ಜಲಧರ
ಬೆಂಗಳೂರು ಮೂಲದ ಫಾರ್ಮ್ ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್ಸ್ ಸಂಸ್ಥೆಯು ಮಳೆ...

ಬೆಂಗಳೂರು ಮೂಲದ ಫಾರ್ಮ್ ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್ಸ್ ಸಂಸ್ಥೆಯು ಮಳೆ ನೀರು ಕೊಯ್ಲು ತಂತ್ರಜ್ಞಾನ ಪರಿಚಯಿಸಲು ವಿಶೇಷ ವಾಹನ ನಿರ್ಮಿಸಿದೆ. ಈ ಮೂಲಕ ರಾಜ್ಯಾದ್ಯಂತ ಸಂಚರಿಸುತ್ತಾ ಜನರಿಗೆ ಮಳೆ ನೀರು ಕೊಯ್ಲು ಅಗತ್ಯವನ್ನು ಮನವರಿಕೆ ಮಾಡಿಕೊಡುತ್ತಿದೆ. ಮಳೆ ನೀರು ಹಿಡಿಯುವಿಕೆ, ಸಂಗ್ರಹಿಸುವಿಕೆ, ಸೋಸುವಿಕೆ ಮತ್ತು ಮರು ಬಳಕೆಯ ವಿಧಾನದ ಸರಳ ಪಾಠ ಇಲ್ಲಿದೆ.
ಅಂತರ್ಜಲಕ್ಕೆ ಪುನರುಜ್ಜೀವ
ಇದು ಕೇವಲ ನೀರು ಸಂರಕ್ಷಣೆಗೆ ಮಾತ್ರ ನೆರವಾಗುವುದಿಲ್ಲ. ಬೃಹತ್ ಪ್ರಮಾಣದ ನೀರಿನ ಬೇಡಿಕೆ ಕಡಿಮೆ ಮಾಡಲು ಸಹಕಾರಿ. ಮಳೆ ನೀರು ಕೊಯ್ಲು ಬಳಸಿ ಬತ್ತಿ ಹೋದ ಕೊಳವೆ ಬಾವಿಗಳ ಪುನಶ್ಚೇತನದ ಬಗ್ಗೆಯೂ ಅರಿವು ಮೂಡಿಸಲಾಗುತ್ತದೆ. ವಿ- ವೈರ್ ಇಂಜೆಕ್ಷನ್ ವೆಲ್ ಹೆಸರಿನ ಈ ದೇಸಿಯ ತಂತ್ರಜ್ಞಾನವು ಶುಷ್ಕ ಮತ್ತು ಬರಪೀಡಿತ ಪ್ರದೇಶಗಳಲ್ಲಿ ಅಂತರ್ಜಲ ಪುನರುಜ್ಜೀವನಗೊಳಿಸಲು ನೆರವಾಗುತ್ತದೆ.
ಸೇರ್ಪಡೆ ನಿಯಂತ್ರಣ
ಹೊಸ ಕೊಳವೆ ಬಾವಿಗಳ ಕೊರೆಯುವಿಕೆ, ಟ್ಯಾಂಕರ್ಗಳ ಮೂಲಕ ನೀರು ಪೂರೈಸುವಿಕೆ ಕಡಿಮೆ ಮಾಡುತ್ತದೆ. ಈ ತಂತ್ರಜ್ಞಾನವು ಅಂತರ್ಜಲ ಪುನಶ್ಚೇತನ, ಜಲ ಸಂವರ್ಧನೆ, ಮೇಲ್ಪದರ ಮಣ್ಣಿನ ನಷ್ಟ ಇಳಿಕೆ, ಕರಾವಳಿಯಲ್ಲಿ ಸಮುದ್ರದ ನೀರು ಸೇರ್ಪಡೆ ನಿಯಂತ್ರಣ, ಅಂತರ್ಜಲ ಮೂಲದಲ್ಲಿ ಗಡಸುತನ ಮತ್ತು ಲವಣಾಂಶ ಕಡಿಮೆ ಮಾಡಲು ನೆರವಾಗುತ್ತದೆ. ಮಳೆ ನೀರಿನಿಂದ ಕೊಳೆಯುವ ಅಂತರ್ಜಲ ಸೇರುವುದನ್ನು ನಿಯಂತ್ರಿಸುತ್ತದೆ. ಇದಕ್ಕಾಗಿ ಸೂಕ್ತ ರಂಧ್ರ ಬಲೆಗಳು, ಸೇರ್ಪಡೆ ಬಾವಿಗಳನ್ನು (ಇಂಜೆಕ್ಷನ್ ವೆಲ್) ಇರಿಸಲಾಗುತ್ತದೆ. ಇದರಿಂದ ನೀರು ಕಾಲುವೆಗಳು ಸೃಷ್ಟಿಯಾಗಿ ವಿ- ವೈರ್ ಇಂಜೆಕ್ಷನ್ ವೆಲ್ ತಂತ್ರಜ್ಞಾನದಲ್ಲಿ ಒಳಗೊಂಡಿರುವ ಸರಣಿಗಳ ಮೂಲಕ ಹೈಡ್ರಾಲಿಕ್ ಪ್ರೆಷರ್ಗೆ ಕಾರಣವಾಗುತ್ತದೆ.
ಇಂಜೆಕ್ಷನ್
ಒಂದು ವರ್ಷದಲ್ಲಿ 70 ದಿನಗಳ ಕಾಲ ಸರಾಸರಿ ಮಳೆ ವ್ಯಾಪಿಸಲಿದ್ದು, ಇದು ಪ್ರತಿ ಇಂಜೆಕ್ಷನ್ ವೆಲ್ಗೆ ಕನಿಷ್ಠ 2.1 ರಿಂದ 4 ದಶಲಕ್ಷ ಲೀಟರ್ಗಳಷ್ಟು ನೀರನ್ನು ಅಂತರ್ಜಲಕ್ಕೆ ಸೇರಿಸಲು ನೆರವಾಗುತ್ತದೆ. ಮಳೆ ನೀರಿನ ಪ್ರಮಾಣದ ಆಧಾರದ ಮೇಲೆ ಸರಿಯಾದ ಸ್ಥಳಗಳಲ್ಲಿ ಇಂಜೆಕ್ಷನ್ ಇರಿಸುವ ಮೂಲಕ ಜಲಧಾರಿ ನೀರು ಸೂಕ್ಷ್ಮ ರಂಧ್ರದ ಮೂಲಕ ಜಿನುಗುವಂತೆ ಮಾಡಲಾಗುತ್ತದೆ ಎನ್ನುತ್ತಾರೆ ಸಂಸ್ಥೆಯ ಮೈಕಲ್ ಸದಾನಂದ ಬ್ಯಾಪ್ಟಿಸ್ಟ್. ಸಂಪರ್ಕ ಮೊ. 94481-30524.
- ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


