ಕೃಷಿ-ಪರಿಸರ

ಹಿರೇಕಾಯಿ

ಹಿರೇಕಾಯಿ
Published On :

ತರಕಾರಿ ಬೆಳೆಗಳಲ್ಲಿ ಪ್ರಮುಖವಾದದ್ದು ಹಿರೇಕಾಯಿ. ಇದನ್ನು ನೀರಾವರಿ ಮತ್ತು ಮಳೆಯಾಶ್ರಿತವಾಗಿಯೂ ಬೆಳೆಯಬಹುದು. ಅಲ್ಪಾವಧಿ ಬೆಳೆಯಾದ ಇದಕ್ಕೆ ಸ್ಥಳೀಯ ಮಾರುಕಟ್ಟೆ ಇರುವುದರಿಂದ ಸಾಕಷ್ಟು ಲಾಭಕಾರಿಯೂ ಹೌದು. ಇದರ ವೈಜ್ಞಾನಿಕ ಹೆಸರು Trichosanthes cucumerina.

ಬೆಳೆಯುವ ವಿಧಾನ
ಜಮೀನನ್ನು ಮೊದಲು ಚೆನ್ನಾಗಿ ರಂಟೆ ಹೊಡೆದು ಹಸನು ಮಾಡಿ ಸಮತಟ್ಟುಗೊಳಿಸಬೇಕು. ಅಗತ್ಯಕ್ಕನುಗುಣವಾಗಿ ಕೊಟ್ಟಿಗೆ ಗೊಬ್ಬರ ಹಾಕಿರಬೇಕು. ಬಳಿಕ ಸಾಲಿನಿಂದ ಸಾಲಿಗೆ ಮೂರುವರೆ ಅಡಿ ಮತ್ತು ಬೀಜದಿಂದ ಬೀಜಕ್ಕೆ 2 ಅಡಿ ಅಂತರದಲ್ಲಿ ಬಿತ್ತಬೇಕು. ಜೂನ್- ಜುಲೈ ಬಿತ್ತನೆಗೆ ಪ್ರಶ್ಯಸ್ತ. ಇದಕ್ಕೆ ಸಾಕಾಗುವಷ್ಟು ಮಳೆಯಾಗದಿದ್ದರೆ ನೀರು ಹಾಯಿಸಬೇಕು. ಮಣ್ಣಿನ ತೇವಾಂಶಕ್ಕನುಗುಣವಾಗಿ ನೀರು ಕೊಡಬೇಕು. ಬೀಜ ಬಿತ್ತಿದ 20 ದಿನಗಳ ಬಳಿಕ ಪ್ರತಿ ಸಾಲಿನಲ್ಲಿ 6 ಅಡಿಗೊಂದರಂತೆ ಗೂಟ ನೆಡಬೇಕು. ಅದರ ತುದಿಗೆ ತಂತಿ ಕಟ್ಟಿ ಪ್ರತಿ ಗೂಟಕ್ಕೂ ಸಂಪರ್ಕ ಕಲ್ಪಿಸಬೇಕು. ಆ ತಂತಿಗೆ ಹಿರೇ ಬಳ್ಳಿಯನ್ನು ದಾರ ಅಥವಾ ಹುರಿಯ ಮೂಲಕ ಕಟ್ಟಬೇಕು. ಹೀಗೆ ಮಾಡುವುದರಿಂದ ಬಳ್ಳಿ ಸೊಂಪಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಬಿತ್ತಿದ 40- 45 ದಿನಕ್ಕೆ ಹೂವು, ಹೀಚು ಬಿಡಲು ಶುರುಮಾಡುತ್ತದೆ. ಮಾರುಕಟ್ಟೆ ನೋಡಿಕೊಂಡು ಹಿರೇಕಾಯಿ ಕಟಾವು ಮಾಡಿ ಮಾರಾಟ ಮಾಡಬೇಕು.
ರೋಗಗಳು
ಇದಕ್ಕೆ ಥ್ರಿಪ್ಸ್, ಎಲೆ ಮುಟುರು ರೋಗ, ಎಲೆಚುಕ್ಕೆ ರೋಗ, ಕಾಯಿಕೊರಕ ಪ್ರಮುಖವಾಗಿ ಬರುವ ರೋಗಗಳು.
ತಳಿಗಳು
ನಾಗಾ, ಕೌಮುದಿ, ಬೇಬಿ ಸೇರಿದಂತೆ ಹಲವು ತಳಿಗಳು ಬಳಕೆಯಲ್ಲಿವೆ.
ಮಣ್ಣು
ಮರಳು ಮಿಶ್ರಿತ ಕೆಂಪು ಮಣ್ಣು, ಕಪ್ಪು ಮಣ್ಣು ಮಸಾರೆ ಜಮೀನಲ್ಲೂ ಹೀರೆಕಾಯಿ ಚೆನ್ನಾಗಿ ಬೆಳೆಯುತ್ತದೆ. ಹೆಚ್ಚಿನ ಮಾಹಿತಿಗೆ ಸಂಡೂರು ತಾಲೂಕಿನ ಉಪ್ಪಾರಹಳ್ಳಿಯ ನಾರಾಯಣಸ್ವಾಮಿ(9008552061) ಅವರನ್ನು ಸಂಪರ್ಕಿಸಬಹುದು.


-ಮಹೇಶ್ ಅರಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.