ಮರಕ್ಕೆ ಸೊಳ್ಳೆಪರದೆ!
ಕೀಟ ಬಾಧೆ ತಡೆಗೆ ಬಹಳಷ್ಟು ರಾಸಾಯನಿಕ ಔಷಧಿ ಸಿಂಪಡಿಸಿದರೂ ಅವುಗಳ ಕಾಟ ಕಮ್ಮಿಯಾಗುತ್ತಿಲ್ಲ...

ಕೀಟ ಬಾಧೆ ತಡೆಗೆ ಬಹಳಷ್ಟು ರಾಸಾಯನಿಕ ಔಷಧಿ ಸಿಂಪಡಿಸಿದರೂ ಅವುಗಳ ಕಾಟ ಕಮ್ಮಿಯಾಗುತ್ತಿಲ್ಲ ಎಂಬುದು ಹಲವು ರೈತರ ಅಳಲು. ಕೆಲವು ಕೃಷಿಕರು ಈ ಸಮಸ್ಯೆ ಬಗ್ಗೆ ಅಲವತ್ತುಕೊಳ್ಳುತ್ತಾ ಸಾಕಪ್ಪಾ ಈ ಬೇಸಾಯದ ಸಹವಾಸ ಅನ್ನತೊಡಗಿದ್ದಾರೆ. ಆದರೆ, ಪ್ರತಿ ಸಮಸ್ಯೆಗೂ ಪರಿಹಾರ ಇರುತ್ತದೆ ಎನ್ನುವುದು ಅನುಭವಿಗಳ ಮಾತು. ಈ ಕೀಟ ಸಮಸ್ಯೆಗೆ ಚೀನಾದ ರೈತರು ಪರಿಹಾರ ಕಂಡುಕೊಂಡಿದ್ದಾರೆ. ಅದೇನಂತೀರಾ?
ಸೊಳ್ಳೆ ಪರದೆ! ಅರೆ, ಗಿಡ- ಮರಗಳಿಗೆ ಸೊಳ್ಳೆ ಪರದೆ ಹಾಕುವುದು ತಮಾಷೆ ಅಂದುಕೊಂಡೀರಾ? ಇಲ್ಲ, ಕೀಟ ಬಾಧೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೇಬೇಕು ಎಂದು ತೀರ್ಮಾನಿಸಿದ ಚೀನಾದ ಹುಂಗ್ಯಾನ್ ಜಿಲ್ಲೆಯ ರೈತರು ಸ್ಟ್ರಾಬೇರಿ ಮರಕ್ಕೆ ಸೊಳ್ಳೆ ಪರದೆ ಹಾಕಿ ಪ್ರಯೋಗ ಮಾಡಿದರು. ಅದರಲ್ಲಿ ಯಶಸ್ವಿಯೂ ಆದರು. ಇದರಿಂದ ಪರಿಸರಕ್ಕೂ ಹಾನಿಯಾಗಲ್ಲ. ಅಲ್ಲದೆ, ಕೀಟ ಕೊಂದ ಪಾಪವೂ ತಟ್ಟಲ್ಲ. ಹೆಂಗಿದೆ ಚೀನಾ ರೈತರ ಐಡಿಯಾ, ನಮ್ಮಲ್ಲೂ ಇಂಥದ್ದೊಂದು ಯೋಜನೆ ಅಳವಡಿಸಿಕೊಂಡರೆ ಚೆನ್ನಾಗಿರುತ್ತದಲ್ಲವೇ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


