ಕೃಷಿ-ಪರಿಸರ

ಅಶ್ವಗಂಧ

ದಕ್ಷಿಣ ಭಾರತದಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಶ್ವಗಂಧ ಔಷಧ ಬೆಳೆಯನ್ನು ರಾಜ್ಯದಲ್ಲಿ ಬೆಳೆಯಲಾಗುತ್ತಿದೆ...

ಅಶ್ವಗಂಧ
Published On :

ದಕ್ಷಿಣ ಭಾರತದಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಶ್ವಗಂಧ ಔಷಧ ಬೆಳೆಯನ್ನು ರಾಜ್ಯದಲ್ಲಿ ಬೆಳೆಯಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಗದಗ, ಕೊಪ್ಪಳ ಜಿಲ್ಲೆಯಲ್ಲೇ ಹೆಚ್ಚು ಬೆಳೆಯುತ್ತಾರೆ. ಕಾರಣ ಅಶ್ವಗಂಧಕ್ಕೆ ಪೂರಕ ಮಣ್ಣು, ವಾತಾವರಣ ಆ ಭಾಗದಲ್ಲಿರುವುದು. ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯುವುದರಿಂದ ಇದನ್ನು ಬರನಿರೋಧಕ ಎನ್ನುತ್ತಾರೆ. ಅಶ್ವಗಂಧಕ್ಕೆ ಬೇಡಿಕೆ ಹೆಚ್ಚುತ್ತಿರುವುದರಿಂದ ವಾಣಿಜ್ಯ ಬೆಳೆಯಾಗಿ ಬೆಳೆದು ಲಾಭ ಗಳಿಸಬಹುದು. ಅಶ್ವಗಂಧದ ವೈಜ್ಞಾನಿಕ ಹೆಸರು ಗ್ಝಿಝಿಛಟ್ಝಿಛ ಡ್ಟಟಟ್ಝಿಜಿಜ್ಠಛ.
ಬೆಳೆಯುವ ವಿಧಾನ
ಸಾಲಿನಿಂದ ಸಾಲಿಗೆ 10 ಇಂಚು ಬೀಜದಿಂದ 1-2 ಇಂಚು ಅಂತರವಿರುವಂತೆ ಕೂರಿಗೆಯಿಂದ ಬೀಜ ಬಿತ್ತಬೇಕು. ತಿಂಗಳಾದ ಬಳಿಕ ಒಮ್ಮೆ ಕಳೆ ತೆಗೆದರೆ ಆಯಿತು. ಹೆಚ್ಚಿನ ನಿರ್ವಹಣೆಯ ಅವಶ್ಯ ಇಲ್ಲ. ಅಂದರೆ ಗೊಬ್ಬರ ಹಾಕಬೇಕು, ನೀರು ಹಾಯಿಸಬೇಕು ಎಂಬ ಪ್ರಮೇಯವೇ ಬಾರದು. ಯಾಕೆಂದರೆ ಕಡಿಮೆ ನೀರಲ್ಲೂ ಉತ್ತಮವಾಗಿ ಬೆಳೆಯುತ್ತದೆ. ಬಿತ್ತಿದ 4 ತಿಂಗಳಿಗೆ ಕಟಾವಿಗೆ ಬರುತ್ತದೆ. ಇದರ ಎಲೆಗಳು ಕಹಿ ಆಗಿರುವುದರಿಂದ ಜಾನುವಾರುಗಳು ಅದನ್ನು ತಿನ್ನುವುದಿಲ್ಲ. ಜುಲೈ ಅಂತ್ಯ ಆಗಸ್ಟ್ ಮೊದಲ ವಾರ ಬಿತ್ತನೆಗೆ ಸಕಾಲ. ಕಪ್ಪು ಮಣ್ಣು ಇದಕ್ಕೆ ಸೂಕ್ತ. ರೋಗ, ಕೀಟಬಾಧೆ ಕಾಟ ಇದಕ್ಕೆ ತಗುಲದು.
ತಳಿಗಳು
ಜವಾಹರ್, ತೋಷಿತಾ ಮತ್ತು ನಾದೋರಿ ಎಂಬ ತಳಿಯ ಅಶ್ವಗಂಧವನ್ನು ರಾಜ್ಯದಲ್ಲಿ ಹೆಚ್ಚು ಬೆಳೆಯಲಾಗುತ್ತದೆ.
ಮಾರುಕಟ್ಟೆ
ಅಶ್ವಗಂಧದ ಬೇರು ಕೊಳ್ಳಲು ಸಾಕಷ್ಟು ಔಷಧ ಕಂಪನಿಗಳು ಮುಂದೆ ಬರುತ್ತಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ಅಶ್ವಗಂಧ ಬೇರಿಗೆ ಭಾರಿ ಬೇಡಿಕೆ ಇದೆ. ಅಲ್ಲದೆ, ಹಲವು ಕಂಪನಿಗಳು ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಮೊದಲೇ ಬೆಲೆ ನಿಗದಿ ಮಾಡಿಕೊಂಡು ಅಶ್ವಗಂಧ ಬೇರನ್ನು ಕೊಳ್ಳುತ್ತಿವೆ. ಹೆಚ್ಚಿನ ಮಾಹಿತಿಗೆ ರೋಣ ತಾಲೂಕಿನ ಬೆಳವಣಕಿ ಗ್ರಾಮದ ರಾಜೇಂದ್ರ ಶಿರೋಳ (ಮೊ. 9448934730) ಅವರನ್ನು ಸಂಪರ್ಕಿಸಹುದು.


ಮಹೇಶ್ ಅರಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.