ಹೆಬ್ಬೇವು

ಇದು ಅರಣ್ಯಾಧಾರಿತ ಮತ್ತು ತುಂಬಾ ವೇಗವಾಗಿ ಬೆಳೆಯುವ ಮರ. ವಾಣಿಜ್ಯ ಬೆಳೆಯಾಗಿ ಚಾಲ್ತಿಗೆ ಬರುತ್ತಿದೆ. ಇದು ಸಾಮಾನ್ಯವಾಗಿ ಕಡಿಮೆ ಮಳೆ ಬೀಳುವ ಪ್ರದೇಶ ಮತ್ತು ಹೆಚ್ಚು ಬಿಸಿಲಿನ ವಾತಾವರಣದಲ್ಲೂ ಚೆನ್ನಾಗಿ ಬೆಳೆಯುತ್ತದೆ. ಇದರ ವೈಜ್ಞಾನಿಕ ಹೆಸರು ಂಜಟ್ಝಛ ಛಣಜಜಛ್ಠಝ್ಛ.
ಬೆಳೆಯುವ ವಿಧಾನ
ಹೆಬ್ಬೇವನ್ನು ಜಮೀನಿನಲ್ಲಿ ಪೂರ್ಣ ಪ್ರಮಾಣದ ಬೆಳೆಯಾಗಿ ಅಥವಾ ಬದುವಿನಲ್ಲಿ ಬೆಳೆಯಬಹುದು. 10್ಢ12 ಅಡಿ ಅಂತರದಲ್ಲಿ ಗಿಡ ನಾಟಿ ಮಾಡಬೇಕು. ಜೂನ್- ಜುಲೈ ಗಿಡ ನಾಟಿಗೆ ಸೂಕ್ತ. ಎಕರೆಗೆ 500ರಿಂದ 600 ಗಿಡಗಳು ಬೇಕಾಗುತ್ತವೆ. ಮೂರ್ನಾಲ್ಕು ತಿಂಗಳಿನ ಗಿಡವನ್ನು ನೆಡಬೇಕು. ಬೇಸಿಗೆ ಸಮಯದಲ್ಲಿ 18- 20 ದಿನಕ್ಕೊಮ್ಮೆ ನೀರು ಹಾಯಿಸಬೇಕು. ಹೆಚ್ಚಿನ ನಿಯಂತ್ರಣ ಕ್ರಮದ ಅವಶ್ಯಕತೆ ಇಲ್ಲ. ಹೆಬ್ಬೇವಿನ ಮಧ್ಯೆ ಅಲ್ಪಕಾಲಿಕ ಬೆಳೆಗಳನ್ನು ಬೆಳೆಯಬಹುದು.
ಹೆಬ್ಬೇವು ನಾಟಿ ಮಾಡಿದ ವರ್ಷದೊಳಗೆ 20 ಅಡಿಯಷ್ಟು ಎತ್ತರ ಬೆಳೆಯುತ್ತದೆ. 8- 10 ವರ್ಷದ ಮರವು ಕಟಾವಿಗೆ ಯೋಗ್ಯ. ಆಗ 70ರಿಂದ 80 ಅಡಿ ಎತ್ತರ ಬೆಳೆದಿರುತ್ತದೆ. ಇದು ಎಲ್ಲ ನಮೂನೆಯ ಮಣ್ಣಲ್ಲಿ ಬೆಳೆಯುತ್ತದೆ. ಇದರ ಸೊಪ್ಪು ಕಹಿಯಾಗಿರುವುದರಿಂದ ರೋಗ ಕಾಟ ಇಲ್ಲ. ಅಲ್ಲದೆ, ಇದರ ಸೊಪ್ಪು ಜಾನುವಾರುಗಳಿಗೆ ಉತ್ತಮ ಆಹಾರ.
ಉಪಯೋಗ
ಹೆಬ್ಬೇವನ್ನು ಮುಖ್ಯವಾಗಿ ಹಡಗು ತಯಾರಿಕೆಯಲ್ಲಿ ಬಳಸುತ್ತಾರೆ. ಅಲ್ಲದೆ, ಬೆಂಕಿಪೊಟ್ಟಣ, ಪ್ಲೈವುಡ್ ತಯಾರಿಸಲು ಉಪಯೋಗಿಸುತ್ತಾರೆ.
ಪ್ರೋತ್ಸಾಹವಿಲ್ಲ
ಹೆಬ್ಬೇವನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲು ರಾಜ್ಯದಲ್ಲಿ ಸಾಕಷ್ಟು ಅವಕಾಶಗಳಿವೆ. ಆದರೂ ಸರ್ಕಾರ ಪ್ರೋತ್ಸಾಹಿಸುತ್ತಿಲ್ಲ ಎಂಬುದು ರೈತರ ಅಳಲು. ಅರಣ್ಯ ಇಲಾಖೆ ಈ ಕುರಿತು ಲಕ್ಷ್ಯವಹಿಸಿ ಹೆಬ್ಬೇವು ಬೆಳೆಯಲು ಪ್ರೋತ್ಸಾಹ ನೀಡಬೇಕಿದೆ. ಹೆಚ್ಚಿನ ಮಾಹಿತಿಗಾಗಿ ಹರಪನಹಳ್ಳಿ ತಾಲೂಕಿನ ಇ. ಬೇವಿನಹಳ್ಳಿಯ ರೈತ ಶಿವಯೋಗಿ(9008279337) ಅವರನ್ನು ಸಂಪರ್ಕಿಸಬಹುದು.
ಮಹೇಶ್ ಅರಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


