ಕೃಷಿ-ಪರಿಸರ

ಏಲಕ್ಕಿ

ಏಲಕ್ಕಿ
Published On :

ಮಸಾಲೆಯ ರಾಣಿ ಎಂದೇ ಏಲಕ್ಕಿ ಜನಜನಿತ. ಗುಣಮಟ್ಟದ ಏಲಕ್ಕಿಗೆ ಭಾರತ ಪ್ರಸಿದ್ಧಿ. ಹಾಗಾಗಿಯೇ ಭಾರತದ ಏಲಕ್ಕಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಲು ಬೇಡಿಕೆ. ದೇಶದಲ್ಲಿ ಕೇರಳ ಬಿಟ್ಟರೆ ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಇದನ್ನು ಬೆಳೆಯುತ್ತಾರೆ. ಏಲಕ್ಕಿ ಬೆಳೆಗೆ ಬಿಸಿಲು ಎಂದರೆ ಆಗದು. ಏಲಕ್ಕಿಯ ವೈಜ್ಞಾನಿಕ ಹೆಸರು Elettaria cardamomum Maton.
ಬೆಳೆಯುವ ವಿಧಾನ
ಮೊದಲು ಒಂದೂವರೆ ಆಳ ಅಷ್ಟೇ ಉದ್ದಗಲದ ಗುಂಡಿ ತೊಡಬೇಕು. ಬಳಿಕ ಅದನ್ನು ಉತ್ತಮ ಮಣ್ಣು, ಗೊಬ್ಬರ ಹಾಕಿ ಮುಚ್ಚಬೇಕು. ನಂತರ ಗುಂಡಿಯ ಮೇಲ್ಭಾಗದಲ್ಲೇ ಏಲಕ್ಕಿ ಗಿಡವನ್ನು ನಾಟಿ ಮಾಡಬೇಕು. ಗಿಡದಿಂದ ಗಿಡಕ್ಕೆ ಸಾಲಿನಿಂದ 9 ್ಢ 9 ಅಂತರ ಇರಬೇಕು. ಮಲೆನಾಡಿನಲ್ಲಿ ಅಡಕೆ ತೋಟದ ಮಧ್ಯೆ ಇದನ್ನು ಅಂತರ ಬೆಳೆಯಾಗಿ ಹೆಚ್ಚು ಬೆಳೆಯುತ್ತಾರೆ. ಯಾಕೆಂದರೆ ಏಲಕ್ಕಿ ಗಿಡಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೆರಳು ಸಿಗುತ್ತದೆ. ಇನ್ನು ಅಡಕೆ ಮರಕ್ಕೆ ನೀರುಣಿಸುವಾಗ ಇದಕ್ಕೂ ಹಾಯಿಸಿದರೆ ಆಯಿತು. ವರ್ಷಕ್ಕೊಮ್ಮೆ ಗೊಬ್ಬರ ನೀಡಬೇಕು. ಗಿಡ ನೆಟ್ಟ 2ನೇ ವರ್ಷದಿಂದ ಫಸಲು ನೀಡಲಾರಂಭಿಸುತ್ತದೆ. 3ನೇ ವರ್ಷದಿಂದ ಉತ್ತಮ ಫಸಲು ನೀಡುತ್ತದೆ.
ತಳಿಗಳು
ನಿಲ್ಯಾಣಿ, ಸಕಲೇಶಪುರ ಗ್ರೀನ್, ಮೂಡಿಗೆರೆ, ಎನ್‌ಸಿಸಿ- 200 ಮತ್ತು ಎಂಸಿಸಿ 12, 16, 40 ಇವು ರಾಜ್ಯದಲ್ಲಿ ಹೆಚ್ಚು ಬಳಕೆಯಲ್ಲಿ ತಳಿಗಳಾಗಿವೆ.
ಮಣ್ಣು
ಕಪ್ಪು ಮತ್ತು ಕೆಂಪು ಮಣ್ಣು ಏಲಕ್ಕಿ ಬೆಳೆಯಲು ಉತ್ತಮ. ಸಾವಯವ ಮತ್ತು ಪೌಷ್ಟಿಕಾಂಶ ಅಂಶ ಮಣ್ಣಿನಲ್ಲಿ ಹೆಚ್ಚು ಇರಬೇಕು. ವಾತಾವರಣ ತಂಪಿನಿಂದ ಕೂಡಿರಬೇಕು. 10ರಿಂದ 30 ಸೆಲ್ಸಿಯಸ್ ಒಳಗೆ ಉಷ್ಣಾಂಶವಿದ್ದರೆ ಒಳಿತು.
ರೋಗಗಳು
ಇದಕ್ಕೆ ಮುಖ್ಯವಾಗಿ ಕಾಂಡಕೊರಕ ಮತ್ತು ಎಲೆಚುಕ್ಕಿ ರೋಗ ಬರಬಹುದು. ಹೆಚ್ಚಿನ ಮಾಹಿತಿಗಾಗಿ ಸಾಗರ ತಾಲೂಕಿನ ಕಾನುಗೋಡು ಗ್ರಾಮದ ರಾಘವೇಂದ್ರ (9481091299) ಅವರನ್ನು ಸಂಪರ್ಕಿಸಬಹುದು.

ಮಹೇಶ್ ಅರಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.