದಿಯಿಂದ ನೀರು ತುಂಬಿಸುತ್ತಾರೆ.
ಗುರುತ್ವಾಕರ್ಷಣೆ ಶಕ್ತಿ
ನೀರು ನಿರ್ವಹಣೆಗಾಗಿ ಹನಿ ನೀರಾವರಿ, ನೀರು ಹರಿಸುವಿಕೆ, ಕಾರಂಜಿಯಂಥ ಮೂರು ವಿಧಗಳನ್ನು ಪಾಲಿಸುತ್ತಿದ್ದಾರೆ. ನೀರೆತ್ತಲು ವಿದ್ಯುತ್ ಬಳಸುವುದಿಲ್ಲ. ಭೂಮಿಯ ಗುರುತ್ವಾಕರ್ಷಣೆ ಶಕ್ತಿಯಿಂದಲೇ ಹೊಲದ ತುಂಬೆಲ್ಲ ನೀರು ಹರಿಯುವಂತೆ ವ್ಯವಸ್ಥೆ ಮಾಡಿದ್ದಾರೆ. ಬಹುತೇಕ ರೈತರು ತಮ್ಮ ಭೂಮಿಯಲ್ಲಿರುವ ಬದುವು ಬೆಳೆಗೆ ಯೋಗ್ಯವಾಗಿಲ್ಲ ಎನ್ನುತ್ತಾರೆ. ಹಂಚಿನಾಳ ತಮ್ಮ ತೋಟದ ಬದುವಿನುದ್ದಕ್ಕೂ ಸೀತಾಫಲ ಗಿಡಗಳನ್ನು ಬೆಳೆಸಿದ್ದಾರೆ. 70 ಎಕರೆ ತೋಟದ ಸುತ್ತಲೂ ಅರಣ್ಯ ಕೃಷಿ ಪದ್ಧತಿಯಲ್ಲಿ 4 ಸಾವಿರ ತೇಗದ ಮರಗಳನ್ನು 20 ವರ್ಷಗಳ ಹಿಂದೆಯೇ ನೆಟ್ಟು ಪೋಷಿಸಿದ್ದಾರೆ.
ವಿಳಾಸ: ಈಶ್ವರಪ್ಪ ಹಂಚಿನಾಳ, ಕೃಷಿ ಪಂಡಿತ, ಪುಣ್ಯಕೋಟಿ ವೃಕ್ಷಧಾಮ, ನಾಗರಹಳ್ಳಿ, ಮುಂಡರಗಿ ತಾ., ಗದಗ ಜಿ., ಮೊ: 9448629607.
ದೇಶ ಸಮೃದ್ಧಿ ಆಗಬೇಕಾದರೆ ಕೃಷಿಯಿಂದ ಮಾತ್ರ ಸಾಧ್ಯ. ಸಾಫ್ಟ್ವೇರ್, ಹಾರ್ಡ್ವೇರ್, ಕೈಗಾರಿಕೆಗಳಿಂದ ಸಾಧ್ಯವಿಲ್ಲ. ನಮ್ಮದು ಕೃಷಿ ಪ್ರಧಾನ ದೇಶ. ಎಲ್ಲರಿಗೂ ಉದ್ಯೋಗ ಸಿಗಬೇಕಿದ್ದರೆ ಅದು ಕೃಷಿಯಿಂದ ಮಾತ್ರ. ಬೇರೆ ಉದ್ಯೋಗದಿಂದ ನಮಗೆ ಬಹಳಷ್ಟು ಹಣ, ಇತರೆ ಸೌಲಭ್ಯ ಸಿಗಬಹುದು. ಆದರೆ, ಪರಿಶ್ರಮದಿಂದ ಕೆಲಸ ಮಾಡುವವರಿಗೆ ಕೃಷಿ ಕ್ಷೇತ್ರದಲ್ಲಿ ಸಿಗುವ ಖುಷಿ ಬೇರೆಲ್ಲೂ ಸಿಗದು.
- ಈಶ್ವರಪ್ಪ ಹಂಚಿನಾಳ, ಕೃಷಿ ಪಂಡಿತ
- ಶರಣು ಸೊಲಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


